AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Childhood Traumas: ಬಾಲ್ಯದ ಆಘಾತಕಾರಿ ಘಟನೆಗಳು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬಲವಾದ ಪ್ರಭಾವ ಬೀರಬಹುದು

ನಿಮ್ಮ ಬಾಲ್ಯದ ಕೆಲವೊಂದು ಕೆಟ್ಟ ಅನುಭವಗಳು, ಘಟನೆಗಳು ಆರೋಗ್ಯದ ಮೇಲೆ ದಿನಗಳೆದಂತೆ ಕೆಟ್ಟ ಪರಿಣಾಮ ಬೀರಬಹುದು ಎಂದು ಇತ್ತೀಚಿನ ಅಧ್ಯಯನದ ಮೂಲಕ ತಿಳಿದು ಬಂದಿದೆ.

Childhood Traumas: ಬಾಲ್ಯದ ಆಘಾತಕಾರಿ ಘಟನೆಗಳು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬಲವಾದ ಪ್ರಭಾವ ಬೀರಬಹುದು
Childhood TraumasImage Credit source: Frontiers Blog
TV9 Web
| Edited By: |

Updated on: Nov 10, 2022 | 10:45 AM

Share

ಪ್ರತಿಯೊಂದು ವ್ಯಕ್ತಿಯ ಬಾಲ್ಯದ ಸಮಯದಲ್ಲಿ ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾವುದಾದರೊಂದು ಕೆಟ್ಟ ಅನುಭವಗಳು ಸಂಭವಿಸಿರುತ್ತದೆ. ಈ ಕೆಟ್ಟ ಘಟನೆಗಳು ಕಾಲ ಕ್ರಮೇಣ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬಲವಾದ ಪ್ರಭಾವ ಬೀರುತ್ತವೆ.

ನಿಮ್ಮ ಬಾಲ್ಯದ ಕೆಲವೊಂದು ಕೆಟ್ಟ ಅನುಭವಗಳು, ಘಟನೆಗಳು ಆರೋಗ್ಯದ ಮೇಲೆ ದಿನಕಳೆದಂತೆ ಕೆಟ್ಟ ಪರಿಣಾಮ ಬೀರಬಹುದು ಎಂದು ಇತ್ತೀಚಿನ ಅಧ್ಯಯನದ ಮೂಲಕ ತಿಳಿದು ಬಂದಿದೆ.

ಉದಾಹರಣೆಗೆ ಬಾಲ್ಯದಲ್ಲಿನ ನಡೆದ ಅಪಘಾತಗಳಲ್ಲಿನ ದೇಹದ ಮೇಲಿನ ನೋವು ಮುಂದೆ ಸ್ಥೂಲಕಾಯತೆ ಮತ್ತು ದೀರ್ಘಕಾಲದ ನೋವಾಗಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಮತ್ತು ಕೆಲವೊಂದು ಮಾನಸಿಕವಾಗಿ ನೋವು ನೀಡಿದ ಘಟನೆಗಳು ಮುಂದೆ ಮಾನಸಿಕ ಖಿನ್ನತೆಯಾಗಿ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.

ಅಕ್ಟೋಬರ್ 6 ರಂದು ಜರ್ನಲ್ ಫ್ರಾಂಟಿಯರ್ಸ್ ಇನ್ ಸೈಕಿಯಾಟ್ರಿಯಲ್ಲಿ DRI ಮತ್ತು ಯೂನಿವರ್ಸಿಟಿ ಆಫ್ ನೆವಾಡಾ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಬಾಲ್ಯದ ಆಘಾತಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ಭಾವನಾತ್ಮಕ, ದೈಹಿಕ ಅಥವಾ ಲೈಂಗಿಕ ದುರುಪಯೋಗ, ಬಡತನ ಮತ್ತು ಮನೆಯಲ್ಲಿ ಮಾದಕ ವ್ಯಸನದ ಅನುಭವಗಳು ಹೇಗೆ ಯೌವನದಲ್ಲಿ ಪರಿಣಾಮ ಬೀರುತ್ತಿದೆ ಎಂದು ತಿಳಿದು ಬಂದಿದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ರೆನೋನ್ ಹೆಲ್ತ್‌ನಿಂದ ನಡೆಸಲ್ಪಡುವ ಅತ್ಯಂತ ವಿಶೇಷವಾದ ಜೀನೋಮಿಕ್ ಅಧ್ಯಯನಗಳಲ್ಲಿ ಒಂದಾಗಿದೆ.

ಇದನ್ನು ಓದಿ: ನಿಮಗೆ ಬೆನ್ನು ನೋವಿನ ಸಮಸ್ಯೆಯೇ? ಹಾಗಾದ್ರೆ ನೋವು ದೂರ ಮಾಡುವ ವಿಧಾನಗಳ ಬಗ್ಗೆ ತಿಳಿಯಲೇಬೇಕು

ಬಾಲ್ಯದಲ್ಲಿನ ನಿರ್ಲಕ್ಷ್ಯ ಮತ್ತು ಬಡತನ, ಆಹಾರದ ಕೊರತೆ, ಲೈಂಗಿಕವಾಗಿ ದುರುಪಯೋಗದೊಂದಿಗಿನ ವೈಯಕ್ತಿಕ ಅನುಭವಗಳು ಪರಿಹರಿಸಲು ಹೆಚ್ಚು ಕಾಲ ತೆಗೆದು ಕೊಳ್ಳುತ್ತದೆ ಎಂದು ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಕರೆನ್ ಸ್ಕ್ಲಾಚ್ ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್