ಮಳೆಗಾಲದಲ್ಲಿ ಬಂತೆಂದರೆ ಸಾಕು ಆರೋಗ್ಯ ಸಮಸ್ಯೆಗಳ ಜೊತೆಗೆ ಸುತ್ತಮುತ್ತ ಕಾಡುವ ಕೀಟಗಳೇ ಹೆಚ್ಚು. ಹೌದು, ಮಳೆ ಬಿದ್ದರೆ ಸಾಕು ನೆಲದಡಿಯಲ್ಲಿ ಅವಿತುಕುಳಿತಿದ್ದ ಕೀಟಗಳು ಮನೆಯೊಳಗೆ ಪ್ರವೇಶಿಸುತ್ತವೆ. ಈ ಕೀಟಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕೀಟಗಳು ಕಚ್ಚಿ ಸೋಂಕುಗಳು ಬರಬಹುದು. ಈ ಕೀಟಗಳನ್ನು ಹೋಗಲಾಡಿಸಲು ಕಸರತ್ತು ಮಾಡುವವರೇ ಹೆಚ್ಚು. ಈ ಸಮಯದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಕ್ರಿಮಿಕೀಟಗಳನ್ನು ಸುಲಭವಾಗಿ ಓಡಿಸಬಹುದು.
- ಮನೆಯನ್ನು ಸ್ವಚ್ಛಗೊಳಿಸುವಾಗ ವಿನಿಗರ್ ಗೆ ಸ್ವಲ್ಪ ನೀರು ಸೇರಿಸಿ ಬಳಸಿ ಸ್ಪ್ರೇ ಮಾಡಿದರೆ ಇರುವೆಗಳು ಮತ್ತು ಜೇಡಗಳು ಬರುವುದಿಲ್ಲ.
- ವಿನೆಗರ್ ಜೊತೆಗೆ ಬೇವಿನ ಎಲೆಗಳನ್ನು ಪುಡಿಮಾಡಿ ಒರೆಸುವ ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡುವುದರಿಂದ ಕೀಟಗಳ ಬಾಧೆಯನ್ನು ತಡೆಯಬಹುದು.
- ವಿನೆಗರ್ ಗೆ ಸ್ವಲ್ಪ ಪ್ರಮಾಣದಲ್ಲಿ ಹರಳೆಣ್ಣೆ, ನಿಂಬೆರಸ ಅಥವಾ ಕರ್ಪೂರ ಬೆರೆಸಿ ಸ್ಪ್ರೇ ಮಾಡುವುದರಿಂದಲೂ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
- ಕೀಟಗಳ ಹಾವಳಿ ತಡೆಯಲು ಕಾಳು ಮೆಣಸನ್ನು ಸಣ್ಣಗೆ ರುಬ್ಬಿಕೊಂಡು ಬಾಟಲಿಯಲ್ಲಿ ಹಾಕಿ ಕೀಟಗಳು ಅಡಗಿರುವ ಸ್ಥಳಗಳ ಮೇಲೆ ಸ್ಪ್ರೇ ಮಾಡಿದರೆ ಕೀಟಗಳು ಓಡಿ ಹೋಗುತ್ತವೆ.
- ನಿಂಬೆ ಹಾಗೂ ಅಡುಗೆ ಸೋಡಾ ಬೆರೆಸಿ ದ್ರಾವಣವನ್ನು ಬಾಟಲಿಯಲ್ಲಿ ತುಂಬಿಸಿ. ಈ ನೀರನ್ನು ಮನೆಯೊಳಗೆ ಹಾಗೂ ಬಾಗಿಲಿನ ಮೂಲೆಗಳಿಗೆ ಸಿಂಪಡಿಸಿದರೆ ಕ್ರಿಮಿ ಕೀಟಗಳು ದೂರ ಹೋಗುತ್ತವೆ.
- ಪುದೀನ ತೈಲವನ್ನು ಒಂದು ಕಪ್ ನೀರಿಗೆ ಮಿಶ್ರಣ ಮಾಡಿ, ಒಂದು ಸ್ಪ್ರೇ ಬಾಟಲಿಗೆ ಹಾಕಿಡಿ. ಇದನ್ನು ಮನೆಯ ಬಾಗಿಲು, ಕಿಟಕಿ ಸೇರಿದಂತೆ ಕ್ರಿಮಿ ಕೀಟಗಳಿದ್ದರೆ ಓಡಿ ಹೋಗುತ್ತವೆ.
- ಒಂದು ಲೋಟ ನೀರಿಗೆ ಒಂದು ಲೋಟ ರಬ್ಬಿಂಗ್ ಆಲ್ಕೋಹಾಲ್ ಹಾಗೂ ಒಂದು ಚಮಚ ವೆಜಿಟೇಬಲ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಮನೆಯ ಮೂಲೆಗೆ ಸ್ಪ್ರೇ ಮಾಡಿದರೆ ಕೀಟಗಳು ಸಾಯುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: