ನೀವು ಹೇಳುವ ಒಂದು ಸುಳ್ಳು ಅಥವಾ ಮುಚ್ಚಿಡುವ ಒಂದು ಸತ್ಯ ನಿಮ್ಮ ಆರೋಗ್ಯಕರ ಸಂಬಂಧವನ್ನು ಹಾಳು ಮಾಡಬಹುದು

ಸಂಗಾತಿ ಎಂದ ಮೇಲೆ ಮುಚ್ಚು ಮರೆ ಏಕೆ, ಎಲ್ಲವನ್ನೂ ಮುಕ್ತವಾಗಿ ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳಿತು, ನೀವು ಹೇಳುವ ಒಂದು ಸುಳ್ಳು ಅಥವಾ ಮುಚ್ಚಿಡುವ ಒಂದು ಸತ್ಯ ನಿಮ್ಮ ಆರೋಗ್ಯಕರ ಜೀವನವನ್ನು ಹಾಳು ಮಾಡಬಹುದು.

ನೀವು ಹೇಳುವ ಒಂದು ಸುಳ್ಳು ಅಥವಾ ಮುಚ್ಚಿಡುವ ಒಂದು ಸತ್ಯ ನಿಮ್ಮ ಆರೋಗ್ಯಕರ ಸಂಬಂಧವನ್ನು ಹಾಳು ಮಾಡಬಹುದು
ಸಂಬಂಧImage Credit source: Healthshots.com
Follow us
|

Updated on: Jul 26, 2023 | 9:06 AM

ನೀವು ಹೇಳುವ ಸತ್ಯ ಕೆಲವೊಮ್ಮೆ ಆ ಸಮಯಕ್ಕೆ ಬೇಸರ ತಂದರೂ ನಂತರದಲ್ಲಿ ನಿಮ್ಮ ಸಂಬಂಧವು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ಆದರೆ ನೀವು ಕಟ್ಟುವ ಸುಳ್ಳಿನ ಗೋಪುವು ಒಮ್ಮೆ ಒಡೆದು ಛಿದ್ರವಾದಾಗ ನಿಮ್ಮವರೆನಿಸಿಕೊಂಡವರು ಯಾರೂ ಕೂಡ ನಿಮ್ಮ ಬಳಿ ಇರುವುದಿಲ್ಲ. ಹೀಗಾಗಿ ನಿಮ್ಮ ಆರೋಗ್ಯಕರ ಸಂಬಂಧವನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಸಂಗಾತಿ ಎಂದ ಮೇಲೆ ಮುಚ್ಚು ಮರೆ ಏಕೆ, ಎಲ್ಲವನ್ನೂ ಮುಕ್ತವಾಗಿ ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳಿತು, ನೀವು ಹೇಳುವ ಒಂದು ಸುಳ್ಳು ಅಥವಾ ಮುಚ್ಚಿಡುವ ಒಂದು ಸತ್ಯ ನಿಮ್ಮ ಆರೋಗ್ಯಕರ ಜೀವನವನ್ನು ಹಾಳು ಮಾಡಬಹುದು. ಈ ಧಾವಂತದ ಬದುಕಿನಲ್ಲಿ ನಾವೆಲ್ಲರೂ ನಮ್ಮ ಸಂಬಂಧಗಳನ್ನು ಬಿಟ್ಟು ಎಲ್ಲೋ ಮುಂದೆ ಸಾಗುತ್ತಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಸಂಬಂಧದ ನಕಾರಾತ್ಮಕ ವಿಷಯಗಳನ್ನು ನಾವು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ, ಇದು ದೀರ್ಘಾವಧಿಯಲ್ಲಿ ನಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.

ಅಂತಹ ಪರಿಸ್ಥಿತಿಯಲ್ಲಿ, ಅನಾರೋಗ್ಯಕರ ಸಂಬಂಧದ ಚಿಹ್ನೆಗಳನ್ನು ಗುರುತಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಪ್ರಾರಂಭಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ, ಈ ಸಣ್ಣ ವಿಷಯಗಳು ನಂತರ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಸಂಬಂಧದ ವಿಘಟನೆಗೆ ಕಾರಣವಾಗಬಹುದು.

ಅನಾರೋಗ್ಯಕರ ಸಂಬಂಧದ ಕೆಲವು ಚಿಹ್ನೆಗಳು ಇಲ್ಲಿವೆ 1. ಸಂಗಾತಿಯ ನಡವಳಿಕೆಯನ್ನು ನಿಯಂತ್ರಿಸುವುದು ಅನಾರೋಗ್ಯಕರ ಸಂಬಂಧಗಳಲ್ಲಿ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸಬಹುದು. ನಿಮ್ಮ ಮೇಲೆ ನಿಯಂತ್ರಣ ಸಾಧಿಸಲು ನಿಮ್ಮ ಸಂಗಾತಿ ನಿಮ್ಮನ್ನು ಬೆದರಿಸಬಹುದು, ಕೆಲವೊಮ್ಮೆ ನಿಮ್ಮ ಸಂಗಾತಿಯು ಅತ್ಯಂತ ಪ್ರೀತಿಯ ನಡವಳಿಕೆ ತೋರಬಹುದು, ಆದರೆ ವಾಸ್ತವವಾಗಿ, ಅವರು ನಿಮ್ಮ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದ್ದಾರೆ. ನೀವು ಅವರ ನಿಯಂತ್ರಣದಿಂದ ಹೊರಬರಲು ಪ್ರಯತ್ನಿಸಿದಾಗಲೆಲ್ಲಾ ಹೆಚ್ಚು ಕೋಪಗೊಳ್ಳಬಹುದು ಅಥವಾ ಹೆಚ್ಚು ಸೌಮ್ಯವಾಗಿರಬಹುದು.

2. ಸಂಬಂಧದಲ್ಲಿ ನಂಬಿಕೆಯ ಕೊರತೆ ಅನಾರೋಗ್ಯಕರ ಸಂಬಂಧದ ದೊಡ್ಡ ಲಕ್ಷಣವೆಂದರೆ ನಂಬಿಕೆಯ ಕೊರತೆ. ಅಂತಹ ಸಂಬಂಧದಲ್ಲಿ ನಂಬಿಕೆಯ ಕೊರತೆಯಿಂದಾಗಿ, ನೀವಿಬ್ಬರೂ ಪರಸ್ಪರ ವಿಷಯಗಳನ್ನು ಮರೆಮಾಚಲು ಪ್ರಾರಂಭಿಸುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರಲ್ಲಿ ಯಾರಿಗಾದರೂ ಅವರು ನಿಮ್ಮಿಂದ ವಿಷಯಗಳನ್ನು ಮರೆಮಾಡುತ್ತಿದ್ದಾರೆ ಎಂದು ಅನಿಸಬಹುದು. ನಂಬಿಕೆಯನ್ನು ಉಳಿಸಿಕೊಳ್ಳಲು ಸಂಬಂಧದಲ್ಲಿ ಇಬ್ಬರೂ ಮುಕ್ತವಾಗಿ ಸಂವಹನ ನಡೆಸಬೇಕು, ಕಾಲಾನಂತರದಲ್ಲಿ ಸಂಬಂಧದಲ್ಲಿ ನಂಬಿಕೆಯನ್ನು ಸ್ಥಾಪಿಸಲು, ಇಬ್ಬರೂ ಸಂಗಾತಿ ತಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಬೇಕು. ಹಂಚಿಕೊಳ್ಳುವ ಮತ್ತು ಆಲಿಸುವ ಪ್ರಕ್ರಿಯೆಯು ಭಾವನಾತ್ಮಕ ಅನ್ಯೋನ್ಯತೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡಬಹುದು.

3. ತಪ್ಪು ರೀತಿಯಲ್ಲಿ ಮಾತನಾಡುವುದು ಸರಿಯಾದ ಸಂವಹನವು ಯಾವುದೇ ಆರೋಗ್ಯಕರ ಸಂಬಂಧದ ಅಡಿಪಾಯವಾಗಿದೆ. ದಂಪತಿ ಮಾತನಾಡುವ ರೀತಿಯಲ್ಲಿ ಅವರ ಸಂಬಂಧವು ಅನಾರೋಗ್ಯಕರವಾಗಿದೆ ಎಂದು ಜನರು ಹೇಳಬಹುದು. ಸಂಬಂಧದಲ್ಲಿ ಸಂವಹನದ ಕೊರತೆಯು ನಿಮ್ಮ ಅನಾರೋಗ್ಯಕರ ಸಂಬಂಧದ ದೊಡ್ಡ ಲಕ್ಷಣಗಳಲ್ಲಿ ಒಂದಾಗಿದೆ. ಸಾಧ್ಯವಾದಷ್ಟು ಬೇಗ ನಿಮ್ಮ ಸಂಗಾತಿಯೊಂದಿಗೆ ಈ ವಿಷಯವನ್ನು ಚರ್ಚಿಸಿ ಇಲ್ಲದಿದ್ದರೆ ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಆರೋಗ್ಯಕರ ಸಂಬಂಧದಲ್ಲಿ ಇಬ್ಬರ ಭಾವನೆಗಳು ಮುಖ್ಯ. ಬೇರೊಬ್ಬರಿಗಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ಸಂಬಂಧದಲ್ಲಿದ್ದಾಗ ಸಕಾರಾತ್ಮಕ ಬದಲಾವಣೆಗಳು ಅಗತ್ಯವಾದರೂ, ಈ ಬದಲಾವಣೆಗಳು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತವೆ ಎಂದು ನೀವು ಭಾವಿಸಿದಾಗ, ಅದನ್ನು ತಕ್ಷಣವೇ ನಿಲ್ಲಿಸಬೇಕು.

ಸಂಗಾತಿಯಿಂದ ಉಂಟಾಗುವ ದೈಹಿಕ ಅಥವಾ ಭಾವನಾತ್ಮಕ ಗಾಯ ಇಬ್ಬರಲ್ಲಿ ಯಾರಾದರೊಬ್ಬರು ಎದುರಿಗಿರುವ ವ್ಯಕ್ತಿಯ ಮೇಲೆ ಕೈ ಎತ್ತುತ್ತಿದ್ದರೆ ಅಥವಾ ದೈಹಿಕವಾಗಿ ನೋವುಂಟುಮಾಡಿದರೆ ಅವರ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಅಥವಾ ಅವರ ಕೋಪವನ್ನು ಶಾಂತಗೊಳಿಸಲು ಪ್ರಯತ್ನಿಸಬೇಕು. ಇದು ಅನಾರೋಗ್ಯಕರ ಸಂಬಂಧದ ಸಂಕೇತವಾಗಿದೆ. ಅಷ್ಟೇ ಅಲ್ಲ, ನಿಮ್ಮ ಮಾತು ಮತ್ತು ನಡೆಗಳಿಂದ ನಿಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ನೋಯಿಸುವುದು ಕೂಡ ಆರೋಗ್ಯಕರ ಸಂಬಂಧದ ಲಕ್ಷಣ.

ನಿಮ್ಮ ಒಪ್ಪಿಗೆಯಿಲ್ಲದೆ ಅಥವಾ ನಿಮ್ಮನ್ನು ಕೇಳದೆಯೇ ನಿಮ್ಮ ಸಂಗಾತಿಯು ಯಾವುದೇ ರೀತಿಯ ಲೈಂಗಿಕ ಚಟುವಟಿಕೆಗಾಗಿ ನಿಮ್ಮ ಮೇಲೆ ಒತ್ತಡ ಹೇರುತ್ತಿದ್ದರೆ, ನೀವು ಅನಾರೋಗ್ಯಕರ ಸಂಬಂಧದಲ್ಲಿದ್ದೀರಿ ಎಂದು ತೋರಿಸುತ್ತದೆ. ವಿಷಯ ಉಲ್ಬಣಗೊಳ್ಳುವವರೆಗೆ ಕಾಯದೆ ಸಂಗಾತಿ ಜತೆ ಮುಕ್ತವಾಗಿ ಮಾತನಾಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ