Home Remedies: ಪದೇ ಪದೇ ಊದಿಕೊಳ್ಳುವ ಪಾದಗಳಿಗೆ ಇಲ್ಲಿದೆ ಪರಿಹಾರ!

| Updated By: ಗಂಗಾಧರ​ ಬ. ಸಾಬೋಜಿ

Updated on: Sep 17, 2022 | 5:53 PM

ಈ ಲೇಖನದಲ್ಲಿ, ಪಾದಗಳಲ್ಲಿ ಆಗಾಗ್ಗೆ ಊತಕ್ಕೆ ಕಾರಣಗಳು ಯಾವುವು ಮತ್ತು ಅದರಿಂದ ಪರಿಹಾರವನ್ನು ಪಡೆಯಲು ನೀವು ಯಾವ ಮನೆಮದ್ದುಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿಯೋಣ. 

Home Remedies: ಪದೇ ಪದೇ ಊದಿಕೊಳ್ಳುವ ಪಾದಗಳಿಗೆ ಇಲ್ಲಿದೆ ಪರಿಹಾರ!
ಪ್ರಾತಿನಿಧಿಕ ಚಿತ್ರ
Follow us on

ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಪಾದಗಳಲ್ಲಿ ಊತ ಸಮಸ್ಯೆ ಇದ್ದರೆ, ನಿಮ್ಮ ದೇಹದಲ್ಲಿ ಕೆಲವು ರೀತಿಯ ಸಮಸ್ಯೆಗಳಿವೆ ಎಂದು ಹೇಳಲಾಗುತ್ತದೆ. ಅದನ್ನು ನಿರ್ಲಕ್ಷಿಸುವುದು ಕೂಡ ತಪ್ಪು. ಹೆಚ್ಚು ಹೊತ್ತು ನಿಂತ್ತುಕೊಳ್ಳುವುದು ಅಥವಾ ಕುಳಿತುಕೊಳ್ಳುವವರಿಗೆ ಪಾದಗಳಲ್ಲಿ ಊತದ ಜೊತೆಗೆ ನೋವು ಕಾಣಿಸಿಕೊಳ್ಳುತ್ತದೆ. ಪಾದಗಳಿಗೆ ಸಂಬಂಧಿಸಿದ ಈ ಸಮಸ್ಯೆಯೂ ಕಾಯಿಲೆಗೆ ಕಾರಣವಾಗಬಹುದು. ಈ ಲೇಖನದಲ್ಲಿ, ಪಾದಗಳಲ್ಲಿ ಆಗಾಗ್ಗೆ ಊತಕ್ಕೆ ಕಾರಣಗಳು ಯಾವುವು ಮತ್ತು ಅದರಿಂದ ಪರಿಹಾರವನ್ನು ಪಡೆಯಲು ನೀವು ಯಾವ ಮನೆಮದ್ದುಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿಯೋಣ.

ಇದು ಆಗಾಗ್ಗೆ ಊತಕ್ಕೆ ಕಾರಣವಾಗಬಹುದು

ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ಅತಿಯಾದ ದ್ರವದ ಶೇಖರಣೆ ಆಗುವುದರಿಂದ ಪಾದಗಳಲ್ಲಿ ಊತದ ಸಮಸ್ಯೆಯನ್ನು ಹೊಂದಿರುತ್ತಾರೆ. ಆಯುರ್ವೇದದಲ್ಲಿ ಪಾದಗಳ ಊತದ ಕಾರಣಗಳನ್ನು ಸಹ ನೀಡಲಾಗಿದೆ. ಆಯುರ್ವೇದ ತಜ್ಞರ ಪ್ರಕಾರ, ಕಫ ಮತ್ತು ವಾತ ದೋಷವು ಕಲುಷಿತವಾಗಿದ್ದರೆ, ದೇಹದ ಭಾಗಗಳಲ್ಲಿ ಪದೇ ಪದೇ ಊತವಾಗಬಹುದು. ಔಷಧ ಸೇವಿಸಿದ ನಂತರ ಅದರ ಅಡ್ಡ ಪರಿಣಾಮಗಳು ಕಂಡುಬಂದರೆ ದೇಹದ ಭಾಗಗಳಲ್ಲಿ ಊತ ಉಂಟಾಗುತ್ತದೆ. ಮೂತ್ರಪಿಂಡದ ಸಮಸ್ಯೆಗಳನ್ನು ಹೊಂದಿರುವ ಜನರು ಸಾಮಾನ್ಯವಾಗಿ ಕಾಲುಗಳು, ಕೈಗಳು ಅಥವಾ ಬಾಯಿಯ ಮೇಲೆ ಊತದ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ.

ಈ ಮನೆಮದ್ದುಗಳನ್ನು ಅನುಸರಿಸಿ

ಪಾದಗಳಲ್ಲಿ ಊತ ಉಂಟಾದಾಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾದರೂ, ಆದರೆ ಮನೆಮದ್ದುಗಳಿಂದ ಸಹ ಪರಿಹಾರಕೊಂಡುಕೊಳ್ಳಬಹುದು. ನಿಂಬೆ ಸೇವನೆಯು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ನೀವು ಬಯಸಿದರೆ ಇದಕ್ಕೆ ಜೇನುತುಪ್ಪವನ್ನು ಸೇರಿಸಬಹುದು.

ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕವೂ ಉರಿಯೂತವನ್ನು ಕಡಿಮೆ ಮಾಡಬಹುದು. ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಫ್ರೈ ಮಾಡಿ. ಉಗುರುಬೆಚ್ಚಗಿರುವಾಗ ಎಣ್ಣೆಯನ್ನು ಊದಿಕೊಂಡ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ.

ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಇಂತಹ ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಿ. ನೀವು ಚಿಯಾ ಬೀಜಗಳು, ಮೊಗ್ಗುಗಳು, ಬಾಳೆಹಣ್ಣು, ಕಿಡ್ನಿ ಬೀನ್ಸ್ ಮತ್ತು ಮೂಂಗ್ ದಾಲ್​ನ್ನು ಸೇವಿಸಬಹುದು.

(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.