Basil Seeds : ಕಾಮಕಸ್ತೂರಿ ಬೀಜದಲ್ಲಿದೆ ಆರೋಗ್ಯ ಕರಾಮತ್ತು, ಇಲ್ಲಿದೆ ಸರಳ ಮನೆ ಮದ್ದುಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 27, 2024 | 2:43 PM

ಮನೆಯಂಗಳದಲ್ಲಿ ಬೆಳೆಯುವ ಪ್ರತಿಯೊಂದು ಗಿಡವು ಔಷಧೀಯ ಗುಣಗಳ ಅಗರವಾಗಿದೆ. ನೋಡಲು ತುಳಸಿಯಂತೆ ಕಾಣುವ ಕಾಮಕಸ್ತೂರಿ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಉಪಯೋಗಿಸುತ್ತಿದ್ದರು. ಹೀಗಾಗಿ ನಮ್ಮ ಹಿರಿಯರು ಕೂಡ ಇದರ ಪ್ರಯೋಜನಗಳನ್ನು ಬಲ್ಲವರಾಗಿದ್ದರು. ಹೀಗಾಗಿ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಔಷಧಿಯು ಸುಲಭ ಸಾಧ್ಯವಾಗಿದೆ.

Basil Seeds : ಕಾಮಕಸ್ತೂರಿ ಬೀಜದಲ್ಲಿದೆ ಆರೋಗ್ಯ ಕರಾಮತ್ತು, ಇಲ್ಲಿದೆ ಸರಳ ಮನೆ ಮದ್ದುಗಳು
ಸಾಂದರ್ಭಿಕ ಚಿತ್ರ
Follow us on

ಕಾಮಕಸ್ತೂರಿ ಬೀಜದ ಪರಿಚಯವು ಬಹುತೇಕರಿಗಿದೆ. ಬೇಸಿಗೆಯಲ್ಲಿ ತಂಪುಪಾನೀಯಗಳ ತಯಾರಿಕೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಬಳಸಲಾಗುತ್ತದೆ. ಸುಡುವ ಬಿಸಿಲಿನ ನಡುವೆ ನೀರಿಗೆ ಹಾಕಿ ಕುಡಿಯುವುದರಿಂದಲೂ ದೇಹ ತಂಪಾಗುತ್ತದೆ. ಕಾಮ ಕಸ್ತೂರಿ ಸಸ್ಯವು ಅನೇಕ ಔಷಧೀಯ ಗುಣ ಗಳನ್ನು ಹೊಂದಿದೆ. ಇದರ ಬೀಜಗಳಲ್ಲಿ ಅತ್ಯಧಿಕ ಪೊಟ್ಯಾಷಿಯಂ ಜೊತೆಗೆ ಕ್ಯಾಲ್ಸಿಯಂ , ಮೆಗ್ನೀಷಿಯಂ ,ಐರನ್ , ವಿಟಮಿನ್ ಎ, ಹಾಗೂ ವಿಟಮಿನ್ ಬಿ6 ಇವೆ. ಈ ಸಣ್ಣ ಬೀಜದಲ್ಲಿ ರೋಗಗಳನ್ನು ದೂರ ಮಾಡುವ ಗುಣವು ಅಧಿಕವಾಗಿದ್ದು, ಮನೆಯಲ್ಲೇ ಮನೆ ಮದ್ದಿನ ಮೂಲಕ ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದು.

ಕಾಮಕಸ್ತೂರಿಯ ಮನೆ ಮದ್ದುಗಳು

  1. ಉರಿ ಮೂತ್ರ ಸಮಸ್ಯೆಯಿರುವವರು ಈ ಬೀಜಗಳನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ನೀರಿನಲ್ಲಿ ಎರಡು ಟೀ ಚಮಚ ಬೀಜ ಹಾಕಿ ಕುಡಿಯುವುದು ಪರಿಣಾಮಕಾರಿಯಾಗಿದೆ.
  2. ಕಾಮ ಕಸ್ತೂರಿ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ.
  3. ಮಕ್ಕಳಲ್ಲಿ ಕಾಡುವ ಜಂತು ಹುಳದ ಸಮಸ್ಯೆಗೆ ಎಂಟು ಹತ್ತು ಹನಿ ಕಾಮಕಸ್ತೂರಿ ಎಲೆಯ ರಸವನ್ನು ಕುಡಿಸುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
  4. ಕಾಮ ಕಸ್ತೂರಿಯ ಎಲೆ ಹಾಗೂ ಹಸಿ ಶುಂಠಿ ಸೇರಿಸಿ ಚಟ್ನಿ ತಯಾರಿಸಿ ತಿನ್ನುವುದರಿಂದ ಅಜೀರ್ಣ ಸಮಸ್ಯೆಯು ನಿವಾರಣೆಯಾಗುತ್ತದೆ.
  5. ನೆಗಡಿ ಕೆಮ್ಮಿಗೆ ಇದರ ಎಲೆಗಳೊಂದಿಗೆ ಹಸಿ ಶುಂಠಿ, ಲವಂಗ ಸೇರಿಸಿ ಕಷಾಯ ಮಾಡಿ ಕುದಿಯುವುದರಿಂದ ಶಮನವಾಗುತ್ತದೆ.
  6. ಬಾಯಿಯ ದುರ್ಗಂಧ , ವಸಡುಗಳ ನೋವಿಗೆ ಎಲೆಗಳನ್ನು ಸೇವನೆಯು ಪರಿಣಾಮಕಾರಿಯಾಗಿದೆ.
  7. ಮಲಬದ್ಧತೆ, ಮೂಲವ್ಯಾಧಿ ರೋಗಗಳಲ್ಲಿ ಕಾಮಕಸ್ತೂರಿ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಕಲ್ಲು ಸಕ್ಕರೆ ಸೇರಿಸಿ ಶರಬತ್ತು ತಯಾರಿಸಿ ಕುಡಿಯುವುದು ಉತ್ತಮವಾದ ಔಷಧಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ