Portion Control: ನಿಮ್ಮ ಆಹಾರ ಕ್ರಮದಲ್ಲಿ ಈ ನಿಯಂತ್ರಣಗಳು ಇರಬೇಕು, ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 11, 2023 | 12:22 PM

ಊಟದಲ್ಲಿನ ಭಾಗ ನಿಯಂತ್ರಣವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿದೆ. ಆದರೆ ಕೆಲವೊಮ್ಮೆ ಇದನ್ನು ಕಡೆಗಣಿಸಲಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ನಿಮ್ಮ ಊಟವನ್ನು ಹೇಗೆ ತಿನ್ನಬೇಕು ಎಂಬುದರ ಕುರಿತು ತಜ್ಞರು ಕೆಲವು ಸಲಹೆಗಳನ್ನು ನೀಡುತ್ತಾರೆ.

Portion Control: ನಿಮ್ಮ ಆಹಾರ ಕ್ರಮದಲ್ಲಿ ಈ ನಿಯಂತ್ರಣಗಳು ಇರಬೇಕು, ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸರಿಯಾದ ಪ್ರಮಾಣದಲ್ಲಿ ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆದರೂ ಬಿಡುವಿಲ್ಲದ ವೇಳಾಪಟ್ಟಿಗಳು ಮತ್ತು ವಿವಿಧ ಗೊಂದಲದೊಂದಿಗೆ, ನಾವು ಸೇವಿಸುವ ಆಹಾರದ ಪ್ರಮಾಣವನ್ನು ಮೇಲ್ವಿಚಾರಣೆ ಮಾಡುವುದು ಸವಾಲಿನ ಸಂಗತಿಯಾಗಿದೆ. ಮತ್ತು ಇಂದಿನ ವೇಗದ ಜಗತ್ತಿನಲ್ಲಿ ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವ ಸಾಧ್ಯತೆ ಇರುತ್ತದೆ. ಈ ಅಭ್ಯಾಸವು ತೂಕ ಹೆಚ್ಚಾಗುವುದು ಮತ್ತು ಇತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವಲ್ಲಿ ಭಾಗ ನಿಯಂತ್ರಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಭಾಗ ನಿಯಂತ್ರಣ ಎಂದರೆ ಒಂದು ನಿರ್ದಿಷ್ಟ ಆಹಾರದ ಆರೋಗ್ಯಕರ ಪ್ರಮಾಣವನ್ನು ಆರಿಸುವುದು. ಅತಿಯಾಗಿ ತಿನ್ನದೆ ಆಹಾರದಲ್ಲಿನ ಪೋಷಕಾಂಶಗಳ ಪ್ರಯೋಜನಗಳನ್ನು ಪಡೆಯಲು ಭಾಗನಿಯಂತ್ರಣವು ನಮಗೆ ಸಹಾಯ ಮಾಡುತ್ತದೆ.

TAN 365 ನ ಸಂಸ್ಥಾಪಕಿ ಹಾಗೂ ಪೌಷ್ಟಿಕ ತರಬೇತುದಾರರಾದ ತನಿಶಾ ಬಾವಾ ಹೇಳುತ್ತಾರೆ, ಪೌಷ್ಟಿಕವಾದ ಸಮತೋಲಿತ ಊಟವು ನಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅತ್ಯಂತ ಮುಖ್ಯವಾಗಿದೆ. ನಮ್ಮ ದೇಹಕ್ಕೆ ದಿನದಿಂದ ದಿನಕ್ಕೆ ಅಗತ್ಯವಿರುವ ಸೂಕ್ಷ್ಮ ಮತ್ತು ಸ್ಥೂಲ ಪೋಷಕಾಂಶಗಳು ಇಲ್ಲಿವೆ”

ಪ್ರೋಟೀನ್: (ಪ್ರತಿ ಊಟಕ್ಕೆ 120 ರಿಂದ 200 ಗ್ರಾಂ) ಇದರ ಮೂಲಗಳು: ಕೋಳಿ, ಮೀನು, ಮೊಟ್ಟೆ, ಅಣಬೆಗಳು ಬಟಾಣಿ ಇತ್ಯಾದಿ.

ಆರೋಗ್ಯಕರ ಕೊಬ್ಬು: (ಪ್ರತಿ ಊಟಕ್ಕೆ 15 ರಿಂದ 25 ಗ್ರಾಂ) ಇದರ ಮೂಲಗಳು- ತೆಂಗಿನಕಾಯಿ, ಅವಕಾಡೊ, ತುಪ್ಪ, ಬೆಣ್ಣೆ, ಮೀನು, ಆಲಿವ್ ಎಣ್ಣೆ ಇತ್ಯಾದಿ.

ಫೈಬರ್: (ಪ್ರತಿ ಊಟಕ್ಕೆ 8 ರಿಂದ 12 ಗ್ರಾಂ) ಇದರ ಮೂಲಗಳು- ಕೇಸುಗಡ್ಡೆ, ಹೂಕೋಸು, ಬೀನ್ಸ್, ಪಾಲಕ್ ಮುಂತಾದ ತರಕಾರಿ.

ಇದನ್ನೂ ಓದಿ:ಯಕೃತ್ತಿನ ಆರೋಗ್ಯಕ್ಕಾಗಿ ಆಹಾರದ ಸಲಹೆಗಳು, ಜೀವನಶೈಲಿಯ ಬದಲಾವಣೆಗಳು ಹೀಗೆ ಮಾಡಿಕೊಳ್ಳಿ

ಮನೆಯಲ್ಲಿ ಆಹಾರದ ಭಾಗಗಳನ್ನು ನಾವು ಹೇಗೆ ನಿರ್ವಹಿಸಬಹುದು?

ಟಿವಿ ಮುಂದೆ ಕೂತು ತಿನ್ನುವುದನ್ನು ತಪ್ಪಿಸಿ. ನೀವು ಏನು ತಿನ್ನುತ್ತಿದ್ದೀರಿ ಎಂಬುದರ ಮೇಲೆ ಗಮನವನ್ನು ಕೆಂದ್ರೀಕರಿಸಿ, ಆಹಾರವನ್ನು ಚೆನ್ನಾಗಿ ಅಗಿಯಿರಿ ಮತ್ತು ನೀವು ಆಹಾರದ ವಾಸನೆ ಮತ್ತು ರುಚಿಯನ್ನು ಸಂಪೂರ್ಣವಾಗಿ ಆನಂದಿಸಿ.
ನಿಧಾನವಾಗಿ ತಿನ್ನಿರಿ ಇದರಿಂದ ನಿಮ್ಮ ಮೆದುಳಿಗೆ ನಿಮ್ಮ ಹೊಟ್ಟೆ ತುಂಬಿದೆ ಎಂದು ತಿಳಿದುಕೊಳ್ಳಲು ಸಮಯವಿರುತ್ತದೆ. ನಿಯಮಿತ ಸಮಯದಲ್ಲಿ ಊಟವನ್ನು ಸೇವನೆ ಮಾಡಿ. ಊಟವನ್ನು ತಡಮಾಡುವುದು ಅಥವಾ ಊಟವನ್ನು ಸಂಪೂನ್ವಾಗಿ ಬಿಟ್ಟುಬಿಡುವುದು ನೀವು ಮರುದಿನ ಅತಿಯಾಗಿ ತಿನ್ನಲು ಕಾರಣವಾಗಬಹುದು.

ನಿಮ್ಮ ಊಟವನ್ನು ಚಿಕ್ಕ ತಟ್ಟೆಯಲ್ಲಿ ಸೇವಿಸಿ ಇದರಿಂದ ನಿಮ್ಮ ಹೆಚ್ಚು ಇರುವಂತೆ ನಿಮಗೆ ಕಾಣುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚು ಸಲಾಡ್ ಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ, ವಿಶೇಷವಾಗಿ ಊಟದ ಪ್ರಾರಂಭದಲ್ಲಿ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತು ಕ್ಯಾಲೋರಿಯನ್ನು ನಿಯಂತ್ರಿಸಿ ಹೊಟ್ಟೆ ಪೂರ್ಣವಾಗಿರುವಂತೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: