Aaloo Tikki
Image Credit source: Sinfully Spicy
ಸಂಜೆ ಕಾಫಿ ಅಥವಾ ಚಹಾದೊಂದಿದೆ ಗರಿಗರಿಯಾದ ಮಸಾಲೆಯುಕ್ತ ತಿನಿಸು ಇದ್ದರೇನೇ ಖುಷಿ. ಕೆಲವರು ಹಸಿವನ್ನು ನೀಗಿಸಲು ಸಂಜೆ ಹೊತ್ತಿನಲ್ಲಿ ಬೀದಿ ಬದಿಯ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಆದರೆ ಈ ರೀತಿಯ ಜಂಕ್ ಫುಡ್ ಸೇವನೆಯು ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಇದರ ನಿಯಮಿತ ಸೇವನೆಯು ಬೊಜ್ಜು ಹೆಚ್ಚಾಗಲು, ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ ನೀವು ಸಂಜೆಯ ಲಘು ಆಹಾರಕ್ಕಾಗಿ ಆರೋಗ್ಯಕರ ಆಯ್ಕೆಯನ್ನು ಆರಿಸಿಕೊಳ್ಳುವುದು ಮುಖ್ಯ. ಬೀದಿಬದಿಯಲ್ಲಿ ಎಣ್ಣೆಯಲ್ಲಿ ಕರಿದ ಭಜ್ಜಿ, ಬೋಂಡಾ, ಪಕೋಡಾ, ಸಮೋಸಾ ಇತ್ಯಾದಿ ತಿನಿಸುಗಳನ್ನು ತಿನ್ನುವ ಬದಲು ನೀವು ಮನೆಯಲ್ಲಿಯೇ ಸುಲಭವಾಗಿ ಆರೋಗ್ಯಕರ ಸ್ನ್ಯಾಕ್ ರೆಸಿಪಿ ಮಾಡಬಹುದು. ಸಂಜೆ ಒಂದು ಕಪ್ ಚಹಾದೊಂದಿಗೆ ಗರಿಗರಿ ಸ್ಯ್ನಾಕ್ ತಿನ್ನಲು ಬಯಸಿದರೆ ಕಡಿಮೆ ಎಣ್ಣೆಯನ್ನು ಬಳಸಿ ಆಲೂ ಟಿಕ್ಕಿ ತಯಾರಿಸಿಬಹುದು.
ಆಲೂ ಟಿಕ್ಕಿ ತಯಾರಿಸುವ ಸುಲಭ ವಿಧಾನ:
ಆಲೂ ಟಿಕ್ಕಿ ಮಾಡಲು ಬೇಕಾಗುವ ಸಾಮಾಗ್ರಿಗಳು:
- ಆಲೂಗಡ್ಡೆ – 4 ಮಧ್ಯಮ ಗಾತ್ರದ್ದು
- ಹಸಿ ಮೆಣಸಿನಕಾಯಿ – 2 ರಿಂದ 3
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
- ಕೊತ್ತಂಬರಿ ಪುಡಿ – 1 ಟೀಸ್ಪೂನ್
- ಜೀರಿಗೆ ಪುಡಿ – ½ ಟೀಸ್ಪೂನ್
- ಅರಶಿನ ಪುಡಿ – ¼ ಟೀಸ್ಪೂನ್
- ಗರಂ ಮಸಾಲಾ – ¼ ಟೀಸ್ಪೂನ್
- ರುಚಿಗೆ ತಕ್ಕಷ್ಟು ಉಪ್ಪು
- ಸ್ವಲ್ಪ ಕೊತ್ತಂಬರಿ ಸೊಪ್ಪು
- ಎಣ್ಣೆ
ಇದನ್ನೂ ಓದಿ: ಮೊಟ್ಟೆಗಳನ್ನು ಈ ರೀತಿ ಶೇಖರಿಸಿಟ್ಟರೆ ಹಲವು ದಿನಗಳವರೆಗೆ ಕೆಡುವುದಿಲ್ಲ
ಆಲೂ ಟಿಕ್ಕಿ ತಯಾರಿಸುವ ಸುಲಭ ವಿಧಾನ:
- ಆಲೂ ಟಿಕ್ಕಿ ತಯಾರಿಸಲು ಮೊದಲಿಗೆ 4 ಮಧ್ಯಮ ಗಾತ್ರದ ಆಲೂಗಡ್ಡೆಯನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ತೊಳೆದುಕೊಂಡು ಒಂದು ಪಾತ್ರೆಯಲ್ಲಿ ಅದನ್ನು ಬೇಯಿಸಿಕೊಳ್ಳಿ.
- ಆಲೂಗಡ್ಡೆ ಬೆಂದ ಬಳಿಕ ಅದನ್ನು ತಣ್ಣಗಾಗಲು ಬಿಡಿ, ಅದು ತಣ್ಣಗಾದ ಬಳಿಕ ಆಲೂಗಡ್ಡೆ ಸಿಪ್ಪೆ ಸುಳಿದು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ.
- ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮ್ಯಾಶ್ ಮಾಡಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯಾ ಪುಡಿ, ಜೀರಿಗೆ ಪುಡಿ, ಅರಶಿನ ಪುಡಿ, ಗರಂ ಮಸಾಲಾ ಹಾಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಕೂಡಾ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ನಂತರ ಈ ಮಿಶ್ರಣದಿಂದ ಸಣ್ಣ ಸಣ್ಣ ಕಟ್ಲೆಟ್ ತಯಾರಿಸಿ, ಬಳಿಕ ಅದನ್ನು ಎಣ್ಣೆಯಲ್ಲಿ ಫ್ರೈ ಮಾಡಿದರೆ ಗರಿಗರಿಯಾದ ಆಲೂ ಟಿಕ್ಕಿ ಸವಿಯಲು ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ