ನಿಮ್ಮ ಸಂಗಾತಿಯ ಜೊತೆಗೆ ಪ್ರಸ್ತುತ ಯಾವ ರೀತಿಯ ಸಂಬಂಧದಲ್ಲಿ ಇದ್ದೇವೆ ಎಂಬುದು, ನಾವು ಅವರೊಂದಿಗೆ ಭವಿಷ್ಯದಲ್ಲಿ ಹೇಗೆ ಇರುತ್ತೇವೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತದೆ. ಇದು ಭವಿಷ್ಯದಲ್ಲಿ ಸಂಬಂಧದ ನಿರೀಕ್ಷೆಯ ಬಗ್ಗೆ ನಮಗೆ ಹೆಚ್ಚಿನ ಸ್ಪಷ್ಟತೆಯನ್ನು ನೀಡುತ್ತದೆ. ಸಂಬಂಧವು ಉತ್ತಮ ಸಂವಹನ, ಪರಸ್ಪರ ಅರ್ಥಮಾಡಿಕೊಳ್ಳುವ ಕೌಶಲ್ಯ, ಪರಸ್ಪರ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಬಹಳಷ್ಟು ಪ್ರೀತಿ ಮತ್ತು ತಾಳ್ಮೆಯನ್ನು ಆಧರಿಸಿದೆ. ಸಂಬಂಧದಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ಸ್ಥಳವನ್ನು ರಚಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ. ಥೆರಪಿಸ್ಟ್ ಎಲಿಜಬೆತ್ ಆರ್ನ್ಶಾ ಅವರು ಪ್ರಣಯವನ್ನು ಪುನರುಜ್ಜೀವನಗೊಳಿಸುವುದು ಹಾಗೂ ಆರೋಗ್ಯಕರ, ಸಂತೋಷದಾಯಕ ಸಂಬಂಧವನ್ನು ಹೇಗೆ ರಚಿಸುವುದು ಎಂಬುದರ ಕುರಿತು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಇಬ್ಬರು ಜೊತೆಯಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಂಬಂಧದಲ್ಲಿ ಹಂಚಿಕೆಯ ಜವಬ್ದಾರಿಗಳ ಅರ್ಥವನ್ನು ಸೃಷ್ಟಿಸುತ್ತದೆ. ಮತ್ತು ಇಬ್ಬರೂ ಸಮನವಾಗಿ ಮುಖ್ಯ ಎಂಬ ಭಾವನೆಯನ್ನು ಮೂಡಿಸುತ್ತದೆ. ಕನಸು ಮತ್ತು ಗುರಿಗಳನ್ನು ಹಂಚಿಕೊಳ್ಳುವುದು ಹಾಗೂ ಇತರ ವ್ಯಕ್ತಿಗಳ ಭಾವೋದ್ರೇಕ, ಮಹತ್ವಾಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಪರಸ್ಪರ ಗೌರವಿಸಲು ಮತ್ತು ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
ಒಟ್ಟಿಗೆ ಸಮಯವನ್ನು ಕಳೆಯುವುದು ಮುಖ್ಯವಾಗಿದ್ದರೂ, ನಮ್ಮ ಹವ್ಯಾಸಗಳು, ಆಚರಣೆಗಳು ಮತ್ತು ಸ್ನೇಹವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಬೇಕು. ನಮ್ಮ ಆಸೆಗಳು ಮತ್ತು ಭಾವನೆಗಳನ್ನು ನಮ್ಮ ಸಂಗಾತಿಯ ಜೊತೆ ಹಂಚಿಕೊಳ್ಳಬೇಕು. ಇದು ಆರೋಗ್ಯಕರ ಸಂವಹನ ಮತ್ತು ತಿಳುವಳಿಕೆಯನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ:Healthy Relationship: ನಿಮ್ಮಿಬ್ಬರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಿಂಪಲ್ ಟಿಪ್ಸ್ ಫಾಲೋ ಮಾಡಿ
ನಮ್ಮ ಸಂಗಾತಿಯ ಜೊತೆಗೆ ಪ್ರಸ್ತುತ ಯಾವ ರೀತಿಯ ಸಂಬಂಧದಲ್ಲಿ ಇದ್ದೇವೆ ಎಂಬುದು, ನಾವು ಅವರೊಂದಿಗೆ ಭವಿಷ್ಯದಲ್ಲಿ ಹೇಗೆ ಇರುತ್ತೇವೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತದೆ. ಇದು ಭವಿಷ್ಯದಲ್ಲಿ ಸಂಬಂಧದ ನಿರೀಕ್ಷೆಯ ಬಗ್ಗೆ ನಮಗೆ ಹೆಚ್ಚಿನ ಸ್ಪಷ್ಟತೆಯನ್ನು ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: