Home remedies: ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ನೈಸರ್ಗಿಕ ಮನೆಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 15, 2023 | 6:07 PM

ನೀವು ಮಲಬದ್ಧತೆಯ ಸಮಸ್ಯೆಯನ್ನು ಹೊಂದಿದ್ದೀರಾ, ಈ ಜೀರ್ಣಕ್ರಿಯೆಯ ಸಮಸ್ಯೆಯನ್ನು ಪರಿಹರಿಸಲು ಈ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ. ಮಲಬದ್ಧತೆ ಎಲ್ಲಾ ವಯಸ್ಸಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ನಮ್ಮ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ.

Home remedies: ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ನೈಸರ್ಗಿಕ ಮನೆಮದ್ದು
ಸಾಂದರ್ಭಿಕ ಚಿತ್ರ
Follow us on

ನೀವು ಮಲಬದ್ಧತೆ(Constipation) ಸಮಸ್ಯೆಯನ್ನು ಹೊಂದಿದ್ದೀರಾ, ಈ ಜೀರ್ಣಕ್ರಿಯೆಯ ಸಮಸ್ಯೆಯನ್ನು ಪರಿಹರಿಸಲು ಈ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ. ಮಲಬದ್ಧತೆ ಎಲ್ಲಾ ವಯಸ್ಸಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ನಮ್ಮ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಮಲಬದ್ಧತೆಯ ಹಿಂದಿನ ಕೆಲವು ಸಾಮಾನ್ಯ ಕಾರಣಗಳೆಂದರೆ ನಾರಿನ ಆಹಾರ ಪದಾರ್ಥಗಳಾದ ಹಣ್ಣು ತರಕಾರಿಗಳನ್ನು ಸೇವಿಸದಿರುವುದು, ಸಾಕಷ್ಟು ಪ್ರಮಾಣದ ನೀರು ಕುಡಿಯದಿರುವುದು, ನಿಯಮಿತ ವ್ಯಾಯಾಮ ಮಾಡದಿರುವುದು ಇತ್ಯಾದಿ. ಈ ಮಲಬದ್ಧತೆಯ ಸಮಸ್ಯೆಯನ್ನು ನಿಭಾಯಿಸಲು ಅನೇಕರು ತಕ್ಷಣ ವೈದ್ಯರನ್ನು ಭೇಟಿ ಮಾಡುತ್ತಾರೆ. ಆದರೆ ನೀವು ಯಾವಾಗಲೂ ಔಷಧಿಗಳ ಸಹಾಯವನ್ನು ಮಡೆಯಬೇಕಿಲ್ಲ. ಕೆಲವೊಮ್ಮೆ ಮನೆಮದ್ದುಗಳು ಸಹ ಇದಕ್ಕೆ ಚಿಕಿತ್ಸೆ ನೀಡಬಹುದು. ಪೌಷ್ಟಿಕತಜ್ಞ ಲೋವ್ನೀತ್ ಬಾತ್ರಾ ಅವರು ತಮ್ಮ ಇನ್ಟಾಗ್ರಾಮ್ ಪೋಸ್ಟ್ನಲ್ಲಿ ಮಲಬದ್ಧತೆಗೆ ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮತ್ತು ಅವರು ಹೇಳುತ್ತಾರೆ ಮಲಬದ್ಧತೆಯು ನಮ್ಮ ಜೀವನಶೈಲಿಯನ್ನು ಸರಿಪಡಿಸುವ ಮೂಲಕ ಮಾತ್ರ ಪರಿಹರಿಸಬಹುದಾದ ಒಂದು ಸಾಮಾನ್ಯ ಕರುಳಿನ ಸಮಸ್ಯೆಯಾಗಿದೆ.

ಇದನ್ನೂ ಓದಿ:Home Remedies for Dark Circles: ಡಾರ್ಕ್ ಸರ್ಕಲ್‌ ಕಡಿಮೆ ಮಾಡಲು ಮನೆಮದ್ದು ಇಲ್ಲಿದೆ

ಮಲಬದ್ಧತೆಯನ್ನು ನಿವಾರಿಸುವ ಕೆಲವು ಮನೆಮದ್ದುಗಳು ಇಲ್ಲಿವೆ:

ಮೊಸರು ಹಾಗೂ ಅಗಸೆ ಬೀಜದ ಪುಡಿ: ಮೊಸರು ಪ್ರೋಬಯಟಿಕ್ ಅಂಶವನ್ನು ಹೊಂದಿದೆ. ಇದನ್ನು ಬೈಫಿಡೋಬ್ಯಾಕ್ಟೀರಿಯಂ ಲ್ಯಾಕ್ಟಿಸ್ ಎಂದು ಕರೆಯಲಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೂ ಅಗಸೆ ಬೀಜಗಳು ಕರಗುವ ನಾರಿನಾಂಶದ ಮೂಲವಾಗಿದೆ. ಇದು ಮಲವನ್ನು ಮೃದುವಾಗಿ ಮತ್ತು ಸುಲಭವಾಗಿ ವಿಸರ್ಜನೆಯಾಗುವಂತೆ ಮಾಡುತ್ತದೆ.

ನೆಲ್ಲಿ ಕಾಯಿ ಜ್ಯೂಸ್: ಬೆಳಗ್ಗೆ ನೆಲ್ಲಿ ರಸವನ್ನು ಕುಡಿಯಬೇಕು. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ಮಲಬದ್ಧತೆಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ.

ಓಟ್ಸ್: ಓಟ್ ಹೊಟ್ಟು ಕರಗಬಲ್ಲ ಮತ್ತು ಕರಗದ ಫೈಬರ್‌ಗಳಿಂದ ಸಮೃದ್ಧವಾಗಿದೆ. ಇದು ಮಲಬದ್ಧತೆಯನ್ನು ನಿವಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ತುಪ್ಪ ಮತ್ತು ಹಾಲು: ತುಪ್ಪವು ಬ್ಯಟರಿಕ್ ಆಮ್ಲದ ಸಮೃದ್ಧ ಮೂಲವಾಗಿದೆ. ಇದು ಕರುಳಿನ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಮಲ ಚಲನೆಗೆ ಸಹಾಯ ಮಾಡುತ್ತದೆ. ನೀವು ಮಲಗುವ ಮೊದಲು ಒಂದು ಕಪ್ ಬಿಸಿ ಹಾಲಿಗೆ 1 ಟೀ ಚಮಚ ತುಪ್ಪವನ್ನು ಸೇರಿಸಿ ಕುಡಿಯಬೇಕು. ಇದು ಮರುದಿನ ಬೆಳಗ್ಗೆ ಮಲಬದ್ಧತೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ ಮಾರ್ಗವಾಗಿದೆ.

ಹಸಿರು ಸೊಪ್ಪು ತರಕಾರಿಗಳು: ಸೊಪ್ಮ್ಪಗಳು, ಬ್ರಸೆಲ್ಸ್ ಮೊಗ್ಗುಗಳು, ಬ್ರೊಕೊಲಿಯಂತಹ ಹಸಿರು ತರಕಾರಿಗಳು ಫೈಬರ್‌ನಿಂದ ಸಮೃದ್ಧವಾಗಿದೆ. ಹಾಗೂ ಮಿಟಮಿನ್ ಸಿ ಮತ್ತು ಕೆ ಯ ಉತ್ತಮ ಮೂಲವಾಗಿದೆ. ಈ ಹಸಿರು ತರಕಾರಿಗಳ ಸೇವನೆಯು ಮಲಬದ್ಧತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನೀರು: ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದರಿಂದ ಮಲಬದ್ಧತೆಯನ್ನು ಸುಧಾರಿಸಬಹುದು.