AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2026: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ

ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, 2026 ರ ಸಂವತ್ಸರವನ್ನು ಸ್ವಾಗತಿಸಲು ಪ್ರಪಂಚದಾದ್ಯಂತ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಪ್ರತಿವರ್ಷ ಸಹ ಡಿಸೆಂಬರ್‌ 31 ರ ರಾತ್ರಿ ಪಾರ್ಟಿ ಮೋಜು-ಮಸ್ತಿಯನ್ನು ಮಾಡುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಹೀಗೆ ಜನವರಿ 1 ರಂದೇ ಏಕೆ ನ್ಯೂ ಇಯರ್‌ ಆಚರಿಸಲಾಗುತ್ತದೆ, ಈ ಪದ್ಧತಿ ಯಾವಾಗಿನಿಂದ ಆರಂಭವಾಯಿತು ಎಂಬುದರ ಆಸಕ್ತಿದಾಯಕ ವಿಷಯವನ್ನು ತಿಳಿಯಿರಿ.

New Year 2026: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ
ಹೊಸ ವರ್ಷದ ಆಚರಣೆImage Credit source: pixabay
ಮಾಲಾಶ್ರೀ ಅಂಚನ್​
|

Updated on: Dec 31, 2025 | 6:50 PM

Share

ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು (New Year) ಸ್ವಾಗತಿಸುವುದಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಪ್ರತಿವರ್ಷ ಡಿಸೆಂಬರ್‌ 31 ರ ರಾತ್ರಿಯಿಂದಲೇ ಸಂಭ್ರಮಾಚರಣೆ ಶುರುವಾಗುತ್ತದೆ. ಜನರೆಲ್ಲರೂ ಕುಟುಂಬಸ್ಥರು, ಫ್ರೆಂಡ್ಸ್‌ ಜೊತೆ ಸೇರಿ ಮಸ್ತ್‌ ಪಾರ್ಟಿ ಮಾಡುವ ಮೂಲಕ ಉಜ್ವಲ ಮತ್ತು ಸಮೃದ್ಧ ನಾಳೆಯ ಭರವಸೆಯೊಂದಿಗೆ  ಹೊಸ ವರ್ಷವನ್ನು ಭರದಿಂದ ಸ್ವಾಗತಿಸುತ್ತಾರೆ. ಪ್ರತಿ ವರ್ಷ ಜನವರಿ 1 ರಂದು ಪ್ರಪಂಚದಾದ್ಯಂತ ಈ ಸಂಭ್ರಮಾಚರಣೆ ನಡೆದುಕೊಂಡು ಬರುತ್ತಿದೆ. ಜನವರಿ 1 ರಂದೇ ಏಕೆ ಹೊಸ ವರ್ಷವನ್ನು ಆಚರಿಸಲಾಗುತ್ತದೆ, ಈ ಪದ್ಧತಿ ಯಾವಾಗ ಜಾರಿಗೆ ಬಂದಿತು ಎಂಬುದರ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

ಹೊಸ ವರ್ಷದ ಆಚರಣೆಯ ಇತಿಹಾಸವೇನು?

ಹೊಸ ವರ್ಷದ ಆರಂಭವನ್ನು ಸಾಂಪ್ರದಾಯಿಕ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಜನವರಿ 1 ನೇ ತಾರೀಖನ್ನು ಹೊಸ ವರ್ಷದ ದಿನವಾಗಿ ಆಚರಿಸುವುದು ಅಕ್ಟೋಬರ್ 15, 1582 ರಂದು ಪ್ರಾರಂಭವಾಯಿತು. ಇದರ ಮೊದಲು ಹೊಸ ವರ್ಷವನ್ನು ಕೆಲವೊಮ್ಮೆ ಮಾರ್ಚ್ 25 ರಂದು ಮತ್ತು ಕೆಲವೊಮ್ಮೆ ಡಿಸೆಂಬರ್ 25 ರಂದು ಆಚರಿಸಲಾಗುತ್ತಿತ್ತು.  ಈ ಮಾರ್ಚ್‌ ತಿಂಗಳನ್ನು  ರೋಮನ್ನರ ಯುದ್ಧ ದೇವರು ಎಂದು ಪರಿಗಣಿಸಲಾಗುತ್ತದೆ. ಆರಂಭಿಕ ಕ್ಯಾಲೆಂಡರ್‌ನಲ್ಲಿ ಕೇವಲ 10 ತಿಂಗಳುಗಳಿದ್ದವು. ಹೀಗಾಗಿ, ಒಂದು ವರ್ಷವು 310 ದಿನಗಳನ್ನು ಮತ್ತು ಒಂದು ವಾರವು 8 ದಿನಗಳನ್ನು ಹೊಂದಿತ್ತು. ಜನರು ಮಾರ್ಚ್‌ನಲ್ಲಿ ಅಕಿಟು ಎಂಬ ಹಬ್ಬವನ್ನು ಆಚರಿಸುತ್ತಿದ್ದರು, ಇದು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ.

ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯವು ಪ್ರಾಚೀನ ರೋಮ್‌ನಲ್ಲಿ ಪ್ರಾರಂಭವಾಯಿತು ಮತ್ತು ಕ್ರಿ.ಪೂ 46 ರಲ್ಲಿ, ರೋಮನ್ ಚಕ್ರವರ್ತಿ ಜೂಲಿಯಸ್ ಸೀಸರ್ ‘ಜೂಲಿಯನ್ ಕ್ಯಾಲೆಂಡರ್’ ಅನ್ನು ಜಾರಿಗೆ ತಂದರು. ಜೂಲಿಯನ್ ಕ್ಯಾಲೆಂಡರ್ ಒಂದು ವರ್ಷದಲ್ಲಿ 12 ತಿಂಗಳುಗಳನ್ನು ಒಳಗೊಂಡಿತ್ತು. ಖಗೋಳಶಾಸ್ತ್ರಜ್ಞರನ್ನು ಭೇಟಿಯಾದ ನಂತರ, ಜೂಲಿಯಸ್ ಸೀಸರ್ ಭೂಮಿಯು ಸೂರ್ಯನ ಸುತ್ತ 365 ದಿನಗಳು ಮತ್ತು ಆರು ಗಂಟೆಗಳಲ್ಲಿ ಸುತ್ತುತ್ತದೆ ಎಂದು ತಿಳಿದುಕೊಂಡರು. ಇದನ್ನು ಗಣನೆಗೆ ತೆಗೆದುಕೊಂಡು, ಜೂಲಿಯನ್ ಕ್ಯಾಲೆಂಡರ್ ವರ್ಷವನ್ನು 310 ರಿಂದ 365 ದಿನಗಳಿಗೆ ವಿಸ್ತರಿಸಲಾಯಿತು. ನಂತರ ಅಮೆರಿಕದ ನೇಪಲ್ಸ್‌ನ ವೈದ್ಯ ಅಲೋಶಿಯಸ್ ಲಿಲಿಯಸ್, ರೋಮನ್ ಕ್ಯಾಲೆಂಡರ್ ಅನ್ನು ಮಾರ್ಪಡು ಮಾಡಿ ಜಗತ್ತಿಗೆ ಹೊಸ ಕ್ಯಾಲೆಂಡರ್ ಪರಿಚಯಿಸಿದರು. ಅದುವೇ ಗ್ರೆಗೋರಿಯನ್ ಕ್ಯಾಲೆಂಡರ್, ಇದರಲ್ಲಿ ವರ್ಷದ ಮೊದಲ ದಿನವನ್ನು ಜನವರಿ 1 ರಂದು ಆಚರಿಸಲಾಯಿತು. ಅಂದಿನಿಂದ, ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯವು ಪ್ರಪಂಚದಾದ್ಯಂತ ಪ್ರಚಲಿತವಾಗಿದೆ.

ಹೊಸ ವರ್ಷದ ಮಹತ್ವವೇನು?

  • ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್‌ ಬದಲಿಸುವ ದಿನವಲ್ಲ. ಅದು ನಮ್ಮನ್ನು ನಾವು ಸುಧಾರಿಸಿಕೊಳ್ಳಲು, ಹಿಂದಿನ ಕಹಿ, ನೋವುಗಳನ್ನು ಮರೆತು ಹೊಸ ಜೀವನವನ್ನು ಆರಂಭಿಸಲಿರುವ ಒಂದು ಅವಕಾಶವಾಗಿದೆ.
  • ಹೊಸ ವರ್ಷವು ನಮಗೆ ಹೊಸ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತುಂಬುವ ವಿಶೇಷ ದಿನವಾಗಿದ್ದು, ಹೊಸ ವರ್ಷದ ಆರಂಭವು ಪ್ರತಿ ದಿನವನ್ನು ಹೇಗೆ ಉತ್ತಮಗೊಳಿಸಬೇಕೆಂದು ನಮಗೆ ಕಲಿಸುತ್ತದೆ.

ಇದನ್ನೂ ಓದಿ: ಹೊಸ ವರ್ಷದ ದಿನ ನಿಮ್ಮ ಪ್ರೀತಿಪಾತ್ರರಿಗೆ ರೀತಿ ಶುಭಾಶಯಗಳನ್ನು ತಿಳಿಸಿ

ಭಾರತದಲ್ಲಿ ಹೊಸ ವರ್ಷ:

ನಮ್ಮ ದೇಶದಲ್ಲಿ, ಹೊಸ ವರ್ಷದ ಆಚರಣೆಗಳು ಪ್ರದೇಶ ಮತ್ತು ಧರ್ಮದಿಂದ ಬದಲಾಗುತ್ತವೆ. ಪಂಜಾಬ್‌ನ ಜನರು ಏಪ್ರಿಲ್ 13 ರಂದು ಬೈಸಾಖಿಯಂದು ತಮ್ಮ ಹೊಸ ವರ್ಷವನ್ನು ಆಚರಿಸುತ್ತಾರೆ. ನಾನಾಕ್ಷಾಹಿ ಕ್ಯಾಲೆಂಡರ್ ಪ್ರಕಾರ, ಸಿಖ್ಖರು ಮಾರ್ಚ್‌ನಲ್ಲಿ ಹೋಳಿಯ ಎರಡನೇ ದಿನದಂದು ತಮ್ಮ ಹೊಸ ವರ್ಷವನ್ನು ಆಚರಿಸುತ್ತಾರೆ. ಜೈನರು ದೀಪಾವಳಿಯ ಎರಡನೇ ದಿನದಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬದಂದು ಹೊಸ ವರ್ಷವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ