AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Cotton Candy Day 2022: ಬಾಲ್ಯದ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡುವ ಕಾಟನ್ ಕ್ಯಾಂಡಿ

ಸಿಹಿ ಎಂದಾಕ್ಷಣ ಸ್ವಲ್ಪ ದೂರವಿರಿ, ಇದು ನಿಮ್ಮ ಹಲ್ಲನ್ನು ಹಾಳು ಮಾಡುತ್ತದೆ ಎಂದು ಹೇಳುವ ದಂತ ವೈದ್ಯರೇ ಈ ದಿನವನ್ನು ಕಂಡುಹಿಡಿದರು ಎಂದು ಹೇಳಿದರೆ ನೀವು ನಂಬುತ್ತೀರಾ? ಆದರೆ ಇದು ನಿಜ.

National Cotton Candy Day 2022: ಬಾಲ್ಯದ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡುವ ಕಾಟನ್ ಕ್ಯಾಂಡಿ
National Cotton Candy Day 2022Image Credit source: iStock
TV9 Web
| Edited By: |

Updated on:Dec 07, 2022 | 11:37 AM

Share

ಪ್ರತಿಯೊಬ್ಬರ ಬಾಲ್ಯದಲ್ಲಿಯೂ ಈ ಕಾಟನ್ ಕ್ಯಾಂಡಿ(Cotton Candy) ಅಚ್ಚು ಮೆಚ್ಚಿನ ಸಿಹಿ. ಊರಿನ ಜಾತ್ರೆ ಸಂಭ್ರಮ ಸಡಗರಗಳಲ್ಲಿ ಇದರ ನೆನಪುಗಳಂತೂ ಸಾಕಷ್ಟಿದೆ. ಪ್ರತಿ ವರ್ಷ ಡಿಸೆಂಬರ್ 7 ರಂದು ರಾಷ್ಟ್ರೀಯ ಕಾಟನ್ ಕ್ಯಾಂಡಿ ದಿನ (National Cotton Candy Day) ವನ್ನು ಆಚರಿಸಲಾಗುತ್ತದೆ. ಸಿಹಿ ಎಂದಾಕ್ಷಣ ಸ್ವಲ್ಪ ದೂರವಿರಿ, ಇದು ನಿಮ್ಮ ಹಲ್ಲನ್ನು ಹಾಳು ಮಾಡುತ್ತದೆ ಎಂದು ಹೇಳುವ ದಂತ ವೈದ್ಯರೇ ಈ ದಿನವನ್ನು ಕಂಡುಹಿಡಿದರು ಎಂದು ಹೇಳಿದರೆ ನೀವು ನಂಬುತ್ತೀರಾ? ಆದರೆ ಇದು ನಿಜ.

1897 ರಲ್ಲಿ ಮೊದಲ ಬಾರಿಗೆ ದಂತವೈದ್ಯ ವಿಲಿಯಂ ಮಾರಿಸನ್ ಮತ್ತು ಜಾನ್ ಸಿ. ವಾರ್ಟನ್ ಅವರು ಯಂತ್ರದಿಂದ ನೂಲುವ ಕಾಟನ್ ಕ್ಯಾಂಡಿಯ ಆವಿಷ್ಕಾರ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ಮೆಷಿನ್-ಸ್ಪನ್ ಕಾಟನ್ ಕ್ಯಾಂಡಿಯ ಆವಿಷ್ಕಾರದ ನಂತರ, 1904 ರಲ್ಲಿ ಇದನ್ನು ಸೇಂಟ್ ಲೂಯಿಸ್‌ನಲ್ಲಿ ನಡೆದ ವರ್ಲ್ಡ್ಸ್ ಫೇರ್‌ನಲ್ಲಿ ‘ಫೇರಿ ಫ್ಲೋಸ್’ ಎಂದು ವ್ಯಾಪಕವಾಗಿ ಪ್ರೇಕ್ಷಕರಿಗೆ ಪರಿಚಯಿಸಲಾಯಿತು. 1921 ರಲ್ಲಿ ಇದಕ್ಕೆ ಕಾಟನ್ ಕ್ಯಾಂಡಿ ಎಂಬ ಹೆಸರು ಬಂತು. 1966 ರಲ್ಲಿ ವಿಶ್ವದ ಅತಿದೊಡ್ಡ ಕಾಟನ್ ಕ್ಯಾಂಡಿ ತಯಾರಕರಾದ ಟೂಟ್ಸಿ ರೋಲ್ ಇಂಡಸ್ಟ್ರೀಸ್, ಫ್ಲುಫಿ ಸ್ಟಫ್ ಎಂದು ಕರೆಯಲ್ಪಡುವ ಬ್ಯಾಗ್ಡ್ ಕಾಟನ್ ಕ್ಯಾಂಡಿಯನ್ನು ಉತ್ಪಾದಿಸುತ್ತದೆ.

ಕ್ಯಾಂಡಿ ಮೆಶ್‌ನ ಮೂಲ ವಸ್ತುವು ಸಾಮಾನ್ಯವಾಗಿ ಬಣ್ಣ ಮತ್ತು ಸುವಾಸನೆಯಿಂದ ಕೂಡಿರುತ್ತದೆ. ನೂಲಿನಂತೆ ಇದ್ದಾಗ, ಕಾಟನ್ ಕ್ಯಾಂಡಿ ಬಿಳಿಯಾಗಿರುತ್ತದೆ ಏಕೆಂದರೆ ಇದನ್ನು ಸಂಪೂರ್ಣವಾಗಿ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಆದರೆ ಇದಕ್ಕೆ ಇನ್ನಷ್ಟು ಆಕರ್ಷಕವಾಗಿ ಕಾಣಲು ಹಾಗೂ ರುಚಿ ಹೆಚ್ಚಿಸಲು ವಿವಿಧ ಹಣ್ಣುಗಳ ಪರಿಮಳದ ಬಣ್ಣಗಳನ್ನು ಸೇರಿಸಲಾಗುತ್ತದೆ.

ಇದನ್ನು ಓದಿ: ನಟಿ ರಶ್ಮಿಕಾಗೆ ನಿತ್ಯ ಊಟದಲ್ಲಿ ಸಿಹಿ ಬೇಕೇ ಬೇಕಂತೆ: ಸಿಹಿ ತಿನ್ನುವುದರ ಹಿಂದಿರುವ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ

ನಿಮ್ಮ ಬಾಲ್ಯದ ನೆನಪುಗಳನ್ನು ಮತ್ತೇ ನೆನಪಿಸುವುದರ ಸಲುವಾಗಿ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ನೀವು ನಿಮ್ಮ ಬಾಲ್ಯದ ಸ್ನೇಹಿತರು ಅಥವಾ ನಿಮ್ಮ ಒಡಹುಟ್ಟಿದವರನ್ನು ಭೇಟಿ ಮಾಡಿ, ಕಾಟನ್ ಕ್ಯಾಂಡಿ ತಿನ್ನುವುದರೊಂದಿಗೆ ಆನಂದಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:34 am, Wed, 7 December 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್