Pineapple Crowns: ಅನಾನಸ್ ಹಣ್ಣಿನ ಮೇಲಿನ ಎಲೆಗಳನ್ನು ಎಸೆಯುವ ಮುನ್ನ ಯೋಚಿಸಿ, ಇಲ್ಲಿದೆ ಉಪಯೋಗಿಸುವ ಬಗೆ
ಪ್ರತಿ ಬಾರಿ ಹಣ್ಣು ಕತ್ತರಿಸುವಾಗ ಅದರ ಮೇಲಿನ ಎಲೆಗಳನ್ನು ತಿಪ್ಪೆಗೆ ಬಿಸಾಕುತ್ತೀರಾ? ಹಾಗಿದ್ದರೆ ಇನ್ನು ಮುಂದೆ ಈ ಅಭ್ಯಾಸವನ್ನು ಬಿಟ್ಟು ಬಿಡಿ. ಅನಾನಸ್ ಹಣ್ಣಿನ ಮೇಲಿನ ಎಲೆಗಳ ಹಿಂಡನ್ನು ಎಸೆಯುವ ಮುನ್ನ ಯೋಚಿಸಿ.
ಅನಾನಸ್ ಹಣ್ಣು(Pineapples) ಮಾಗಿದಾಗ ಅದರ ಸುವಾಸನೆಯೇ ಅದ್ಭುತವಾಗಿರುತ್ತದೆ. ಅದರ ಸುವಾಸನೆಯಿಂದಲೇ ಪ್ರತಿಯೊಬ್ಬರಿಗೂ ತಿನ್ನಬೇಕು ಎಂಬ ಆಸೆ ಆಗುವುದಂತೂ ನಿಜ. ಅದರ ರುಚಿಯೂ ಕೂಡ ಅಷ್ಟೇ ಒಳ್ಳೆದಿರುವುದ್ದರಿಂದ ಸಾಕಷ್ಟು ಜನರು ಈ ಹಣ್ಣನ್ನು ಇಷ್ಟ ಪಡುತ್ತಾರೆ. ನಿಮಗೂ ಕೂಡ ಅನಾನಸ್ ಹಣ್ಣು ತುಂಬಾ ಇಷ್ಟವೇ? ಇಷ್ಟವಾಗಿದ್ದರೆ ನೀವೂ ಕೂಡ ಈ ಹಣ್ಣನ್ನು ಖರೀದಿಸಿ ತಿನ್ನುವುದನ್ನು ಖಚಿತ. ಆದರೆ ಪ್ರತಿ ಬಾರಿ ಹಣ್ಣು ಕತ್ತರಿಸುವಾಗ ಅದರ ಮೇಲಿನ ಎಲೆಗಳನ್ನು ತಿಪ್ಪೆಗೆ ಬಿಸಾಕುತ್ತೀರಾ? ಹಾಗಿದ್ದರೆ ಇನ್ನು ಮುಂದೆ ಈ ಅಭ್ಯಾಸವನ್ನು ಬಿಟ್ಟು ಬಿಡಿ. ಅನಾನಸ್ ಹಣ್ಣಿನ ಮೇಲಿನ ಎಲೆಗಳ ಹಿಂಡನ್ನು ಎಸೆಯುವ ಮುನ್ನ ಯೋಚಿಸಿ, ಇದರಿಂದ ಪ್ರಯೋಜನ ಎನಿದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಈ ಅನಾನಸ್ ಹಣ್ಣಿನ ಸಸ್ಯವು ದಕ್ಷಿಣ ಅಮೆರಿಕಾದಲ್ಲಿ ಮೊದಲು ಬೆಳೆಸಲಾಗಿತ್ತು ಎಂದು ಹೇಳಲಾಗುತ್ತದೆ. ಕಾಲಕ್ರಮೇಣ ಪ್ರಪಂಚದಾದ್ಯಂತ ಈ ಸಸ್ಯವನ್ನು ಬೆಳೆಸಲಾಯಿತು. ಆದರೆ ಈಗ ಪ್ರಪಂಚದ ಎಲ್ಲಾ ಕಡೆಗಳಲ್ಲಿಯೂ ಇದು ಅತ್ಯಂತ ಜನಪ್ರಿಯವಾಗಿದೆ.
ಅನಾನಸ್ ಹಣ್ಣಿನ ಮೇಲಿರುವ ಎಲೆಗಳನ್ನು ಎನು ಮಾಡಬೇಕು? ಮೊದಲಿಗೆ ನೀವು ತಾಜಾ ಅನಾನಸ್ ಹಣ್ಣು ತೆಗೆದುಕೊಂಡು ಇದರ ಮೇಲಿನ ಎಲೆಗಳ ಹಿಂಡನ್ನು ಹಣ್ಣಿನ ಬುಡ ಭಾಗದಿಂದ ಕತ್ತರಿಸಿ ತೆಗೆಯಿರಿ. ಆದರೆ ಈ ಬಾರಿ ತಿಪ್ಪೆಗೆ ಎಸೆಯದಿರಿ ಬದಲಾಗಿ ಅದರಿಂದ ಆಗುವ ಪ್ರಯೋಜನವೇನು ತಿಳಿದುಕೊಳ್ಳಿ. ಇದಕ್ಕಾಗಿ ನೀವೂ ಮಾಡಬೇಕಾಗಿರುವುದು ಇಷ್ಟೇ, ನೀವೂ ಈಗಾಗಲೇ ತೆಗೆದುಕೊಂಡ ಹಣ್ಣಿನ ಮೇಲಿನ ಎಲೆಗಳ ಹಿಂಡಿನ ಕೆಲವು ಒಣಗಿದ ಎಲೆಗಳನ್ನು ಕಿತ್ತು ತೆಗೆಯಿರಿ. ನಂತರ ಉಳಿದ ಎಲೆಗಳನ್ನು 2 ದಿನಗಳವರೆಗೆ ಹಾಗೆಯೇ ಬಿಡಿ.
ಮುಂದಿನ ಹಂತಕ್ಕಾಗಿ ಒಂದು ಮಣ್ಣಿನ ಮಡಕೆ ಅಥವಾ ಗಿಡ ನೆಡುವ ಚಟ್ಟಿ(Pot) ತೆಗೆದುಕೊಳ್ಳಿ. ನೀವೂ ಸಾಮಾನ್ಯವಾಗಿ ಗಿಡ ನೆಡಲು ಹಾಕುವ ಮಣ್ಣನ್ನು ಹಾಕಿ ಮತ್ತು ಈಗಾಗಲೇ ತೆಗೆದಿಟ್ಟ ಅನಾನಸ್ ಹಣ್ಣಿನ ಮೇಲಿರುವ ಎಲೆಗಳ ಹಿಂಡನ್ನು ನೆಡಿ. ಹೀಗೆ ಪ್ರತಿ 4-5 ದಿನಗಳಿಗೊಮ್ಮೆ ನೀರು ಹಾಕಿ. ಜಾಸ್ತಿ ನೀರು ಹಾಕಿದರೆ ಕೊಳೆತು ಹೋಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಮಧ್ಯಮ ಪ್ರಮಾಣದಲ್ಲಿ ನೀರು ಹಾಕಿ.
ಇದನ್ನು ಓದಿ: ನಿಮ್ಮ ಮನೆಯಲ್ಲಿ ಜಿರಳೆ, ಇರುವೆಗಳ ಕಾಟವೇ? ಈ ಮನೆಮದ್ದುಗಳನ್ನು ಬಳಸಿ ಸುಲಭವಾಗಿ ಅವುಗಳನ್ನು ಓಡಿಸಿ
ಸ್ವಲ್ಪ ದಿನಗಳ ನಂತರ, ಎಲೆಗಳು ಹೊರಕ್ಕೆ ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಒಂದು ದಿನ ಸಸ್ಯದ ಮಧ್ಯದಿಂದ ಕಾಂಡವು ಬೆಳೆಯುತ್ತಿರುವುದನ್ನು ನೀವು ಗಮನಿಸಬಹುದು. ಮುಂದೆ ಹೊಸ ಅನಾನಸ್ ಬೆಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ನೀವು ಮನೆಯಲ್ಲಿಯೇ ಅನಾನಸ್ ಸಸ್ಯವನ್ನು ಬೆಳೆಸಲು ಬಯಸಿದರೆ ಈ ಟಿಪ್ಸ್ ಒಮ್ಮೆ ಪ್ರಯತ್ನಿಸಿ ನೋಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: