Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳಸಿದ ಬಾಟಲ್​ನಲ್ಲಿ ಅಂಟಿಕೊಂಡಿರುತ್ತವೆ ಸೂಕ್ಷ್ಮಜೀವಿಗಳು: ಈ ವಿಧಾನದ ಮೂಲಕ ಶುಚಿಗೊಳಿಸಿ

ಅನೇಕ ಜನರು ಬಾಟಲಿಯ ನೀರನ್ನು ತುಂಬಿರುತ್ತಾರೆ, ಆದರೆ ಬಾಟಲಿಯನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಇದು ಮತ್ತೆ ನೀವು ಅದೇ ಬಾಟಲಿಗೆ ನೀರನ್ನು ತುಂಬಿಸಿದಾಗ ಆ ನೀರು ಕಲುಷಿತವಾಗುತ್ತದೆ ಎಂಬುದು ತಿಳಿದಿರಲಿ.

ಬಳಸಿದ ಬಾಟಲ್​ನಲ್ಲಿ ಅಂಟಿಕೊಂಡಿರುತ್ತವೆ ಸೂಕ್ಷ್ಮಜೀವಿಗಳು: ಈ ವಿಧಾನದ ಮೂಲಕ ಶುಚಿಗೊಳಿಸಿ
ಕುಡಿಯುವ ನೀರಿನ ಬಾಟಲಿಯನ್ನು ಶುಚಿಗೊಳಿಸುವ ಸುಲಭ ವಿಧಾನಗಳು (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Sep 18, 2022 | 7:33 AM

ಅನೇಕ ಜನರು ನೀರು ಕುಡಿಯಲು ಬಾಟಲಿಯನ್ನು ಬಳಸುತ್ತಾರೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದರೆ ಕೇವಲ ಶುದ್ಧ ನೀರು ಕುಡಿದರೆ ಸಾಕಾಗುವುದಿಲ್ಲ, ನಿಮ್ಮ ನೀರಿನ ಬಾಟಲಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ ಬಾಟಲಿಯನ್ನು ಸ್ವಚ್ಛವಾಗಿ ಮತ್ತು ರೋಗಾಣು ಮುಕ್ತವಾಗಿಡುವುದು ತುಂಬಾ ಕಷ್ಟದ ಕೆಲಸ. ಅನೇಕ ಜನರು ಬಾಟಲಿಯ ನೀರನ್ನು ತುಂಬಿರುತ್ತಾರೆ, ಆದರೆ ಬಾಟಲಿಯನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಇದು ಮತ್ತೆ ನೀವು ಅದೇ ಬಾಟಲಿಗೆ ನೀರನ್ನು ತುಂಬಿಸಿದಾಗ ನೀರು ಕಲುಷಿತಗೊಳ್ಳುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ನೀರಿನ ಬಾಟಲಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ ಎಂದು ತಿಳಿಯೋಣ.

ಲಿಕ್ವಿಡ್ ಡಿಶ್ ಸೋಪ್

ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸಲು ನೀವು ಲಿಕ್ವಿಡ್ ಡಿಶ್ ಸೋಪ್ ಅನ್ನು ಬಳಸಬಹುದು. ಅದಕ್ಕಾಗಿ ಬಾಣಲೆ ಅಥವಾ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಬಿಸಿ ಮಾಡಿ. ಇದಕ್ಕೆ 1-2 ಚಮಚ ದ್ರವ ಸೋಪ್ ಸೇರಿಸಿ. ನಂತರ ಅದಕ್ಕೆ ಒಂದು ಬಾಟಲ್ ನೀರನ್ನು ಸೇರಿಸಿ ರಾತ್ರಿಯಿಡೀ ಇಡಿ. ಬೆಳಿಗ್ಗೆ ಸರಳ ನೀರಿನಲ್ಲಿ ಬಾಟಲಿಯನ್ನು ತೊಳೆಯಿರಿ.

ನಿಂಬೆ ಮತ್ತು ಉಪ್ಪು

ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸಲು ನಿಂಬೆ, ಉಪ್ಪು ಮತ್ತು ಐಸ್ ಅನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ನೀರಿನ ಬಾಟಲಿಯಲ್ಲಿ 1 ಕಪ್ ನೀರನ್ನು ಸೇರಿಸಿ. ನಂತರ ಆ ಬಾಟಲಿಗೆ ನಿಂಬೆ ರಸ, ಉಪ್ಪು ಮತ್ತು ಐಸ್ ಸೇರಿಸಿ. ಈ ಎಲ್ಲಾ ವಸ್ತುಗಳನ್ನು ಬಲವಾಗಿ ಶೇಕ್ ಮಾಡಿ. ಬಳಿಕ ಬಾಟಲಿಯನ್ನು ನೀರಿನಿಂದ ತೊಳೆಯಿರಿ.

ಅಡುಗೆ ಸೋಡಾ ಮತ್ತು ವಿನೆಗರ್

ಅಡುಗೆ ಸೋಡಾ ಮತ್ತು ವಿನೆಗರ್ ನೀರಿನ ಬಾಟಲಿಯನ್ನು ಸ್ವಚ್ಛವಾಗಿಡಲು ಸಹಾಯಕವಾಗಿದೆ. ಇದಕ್ಕಾಗಿ ಒಂದು ಬಾಟಲಿಯಲ್ಲಿ 1 ಚಮಚ ಅಡಿಗೆ ಸೋಡಾ ಮತ್ತು 2 ಚಮಚ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ಸಮಯದವರೆಗೆ ಇರಿಸಿ. ನಂತರ ಬಾಟಲಿಯನ್ನು ಸರಳ ನೀರಿನಿಂದ ತೊಳೆಯಿರಿ. ಇದು ನಿಮ್ಮ ನೀರಿನ ಬಾಟಲಿಯನ್ನು ಹೊಳೆಯುವಂತೆ ಮಾಡಲಿದೆ.

ಮತ್ತಷ್ಟು ಲೈಫ್​ಸ್ಟೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ