Beauty Tips: ನಿಮ್ಮ ಕಣ್ಣಿನ ರಪ್ಪೆ ಆಕರ್ಷಕವಾಗಿ ಕಾಣಲು ಇಲ್ಲಿದೆ ಸಲಹೆ
ಪ್ರತಿಯೊಂದು ಹೆಣ್ಣಿನ ಸೌಂದರ್ಯದಲ್ಲಿ ಆಕೆಯ ಕಣ್ಣು ಪ್ರಮುಖ ಆಕರ್ಷಣೆಯಾಗಿದೆ. ನೀಳ ಹಾಗೂ ಸುಂದರವಾದ ಆಕರ್ಷಕ ಕಣ್ಣಿನ ರಪ್ಪೆಯನ್ನು ನೀವು ಹೊಂದಲು ಬಯಸಿದರೆ ಈ ಕೆಳಗಿನ ಸಲಹೆಯನ್ನು ಪಾಲಿಸಿ.
ಪ್ರತಿಯೊಂದು ಹೆಣ್ಣಿನ ಸೌಂದರ್ಯದಲ್ಲಿ ಆಕೆಯ ಕಣ್ಣು ಪ್ರಮುಖ ಆಕರ್ಷಣೆಯಾಗಿದೆ. ಪ್ರತಿ ಹೆಣ್ಣು ಕೂಡ ಮುಖದ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾಳೆ. ಆದ್ದರಿಂದ ನೀಳ ಹಾಗೂ ಸುಂದರವಾದ ಆಕರ್ಷಕ ಕಣ್ಣಿನ ರಪ್ಪೆಯನ್ನು ನೀವು ಹೊಂದಲು ಬಯಸಿದರೆ ಈ ಕೆಳಗಿನ ಸಲಹೆಯನ್ನು ಪಾಲಿಸಿ.
1. ಆಗಾಗ ನಿಮ್ಮ ಕಣ್ಣುಗಳನ್ನು ಉಜ್ಜುವ ಅಭ್ಯಾಸ ಇಟ್ಟುಕೊಳ್ಳಬೇಡಿ(Don’t rub your eyes):
ಆಗಾಗ ಕಣ್ಣುಗಳನ್ನು ಉಜ್ಜಿಕೊಳ್ಳುವುದು ನಿಮ್ಮ ಕಣ್ಣಿನ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ನಿಮ್ಮ ಕಣ್ಣಿನ ರೆಪ್ಪೆಯ ಮೇಲೆ ಪರಿಣಾಮ ಬೀರುತ್ತದೆ. ರೆಪ್ಪೆಯ ಕೂದಲುಗಳು ಉದುರುವ ಸಾಧ್ಯತೆ ಹೆಚ್ಚಿದೆ. ನೀವು ನಿಮ್ಮ ಕಣ್ಣುರೆಪ್ಪೆಗಳನ್ನು ಮಸಾಜ್ ಮಾಡಲು ಬಯಸಿದರೆ, ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಕಣ್ಣುರೆಪ್ಪೆಗಳ ಸುತ್ತಲಿನ ಭಾಗವನ್ನು ನಿಧಾನವಾಗಿ ಮಸಾಜ್ ಮಾಡಿ.
2. ವಾಟರ್ ಫ್ರೂಫ್ ಮಸ್ಕರಾ ಬಳಸಬೇಡಿ(Waterproof mascara):
ವಾಟರ್ ಫ್ರೂಫ್ ಮಸ್ಕರಾಗಳು ಕಣ್ಣಿಗೆ ಹಚ್ಚಿರುವ ಮಸ್ಕರಾವನ್ನು ದೀರ್ಘಕಾಲದ ವರೆಗೆ ಉಳಿಯುವಂತೆ ಮಾಡುತ್ತದೆ. ಆದರೆ ಇದರಲ್ಲಿ ಸಾಕಷ್ಟು ಕೆಮಿಕಲ್ ಗಳನ್ನು ಬಳಸುವುದರಿಂದ ನಿಮ್ಮ ಕಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಜೊತೆಗೆ ನಿಮ್ಮ ಕಣ್ಣಿನ ರೆಪ್ಪೆಗಳು ಉದುರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಆದಷ್ಟು ವಾಟರ್ ಫ್ರೂಫ್ ಮಸ್ಕರಾ ಬಳಸುವುದನ್ನು ಕಡಿಮೆ ಮಾಡಿ. ಕೆಲವ ವಿಶೇಷ ದಿನಗಳಲ್ಲಿ ಮಾತ್ರ ಬಳಸಿ.
3. ಸ್ವಚ್ಚತೆ(Cleaning):
ನೀವೂ ಪ್ರತಿದಿನ ಹೊರಗಡೆ ಹೋಗುವಾಗ ಸಾಕಷ್ಟು ಸೌಂದರ್ಯ ವರ್ಧಕವನ್ನು ಬಳಸುತ್ತೀರಿ. ಈ ಸೌಂದರ್ಯ ವರ್ಧಕಗಳಲ್ಲಿ ಅತಿಯಾದ ಕೆಮಿಕಲ್ ಬಳಸುವುದರಿಂದ, ನೀವೂ ಪ್ರತಿ ದಿನ ದಿನದ ಅಂತ್ಯದಲ್ಲಿ ಮೇಕ್ ಅಪ್ ಮುಖದಿಂದ ಸಂಪೂರ್ಣವಾಗಿ ಸ್ವಚ್ಚವಾಗಿ ತೆಗೆಯಿರಿ. ವಿಶೇಷವಾಗಿ ನಿಮ್ಮ ಕಣ್ಣುರೆಪ್ಪೆಗಳಿಗೆ ಮಸಾಜ್ ಮಾಡುವಂತೆಯೇ, ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಅಥವಾ ತೈಲ ಆಧಾರಿತ ಕ್ಲೀನರ್ ಬಳಸಿ ನಿಧಾನವಾಗಿ ಮಸಾಜ್ ಮಾಡಿ ತೆಗೆಯಿರಿ.
4. ಎಣ್ಣೆಯನ್ನು ಹಚ್ಚಿ(Oil):
ನಿಮ್ಮ ಚರ್ಮ ಹಾಗೂ ಕೂದಲಿನ ಪೋಷಣೆಗೆ ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಮುಂತಾದವುಗಳು ತುಂಬಾ ಒಳ್ಳೆಯದು. ಆದ್ದರಿಂದ ನಿಮ್ಮ ಕಣ್ಣಿನ ರೆಪ್ಪೆಯ ಪೋಷಣೆಗಾಗಿ ಸ್ವಚ್ಛವಾದ ಮಸ್ಕರಾ ಬ್ರಷ್ ತೆಗೆದುಕೊಂಡು ಬಾದಾಮಿ ಎಣ್ಣೆ ಅಥವಾ ಕ್ಯಾಸ್ಟರ್ ಆಯಿಲ್, ಕೊಬ್ಬರಿ ಎಣ್ಣೆಯನ್ನು ಪ್ರತಿ ದಿನ ರಾತ್ರಿ ಮಲಗುವ ಹಚ್ಚಿ ಮಲಗಿ. ಪ್ರತಿ ದಿನ ಹೀಗೆ ಮಾಡುವುದರಿಂದ ಸುಂದರವಾದ ಆಕರ್ಷಕ ರೆಪ್ಪೆಗಳನ್ನು ಪಡೆಯಬಹುದು.
ಇದನ್ನು ಓದಿ: ಅನಾನಸ್ ಹಣ್ಣಿನ ಮೇಲಿನ ಎಲೆಗಳನ್ನು ಎಸೆಯುವ ಮುನ್ನ ಯೋಚಿಸಿ, ಇಲ್ಲಿದೆ ಉಪಯೋಗಿಸುವ ಬಗೆ
5. ಸೀರಮ್(Serum):
ಸೀರಮ್ ನಿಮ್ಮ ಕಣ್ಣಿನ ರೆಪ್ಪೆಗಳಿಗೆ ತುಂಬಾ ಒಳ್ಳೆಯದು, ಜೊತೆಗೆ ಇದರ ಬೆಲೆಯು ಸ್ವಲ್ಪ ಜಾಸ್ತಿಯೇ ಇರುತ್ತದೆ. ನೀವು ನಿಮ್ಮ ಕಣ್ಣಿನ ರೆಪ್ಪೆಗಳು ಆರೋಗ್ಯವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ನೀವು ಪ್ರತಿ ದಿನ ಇದನ್ನು ಬಳಸಬಹುದು. ಜೊತೆಗೆ ಅದ್ಭುತ ಫಲಿತಾಂಶವನ್ನು ಪಡೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:04 pm, Sat, 3 December 22