AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies : ಖಂಡಿತ ಈ ಕಾಯಿಲೆಗಳನ್ನು ದೂರ ಮಾಡುವ 10 ಹಳೆಯ ಕಾಲದ ಮನೆಮದ್ದುಗಳು

ಪ್ರಾಚೀನ ಕಾಲದಿಂದಲೂ ಮನೆಯಲ್ಲೇ ತಯಾರಿಸುವ ಔಷಧಿಗಳಿಗೆ ಬಹಳಷ್ಟು ಬೇಡಿಕೆಯಿವೆ. ಇವತ್ತಿಗೂ ಹೆಚ್ಚಿನವರು ಜ್ವರ, ಶೀತ, ನೆಗಡಿ ಹಾಗೂ ಸಣ್ಣಪುಟ್ಟ ಕಾಯಿಲೆಗಳನ್ನು ನಿವಾರಿಸಲು ಇಂತಹ ಮನೆಮದ್ದುಗಳನ್ನೆ ಅವಲಂಬಿಸಿದ್ದಾರೆ. ವೈದ್ಯಕೀಯ ಕ್ಷೇತ್ರವು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಆದರೆ ಬಹುತೇಕರು ಮನೆ ಔಷಧೀಯ ಮೊರೆ ಹೋಗುತ್ತಾರೆ. ಸರಳವಾದ ಸಮಸ್ಯೆಗಳಿಗೆ ಈ ಕೆಲವು ಮನೆ ಮದ್ದುಗಳಿಂದ ಪರಿಹಾರವು ಬಹಳ ಸುಲಭವಾಗಿದೆ.

Home Remedies : ಖಂಡಿತ ಈ ಕಾಯಿಲೆಗಳನ್ನು ದೂರ ಮಾಡುವ 10 ಹಳೆಯ ಕಾಲದ ಮನೆಮದ್ದುಗಳು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 22, 2024 | 3:44 PM

Share

ನಮ್ಮ ಹಿರಿಯರ ಮನೆ ಮದ್ದಿನ ಪವರ್ ಅನ್ನು ತಿಳಿದವರೇ ಬಲ್ಲರು. ಅನಾದಿಕಾಲದಿಂದಲೂ ನಮ್ಮ ಹಿರಿಯರು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬಂದರೆ ಅಡುಗೆ ಮನೆಯಲ್ಲಿರುವ ಪದಾರ್ಥಗಳಿಂದ ಮನೆ ಮದ್ದನ್ನು ತಯಾರಿಸಿ ಗುಣ ಪಡಿಸಿಕೊಳ್ಳುತ್ತಿದ್ದರು. ಇವತ್ತಿಗೂ ಹಳ್ಳಿಗಳಲ್ಲಿ ಅಜ್ಜ ಅಜ್ಜಿಯಂದಿರು ಇದ್ದರೆ, ಆರೋಗ್ಯ ಸಮಸ್ಯೆಗೆ ಕೆಲವು ಮನೆ ಮದ್ದುಗಳನ್ನು ಮನೆಯಲ್ಲೇ ಮಾಡಿ ಸೇವಿಸುತ್ತಾರೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಮದ್ದುಗಳು ಎಷ್ಟೋ ಸಮಸ್ಯೆಗಳನ್ನು ನಿವಾರಿಸಸುತ್ತದೆ.

ಆರೋಗ್ಯ ಸಮಸ್ಯೆಗಳಿಗೆ ಸರಳವಾದ ಮನೆ ಮದ್ದುಗಳು:

  1. ಮೈ ಮೇಲಿನ ಗುಳ್ಳೆಗಳ ನಿವಾರಣೆಗೆ ಪೆಟ್ರೋಲಿಯಂ ಜೆಲ್ಲಿ : ಮೈ ಮೇಲಿನ ಗುಳ್ಳೆಗಳು ತೀವ್ರವಾದ ನೋವನ್ನು ಉಂಟು ಮಾಡುತ್ತದೆ. ಇದರ ನಿವಾರಣೆಗೆ ಪೆಟ್ರೋಲಿಯಂ ಜೆಲ್ಲಿಯು ಪರಿಣಾಮಕಾರಿಯಾದ ಮನೆ ಮದ್ದು. ಮನೆಯಲ್ಲೇ ಸೋಪ್ ಹಾಗೂ ನೀರಿನಿಂದ ಗುಳ್ಳೆಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿ ಬ್ಯಾಂಡೇಜ್ ಅನ್ನು ಹಾಕಿದರೆ ಗುಳ್ಳೆಗಳು ಗುಣಮುಖವಾಗಿ ನೋವಿನ ಪ್ರಮಾಣವು ಕಡಿಮೆಯಾಗುತ್ತದೆ.
  2. ಸುಟ್ಟಗಾಯಗಳಿಗೆ ಅಲೋವೆರಾ : ಅಡುಗೆ ಮನೆಯಲ್ಲಿ ಮಹಿಳೆಯರಿಗೆ ಬಿಸಿ ತಾಕಿ ಸುಟ್ಟ ಗಾಯಗಳಾಗುತ್ತವೆ. ಆದರೆ ಈ ಸುಟ್ಟ ಗಾಯಗಳಿಗೆ ಉತ್ತಮ ಮನೆ ಮದ್ದಾಗಿ ಈ ಅಲೋವೆರಾವು ಕೆಲಸ ಮಾಡುತ್ತದೆ. ಮನೆಯಲ್ಲೇ ಅಲೋವೆರಾವಿದ್ದರೆ ಅದರ ಲೋಳೆಯನ್ನು ಸುಟ್ಟ ಗಾಯಕ್ಕೆ ಹಚ್ಚುವುದರಿಂದ ಬಹುಬೇಗನೆ ವಾಸಿಯಾಗುತ್ತದೆ.
  3. ಅತಿಸಾರಕ್ಕೆ ಹಸಿ ಬಾಳೆಹಣ್ಣು ಸೇವಿಸಿ: ಹಸಿ ಬಾಳೆಹಣ್ಣುಗಳು ಅತಿಸಾರಕ್ಕೆ ದಿವ್ಯ ಔಷಧಿಯಾಗಿದೆ ಅಮೈಲೇಸ್-ನಿರೋಧಕ ಪಿಷ್ಟ ಮತ್ತು ಪೆಕ್ಟಿನ್ ಸೇರಿದಂತೆ ಪೊಟ್ಯಾಸಿಯಮ್ ಗಳನ್ನು ಹೊಂದಿರುವ ಕಾರಣ ಈ ಬಾಳೆಹಣ್ಣನ್ನು ಅತಿಸಾರದಂತಹ ಸಮಸ್ಯೆಯನ್ನು ದೂರ ಮಾಡುತ್ತವೆ.
  4. ಅಜೀರ್ಣಕ್ಕೆ ಸೋಂಪು ಕಾಳುಗಳು ಉತ್ತಮ: ಫೆನ್ನೆಲ್ ಬೀಜಗಳು ಕಾರ್ಮಿನೇಟಿವ್ ಗುಣಗಳು ಅಧಿಕವಾಗಿದ್ದು, ಇದು ಜೀರ್ಣಾಂಗ ವ್ಯವಸ್ಥೆಯಿಂದ ಅನಿಲವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಊಟದ ಬಳಿಕ ಒಂದು ಚಮಚದಷ್ಟು ಸೋಂಪು ಕಾಳನ್ನು ಅಗಿಯುವುದರಿಂದ ಅಜೀರ್ಣ ಸಮಸ್ಯೆಯು ದೂರವಾಗುತ್ತದೆ.
  5. ಸೈನಸ್ ಗೆ ಯೂಕಲಿಪ್ಟಸ್ ಎಣ್ಣೆ : ಸೈನಸ್ ಎಂದರೆ ಮೂಗಿನ ಎರಡು ಬದಿಯಲ್ಲಿ ಗಾಳಿಯಿಂದ ತುಂಬಿರುವ ಸೂಕ್ಷ್ಮ ಜೀವಕೋಶಗಳಿರುವ ಕುಳಿಗಳು. ಕೆಲವೊಮ್ಮೆ ಈ ಕುಳಿಗಳು ಅಲರ್ಜಿ, ಶೀತ ಹಾಗೂ ಬ್ಯಾಕ್ಟೀರಿಯಾಗಳಿಂದಾಗಿ ಮುಚ್ಚಿಹೋಗುತ್ತವೆ. ಇದರಿಂದ ವಿಪರೀತ ತಲೆನೋವು, ಉಸಿರಾಟದ ಸಮಸ್ಯೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ, ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಮುಖವನ್ನು ಟವೆಲ್ ನಿಂದ ಮುಚ್ಚಿ ಇದರ ಹಬೆಯನ್ನು ತೆಗೆದುಕೊಳ್ಳುತ್ತಿರಬೇಕು. ಹಬೆಯ ಪ್ರಮಾಣವು ಹೆಚ್ಚಾದಂತೆ ಆಳವಾಗಿ ಉಸಿರಾಡುವುದರಿಂದ ಸೈನಸ್ ಸಮಸ್ಯೆಯನ್ನು ನಿವಾರಿಸುತ್ತದೆ.
  6. ಹಲ್ಲು ನೋವಿಗೆ ಪರಿಣಾಮಕಾರಿ ಈ ಲವಂಗ ಎಣ್ಣೆ : ಲವಂಗದಲ್ಲಿ ನೋವು ನಿವಾರಕ ಗುಣಲಕ್ಷಣಗಳು ಅಧಿಕವಾಗಿದೆ. ಲವಂಗ ಎಣ್ಣೆಯು ಹಲ್ಲು ನೋವಿಗೆ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ. ಆದರೆ ಲವಂಗ ಎಣ್ಣೆಯನ್ನು ಎಚ್ಚರಿಕೆಯಿಂದ ಬಳಸುವುದು ಬಹಳ ಅಗತ್ಯ. ಎಣ್ಣೆ ಹಚ್ಚುವಾಗ ಒಸಡುಗಳು ಮತ್ತು ಹಲ್ಲಿನ ತಿರುಳಿಗೆ ಹಾನಿಯಾಗಬಹುದು. ಹೀಗಾಗಿ ಪ್ರಾರಂಭದಲ್ಲಿ ಇದನ್ನು ಬಳಸಿದರೂ ಹಲ್ಲು ನೋವು ತೀವ್ರವಾದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಅವಶ್ಯಕ.
  7. ಮಲಬದ್ಧತೆಗೆ ಅಗಸೆಬೀಜಗಳೇ ಔಷಧ : ಅಗಸೆಬೀಜದಲ್ಲಿ ಫೈಬರ್ ಅಂಶವು ಅಧಿಕವಾಗಿದ್ದು, ಮಲಬದ್ಧತೆಗೆ ನೈಸರ್ಗಿಕ ಪರಿಹಾರವಾಗಿದೆ. ಡೈವರ್ಟಿಕ್ಯುಲರ್ ಕಾಯಿಲೆಯಂತಹ ಜೀರ್ಣಕಾರಕ್ಕೆ ಸಂಬಂಧಿಸಿದ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 1 ರಿಂದ 4 ಚಮಚ ನೆಲದ ಅಗಸೆಬೀಜವನ್ನು ಸೇವಿಸುವುದರಿಂದ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  8. ದೇಹದ ದುರ್ವಾಸನೆಗೆ ಲ್ಯಾವೆಂಡರ್ ಎಣ್ಣೆ : ಈ ಲ್ಯಾವೆಂಡರ್ ಎಣ್ಣೆಯು ಆಹ್ಲಾದಕರ ಸುವಾಸನೆಯನ್ನು ಹೊರಸೂಸುವುದಲ್ಲದೆ, ಸೂಕ್ಷ್ಮಜೀವಿಗಳನ್ನು ತೊಡೆದುಹಾಕುವ ಗುಣವನ್ನು ಹೊಂದಿದೆ.
  9. ನಿದ್ರಾಹೀನತೆಗೆ ಅಶ್ವಗಂಧ : ಅಶ್ವಗಂಧವು ಭಾರತದ ಪ್ರಾಚೀನ ಔಷಧೀಯ ಮೂಲಿಕೆಯಾಗಿದ್ದು. ಇದು ಒತ್ತಡ, ಆಯಾಸ ಮತ್ತು ಆತಂಕದಿಂದ ಪರಿಹಾರವನ್ನು ನೀಡುತ್ತದೆ. ಇದರಲ್ಲಿ ಅಡಾಪ್ಟೋಜೆನ್ ಟ್ರೈಎಥಿಲೀನ್ ಗ್ಲೈಕೋಲ್ ಗುಣವನ್ನು ಹೊಂದಿದೆ. ಮಲಗುವ ಮುನ್ನ ಸ್ವಲ್ಪ ಪ್ರಮಾಣದಲ್ಲಿ ಅಶ್ವಗಂಧವನ್ನು ಸೇವಿಸುವುದರಿಂದ ನರಮಂಡಲವನ್ನು ಶಾಂತಗೊಳಿಸಿ ಮತ್ತು ನಿದ್ರೆಯನ್ನು ಬರುವಂತೆ ಮಾಡುತ್ತದೆ.
  10. ಮೂತ್ರನಾಳದ ಸೋಂಕಿಗೆ ಕ್ರ್ಯಾನ್ಬೆರಿ ರಸ : ಕ್ರ್ಯಾನ್‌ಬೆರಿ ಜ್ಯೂಸ್‌ನಲ್ಲಿರುವ ಸಂಯುಕ್ತವು ಬ್ಯಾಕ್ಟೀರಿಯಾವು ಮೂತ್ರನಾಳದ ಗೋಡೆಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ಮೂತ್ರನಾಳದ ಸೋಂಕನ್ನು ನಿವಾರಿಸುವ ಗುಣವನ್ನು ಹೊಂದಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ