Mirror: ಕನ್ನಡಿಯನ್ನು ಕಂಡುಹಿಡಿದವರು ಯಾರು? ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ
ಕನ್ನಡಿ ಮುಂದೆ ನಿಂತುಕೊಂಡು ಒಬ್ಬೋಬ್ಬರೇ ಮಾತನಾಡುವುದು, ನಗುವುದು ಹಾಗೂ ಎಷ್ಟು ಚಂದ ಕಾಣುತ್ತೀವಿ ಎಂದು ನೋಡುವುದು. ಹೀಗೆ ಪ್ರತಿಯೊಬ್ಬರ ಜೀವನದಲ್ಲೂ ಕನ್ನಡಿ ಬೇಕೇ ಬೇಕು. ಆದರೆ ಈ ಕನ್ನಡಿಯನ್ನು ಯಾವಾಗ, ಯಾರು ಕಂಡುಹಿಡಿದರು ಎಂಬ ಸಂಗತಿ ನಿಮಗೆ ತಿಳಿದಿದೆಯೇ?
ಕನ್ನಡಿ(Mirror) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಂತೂ ಕನ್ನಡಿಯ ಮುಂದೆ ದಿನವಿಡೀ ಬೇಕಾದರೂ ಸಮಯ ಕಳೆಯುತ್ತಾರೆ. ಕೆಲವೊಬ್ಬರಿಗೆ ಕನ್ನಡಿಯೇ ಬೆಸ್ಟ್ ಫ್ರೆಂಡ್. ಕನ್ನಡಿ ಮುಂದೆ ನಿಂತುಕೊಂಡು ಒಬ್ಬೋಬ್ಬರೇ ಮಾತನಾಡುವುದು, ನಗುವುದು ಹಾಗೂ ಎಷ್ಟು ಚಂದ ಕಾಣುತ್ತೀವಿ ಎಂದು ನೋಡುವುದು. ಹೀಗೆ ಪ್ರತಿಯೊಬ್ಬರ ಜೀವನದಲ್ಲೂ ಕನ್ನಡಿ ಬೇಕೇ ಬೇಕು. ಆದರೆ ಈ ಕನ್ನಡಿಯನ್ನು ಯಾವಾಗ, ಯಾರು ಕಂಡುಹಿಡಿದರು ಎಂಬ ಸಂಗತಿ ನಿಮಗೆ ತಿಳಿದಿದೆಯೇ?
ಹಿಂದಿನ ಕಾಲದಲ್ಲಿ ಕನ್ನಡಿಯ ಬದಲಾಗಿ ಜನರು ನೀರಿನ ಮೇಲ್ಮೈ, ಹೊಳೆಯುವ ಲೋಹ, ನಯವಾದ ಕಲ್ಲುಗಳ ಮೇಲೆ ತಮ್ಮ ಮುಖಗಳನ್ನು ನೋಡಿಕೊಳ್ಳುತ್ತಿದ್ದರು. ಕೆಲವರು ತಾಮ್ರ ಮತ್ತು ಬೆಳ್ಳಿಯ ಪಾತ್ರೆಗಳನ್ನು ಕನ್ನಡಿಗಳಾಗಿ ಬಳಸುತ್ತಿದ್ದರು. ಶ್ರೀಮಂತ ವರ್ಗಕ್ಕೆ ಸೇರಿದವರು ಬೆಳ್ಳಿಯಿಂದ ಮಾಡಿದ ಚಿಕ್ಕ ಕನ್ನಡಿಗಳನ್ನು ಬಳಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಇದಲ್ಲದೇ ಮುಖದ ಅಂದಕ್ಕೆ ಇತರರ ಸಹಾಯವನ್ನು ಬಳಸುತ್ತಿದ್ದರು. ವರ್ಣಚಿತ್ರಕಾರರು ಮೇಲ್ಮೈಯಲ್ಲಿ ನೀರು ಮತ್ತು ತೈಲದ ಪ್ರತಿಬಿಂಬವನ್ನು ನೋಡಿ ವರ್ಣಚಿತ್ರಗಳನ್ನು ರಚಿಸುತ್ತಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಿದೆ.
ಇದನ್ನೂ ಓದಿ: ಕೆಮಿಕಲ್ ಹೇರ್ ಕಲರ್ ಬದಲು ದಾಸವಾಳ ಹೂವಿನ ನೈಸರ್ಗಿಕ ಹೇರ್ ಕಲರ್ ಬಳಸಿ
ಕನ್ನಡಿಯನ್ನು ಕಂಡುಹಿಡಿದವರು ಯಾರು?
ಕನ್ನಡಿಯನ್ನು 1835 ರಲ್ಲಿ ಕಂಡುಹಿಡಿಯಲಾಯಿತು ಎಂದು ಹೇಳಲಾಗುತ್ತದೆ. ಜರ್ಮನ್ ರಸಾಯನಶಾಸ್ತ್ರಜ್ಞ ಜಸ್ಟಸ್ ವಾನ್ ಲೀಬಿಗ್ ಗಾಜಿನ ಫಲಕದ ಮೇಲ್ಮೈಯಲ್ಲಿ ಲೋಹದ ತೆಳುವಾದ ಪದರವನ್ನು ಅಂದರೆ ಬೆಳ್ಳಿಯನ್ನು ಲೇಪಿಸುವ ಮೂಲಕ ಮನುಷ್ಯನ ಪ್ರತಿಬಿಂಬವನ್ನು ಹೋಲುವ ಕನ್ನಡಿಯನ್ನು ಕಂಡುಹಿಡಿದರು. ಆದರೆ ಆ ಕಾಲದಲ್ಲಿ ಮನೆಯಲ್ಲಿ ಕನ್ನಡಿ ಇಡುತ್ತಿದ್ದುದ್ದು ಕೇವಲ ಐಷಾರಾಮಿ ಜೀವನ ನಡೆಸುವ ಅಂದರೆ ರಾಜ ಮನೆತನದವರು ಮಾತ್ರ. ವಾಸ್ತವವಾಗಿ ಕನ್ನಡಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ಆದಾಗ್ಯೂ, ಇದು 18 ನೇ ಶತಮಾನದವರೆಗೆ ಸಾಮಾನ್ಯ ಜನರಿಗೆ ಲಭ್ಯವಿರಲಿಲ್ಲ. 18 ನೇ ಶತಮಾನದ ನಂತರ, ಕನ್ನಡಿ ತಯಾರಿಕೆಯ ಸುಧಾರಣೆ ಮತ್ತು ಯಾಂತ್ರೀಕರಣವು ಕನ್ನಡಿ ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೂ ಸಿಗುವಂತಾಯಿತು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: