
ಹೊಸ ವರ್ಷದ ಆಚರಣೆ ಆರಂಭವಾಗಿದೆ. ಹೊಸ ವರ್ಷದ ಆಚರಣೆಗಳು ಮಾತ್ರವಲ್ಲ, ಮುಂಬರುವ ರಜಾದಿನಗಳ ಬಗ್ಗೆಯೂ ಉತ್ಸಾಹ ಹೆಚ್ಚುತ್ತಿದೆ. ಏಕೆಂದರೆ ಜನವರಿ ತಿಂಗಳ ಮೊದಲ ವಾರದಿಂದ ಅನೇಕ ಸರ್ಕಾರಿ ರಜಾದಿನಗಳು, ಹಬ್ಬಗಳು ಮತ್ತು ರಾಷ್ಟ್ರೀಯ ದಿನಗಳು ಇರುತ್ತವೆ. ಇದು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ. 2026 ಹೊಸ ವರ್ಷದೊಂದಿಗೆ ಸ್ವಾಗತಿಸುವುದರಿಂದ ಹಿಡಿದು ಡಿಸೆಂಬರ್ ತಿಂಗಳನ್ನು ಕೊನೆಗೊಳಿಸುವವರೆಗೆ.. ಪ್ರತೀ ತಿಂಗಳು ವಿರಾಮ ತೆಗೆದುಕೊಂಡು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಈ ವರ್ಷ ಎಷ್ಟು ರಜೆಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಜನವರಿ 01 ಹೊಸ ವರ್ಷದ ಆಗಿರುವುದರಿಂದ ಕಛೇರಿಯಲ್ಲಿ ರಜೆ ಇದ್ದರೆ ಮರುದಿನ ಶುಕ್ರವಾರ ರಜೆ ತಗೆದುಕೊಳ್ಳಿ. ಜೊತೆಗೆ ಶನಿವಾರ, ಆದಿತ್ಯವಾರ ರಜೆ ಇರುವುದರಿಂದ ನೀವು ಒಟ್ಟಾಗಿ 4 ರಜೆಗಳು ನಿಮ್ಮ ಕೈಯಲ್ಲಿ ಇರುತ್ತದೆ. ಆದ್ದರಿಂದ ಈ 4 ದಿನದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಲಾಂಗ್ ವೀಕೆಂಡ್ ರಜೆ ತೆಗೆದುಕೊಳ್ಳಬಹುದಾಗಿದೆ. ಇದೇ ತಿಂಗಳಲ್ಲಿ ಸಂಕ್ರಾಂತಿ ಹಬ್ಬವು (ಜನವರಿ 14) ಬುಧವಾರ ಬರುವುದರಿಂದ 15 ಮತ್ತು 16ರಂದು ರಜೆ ಪಡೆದು ಐದು ದಿನಗಳ ಲಾಂಗ್ ಬ್ರೇಕ್ ಪಡೆಯಬಹುದು. ಅದೇ ರೀತಿ ಗಣರಾಜ್ಯೋತ್ಸವ (ಜನವರಿ 26) ಇರುವುರಿಂದ ಆವಾಗಲೂ ಕೂಡ ನೀವು ಮೂರು ದಿನಗಳ ರಜೆಯನ್ನು ಪಡೆಯಬಹುದು.
ಮಾರ್ಚ್ ತಿಂಗಳಲ್ಲಿಯೂ ಕೂಡ ನೀವು ದೀರ್ಘ ರಜೆಯೊಂದಿಗೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯಬಹುದಾಗಿದೆ. ಮಾರ್ಚ್ 4ರಂದು ಹೋಳಿ ಹಬ್ಬ ಅಂದರೆ ಬುಧವಾರ ಬಂದಿರುವುದರಿಂದ ನೀವು 5 ಮತ್ತು 6ರಂದು ರಜೆ ತೆಗೆದುಕೊಂಡರೆ ವಾರಾಂತ್ಯ ಸೇರಿ ಐದು ದಿನಗಳ ರಜೆ ಸಿಗುತ್ತದೆ. ಅದರಂತೆ ಯುಗಾದಿ ಹಬ್ಬವೂ ಮತ್ತೊಂದು ಉತ್ತಮ ಅವಕಾಶವನ್ನು ನೀಡುತ್ತದೆ.
ಏಪ್ರಿಲ್ ತಿಂಗಳಲಿನಲ್ಲಿಯೂ ಕೂಡ ನೀವೂ ಕೆಲಸದ ಕಿರಿಕಿರಿ ಮಧ್ಯೆ ಲಾಂಗ್ ಬ್ರೇಕ್ ಪಡೆಯಬಹುದು. ಏಪ್ರಿಲ್ ತಿಂಗಳ ಮೂರನೇ ತಾರೀಕಿನಂದು ಅಂದರೆ ಶುಕ್ರವಾರ ಗುಡ್ ಫ್ರೈಡೇ ಬರುವುದರಿಂದ ನೀವು ಶುಕ್ರವಾರ, ಶನಿವಾರ–ಭಾನುವಾರದೊಂದಿಗೆ ಮೂರು ದಿನಗಳ ದೀರ್ಘ ರಜೆಯನ್ನು ಪಡೆಯಬಹುದು. ಈ ಮೂರು ದಿನದಲ್ಲಿ ನೀವು ಸುಂದರ ವೀಕೆಂಡ್ ಟ್ರಿಪ್ ಯೋಜಿಸಬಹುದು.
ಇದನ್ನೂ ಓದಿ: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ
ಮೇ ತಿಂಗಳಲ್ಲಿ ಕಾರ್ಮಿಕ ದಿನ (ಮೇ 1) ಶುಕ್ರವಾರವಾಗಿದ್ದು, ಮೂರು ದಿನಗಳ ಬ್ರೇಕ್ ಸಿಗುತ್ತದೆ. ಅದರಂತೆ ಜೂನ್‌ನಲ್ಲಿ ಮೊಹರಂ (ಜೂನ್ 26) ಶುಕ್ರವಾರ ಬಂದು ವಾರಾಂತ್ಯ ಸೇರಿ ಲಾಂಗ್ ರಜೆ ನೀಡುತ್ತದೆ. ಆದ್ದರಿಂದ ಮೇ ಮತ್ತು ಜೂನ್ ಎರಡು ತಿಂಗಳಿನಲ್ಲಿ ಸಿಗುವ ಈ ದೀರ್ಘ ರಜೆಯನ್ನು ಮಿಸ್ ಮಾಡ್ಲೇ ಬೇಡಿ.
ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶ ಚತುರ್ಥಿ 14 ಅಂದರೆ ಸೋಮವಾರದಂದು ಬಂದಿರುವುದರಿಂದ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಲು ಸೂಕ್ತ ಸಮಯ. ನೀವು ಈ ತಿಂಗಳು ಶನಿವಾರ ಮತ್ತು ಆದಿತ್ಯವಾರ ಜೊತೆಗೆ ಸೋಮವಾರದ ಲಾಂಗ್ ಬ್ರೇಕ್ ತೆಗೆದುಕೊಂಡು ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಬಹುದು.
ಅಕ್ಟೋಬರ್‌ನಲ್ಲಿ ಗಾಂಧಿ ಜಯಂತಿ ಮತ್ತು ದಸರಾ ಹಬ್ಬಗಳು ಲಾಂಗ್ ಹಾಲಿಡೇಗೆ ಉತ್ತಮ ಅವಕಾಶ ಕೊಡುತ್ತವೆ. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ (ಡಿಸೆಂಬರ್ 25) ಶುಕ್ರವಾರ ಬರುವುದರಿಂದ ವರ್ಷಾಂತ್ಯವನ್ನು ಪ್ರವಾಸದೊಂದಿಗೆ ಸ್ಮರಣೀಯವಾಗಿಸಬಹುದು. ಈ ಮೂಲಕ ನಿಮ್ಮ ಪೂರ್ತಿ ವರ್ಷವನ್ನು ಸುಂದರವಾಗಿ ಕಳೆಯಬಹುದು. ಇನ್ನೇಕೆ ತಡ ಕೆಲಸದ ಜಂಜಾಟ ಬಿಟ್ಟು ಆರಾಮವಾಗಿ ಪ್ರವಾಸದ ಪ್ಲಾನ್ ಮಾಡಿ, ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಂದರ ಸಮಯವನ್ನು ಕಳೆಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Thu, 1 January 26