AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy New Year 2026: ಹೊಸ ವರ್ಷದ ದಿನ ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ

ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತ ಹೊಸ ವರ್ಷದಂದು ಜನ ಭರ್ಜರಿ ಸಂಭ್ರಮಾಚರಣೆ ಮಾಡುತ್ತಾರೆ. ಜೊತೆಗೆ ಹೊಸ ವರ್ಷವು ಸಮೃದ್ಧಿ, ಯಶಸ್ಸು ಮತ್ತು ಸಂತೋಷವನ್ನು ತರಲಿ ಎಂದು ಎಲ್ಲರೂ ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಿ ಹರಸುತ್ತಾರೆ. ಅಂತೆಯೇ 2026 ರ ಹೊಸ ವರ್ಷದಂದು ನಿಮ್ಮವರಿಗೆ ಈ ಅರ್ಥಪೂರ್ಣ ಶುಭಾಶಯಗಳನ್ನು ತಿಳಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿ.

Happy New Year 2026: ಹೊಸ ವರ್ಷದ ದಿನ ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ
ಹೊಸ ವರ್ಷ 2026Image Credit source: vecteezy
ಮಾಲಾಶ್ರೀ ಅಂಚನ್​
|

Updated on:Dec 31, 2025 | 1:22 PM

Share

2025 ಕ್ಕೆ ವಿದಾಯ ಹೇಳಿ 2026 ನೇ ಸಂವತ್ಸರವನ್ನು ಸ್ವಾಗತಿಸುವ ಸಂಭ್ರಮದ ಕ್ಷಣವಿದು. ಹೊಸ ವರ್ಷ (New Year) ಹೊಸ ಅವಕಾಶಗಳು, ಹೊಸ ಭರವಸೆಗಳು ಮತ್ತು ಯಶಸ್ಸಿನ ಆರಂಭದ ಸೂಚಕವಾಗಿದ್ದು,  ಈ ಸಂಭ್ರಮದ ಕ್ಷಣದಲ್ಲಿ ಮೋಜು ಮಸ್ತಿಯ ಜೊತೆ ಜೊತೆಗೆ ಮುಂಬರುವ ಹೊಸ ವರ್ಷವು ಸಮೃದ್ಧಿ, ಯಶಸ್ಸು ಮತ್ತು ಸಂತೋಷವನ್ನು ತರಲಿ ಎಂದು ಎಲ್ಲರೂ ಬಯಸುತ್ತಾರೆ. ಹಾಗೆಯೇ ಹೊಸ ವರ್ಷದ ಸಂದರ್ಭದಲ್ಲಿ, ಪ್ರತಿಯೊಬ್ಬರ ಜೀವನವು ಸಂತೋಷದಿಂದ ತುಂಬಿರಲಿ ಎಂದು ಆಶಿಸುತ್ತಾ ನಾವು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅಂತೆಯೇ 2026 ರ ಹೊಸ ವರ್ಷದ ಸಂದರ್ಭದಲ್ಲಿ  ನಿಮ್ಮ ಪ್ರೀತಿಪಾತ್ರರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಲು ಈ ರೀತಿಯ ಅರ್ಥಪೂರ್ಣ ಶುಭಾಶಯಗಳನ್ನು ತಿಳಿಸಿ.

ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ:

  • ಮರಳಿ ಬಂದಿದೆ ಹೊಸ ವರುಷ, ಮರಳಿ ತಂದಿದೆ ರಸ ನಿಮಿಷ. ನೋವು ನವಿಲಿದೆ ಪ್ರತಿ ದಿವಸ, ಹೊತ್ತು ಬರುತಿದೆ ಹೊಂಗನಸ… ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
  • ಜೀವನವು ಒಂದು ಪ್ರವಾಸ ಇದ್ದಂತೆ, 2026 ರ ನಿಮ್ಮ ಜೀವನ ಪ್ರಯಾಣ ಸಂತೋಷದಾಯಕವಾಗಿರಲಿ. ಹ್ಯಾಪಿ ನ್ಯೂ ಇಯರ್.‌
  • ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್‌ ಬದಲಿಸುವ ದಿನವಲ್ಲ. ಅದು ನಮ್ಮನ್ನು ನಾವು ಸುಧಾರಿಸಿಕೊಳ್ಳಲು, ಹಿಂದಿನ ಕಹಿ, ನೋವುಗಳನ್ನು ಮರೆತು ಹೊಸ ಜೀವನವನ್ನು ಆರಂಭಿಸಲಿರುವ ಒಂದು ಅವಕಾಶ. ಈ ಹೊಸ ವರುಷ ನಿಮ್ಮ ಜೀವನದಲ್ಲಿ ಹರುಷವನ್ನು ತರಲೆಂದು ಹಾರೈಸುತ್ತೇನೆ.
  • ಹಿಂದಿನ ವರ್ಷದ ನೋವುಗಳನ್ನು, ಕಹಿ ನೆನಪುಗಳನ್ನು ಮರೆತು ಈ ವರ್ಷವನ್ನು ಸಂತೋಷದಿಂದ ಕಳೆಯಿರಿ, ಹೊಸ ವರ್ಷದ ಶುಭಾಶಯಗಳು.
  • ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಹರ್ಷ ತರಲಿ, ನಿಮ್ಮ ಕನಸುಗಳೆಲ್ಲಾ ನನಸಾಗಲಿ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
  • ಹ್ಯಾಪಿ ನ್ಯೂ ಇಯರ್.‌ 2026 ರ ಹೊಸ ಆರಂಭವು ನಿಮ್ಮ ಜೀವನದಲ್ಲಿ ಹೆಚ್ಚು ಸಂತೋಷ ಮತ್ತು ಯಶಸ್ಸನ್ನು ತರಲಿ ಎಂದು ನಾನು ಹಾರೈಸುತ್ತೇನೆ.
  • 2026 ರ ಈ ವರ್ಷ ಆರೋಗ್ಯ, ಸಂಪತ್ತು, ಸಮೃದ್ಧಿ, ಸಂತೋಷ ನಿಮ್ಮದಾಗಲಿ ಎಂದು ಬಯಸುತ್ತೇನೆ. ಹೊಸ ವರ್ಷದ ಶುಭಾಶಯಗಳು.
  • ಹಳೆಯ ನೋವು, ಸೋಲಿನಿಂದ ಹೊರ ಬಂದು ಹೊಸ ಜೀವನವನ್ನು ಆರಂಭಿಸಿ. ನಿಮಗೂ ನಿಮ್ಮ ಮನೆಯವರಿಗೂ ಹೊಸ ವರ್ಷದ ಶುಭಾಶಯಗಳು.
  • ಪ್ರತಿ ಅಂತ್ಯದೊಂದಿಗೆ ಹೊಸ ಆರಂಭ ಶುರುವಾಗುತ್ತದೆ. ಹೊಸ ವರ್ಷವು ನಿಮಗೆ ಪ್ರತಿದಿನ ಸಂತೋಷ, ಯಶಸ್ಸು ಮತ್ತು ಪ್ರೀತಿಯನ್ನು ತರಲಿ.
  • ನೀವು ಕಂಡಂತಹ ಕನಸು, ಆಸೆಗಳೆಲ್ಲಾ ಈ ವರ್ಷ ನನಸಾಗಲಿ ಎಂದು ಹಾರೈಸುತ್ತೇನೆ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು.
  • ಹಳೆಯ ಕಹಿಯನ್ನು ಮರೆಯೋಣ, ಹೊಸತನವನ್ನು ಸ್ವಾಗತಿಸೋಣ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • ಹೊಸ ವರ್ಷದ ಶುಭಾಶಯಗಳು, ಈ ಹೊಸ ವರ್ಷದೊಂದಿಗೆ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿ, ನಿಮ್ಮ ಆಸೆಗಳೆಲ್ಲಾ ಈಡೇರಲಿ.
  • ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು 365 ಪುಟಗಳ ಹೊಸ ಪುಸ್ತಕ ನಿನ್ನ ಕೈ ಸೇರಿದೆ. ಅದನ್ನು ಸರಿಯಾಗಿ ಬಳಸಿಕೋ ಗೆಳೆಯ. ಹ್ಯಾಪಿ ನ್ಯೂ ಇಯರ್.‌
  • ನೀವು ಇಡುವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ, ನಿಮ್ಮ ಈ ವರುಷ ಲವಲವಿಕೆಯಿಂದ ಕೂಡಿರಲಿ.
  • ಕಾಲ ಬದಲಾದರೂ ಗುಣವನ್ನು ಬದಲಿಸದೆ ನನ್ನೊಂದಿಗೆ ಸದಾ ಜೊತೆಯಾಗಿ ನಿಂತಿರುವ ಜೀವದ ಗೆಳತಿಗೆ ಹೊಸ ವರ್ಷದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Wed, 31 December 25

ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ