ಯಾರೊಂದಿಗಾದರೂ ಬ್ರೇಕ್ಅಪ್ ಮಾಡುವುದು ಸಂಬಂಧದಲ್ಲಿ ನಾವು ಎದುರಿಸಬಹುದಾದ ಅತ್ಯಂತ ಕಷ್ಟಕರವಾದ ಮತ್ತು ಭಾವನಾತ್ಮಕವಾಗಿ ಸವಾಲಿನ ಸಂಗತಿಯಾಗಿದೆ. ಆದರೂ ಕೆಲವೊಮ್ಮೆ ಸಂಬಂಧವನ್ನು ಕೊನೆಗೊಳಿಸುವುದು ಅವಶ್ಯಕವಾಗಿರುತ್ತದೆ. ಅದು ಆರೋಗ್ಯಕರ ರೀತಿಯಲ್ಲಾಗಿರಬೇಕು. ಅಂದರೆ ನೀವು ಗೌರವ, ಸಹಾನುಭೂತಿ ಮತ್ತು ಪರಸ್ಪರ ದಯೆಯಿಂದ ಸಂಬಂಧವನ್ನು ಕೊನೆಗೊಳಿಸಬೇಕು. ಇದು ನಿಮಗಿಬ್ಬರಿಗೂ ಅನಗತ್ಯ ಹಾನಿ ಅಥವಾ ದುಃಖವನ್ನು ಉಂಟುಮಾಡುವುದಿಲ್ಲ. ಜನರು ಸಂಬಂಧವನ್ನು ಹಲವು ವಿಭಿನ್ನ ಕಾರಣಗಳಿವೆ. ನಿಮ್ಮ ಆಸಕ್ತಿಗಳು, ಆಲೋಚನೆಗಳು, ಮೌಲ್ಯಗಳು ಮತ್ತು ಭಾವನೆಗಳು ಪರಸ್ಪರ ಹೊಂದಾಣಿಕೆಯಾಗುವುದಿಲ್ಲ ಎಂದು ಕಂಡುಕೊಂಡಾಗ ನೀವು ಸಂಬಂಧವನ್ನು ಕೊನೆಗೊಳಿಸಬಹುದು. ಸಂಬಂದವನ್ನು ಆರೋಗ್ಯಕರವಾಗಿಸಲು ನಾವು ಸುರಕ್ಷಿತ ಅಭ್ಯಾಸಗಳನ್ನು ಕಲಿಯುವಂತೆಯೇ, ಸುರಕ್ಷಿತ ಮತ್ತು ಆರೋಗ್ಯಕರ ರೀತಿಯಲ್ಲಿ ಸಂಬಂಧವನ್ನು ಹೇಗೆ ಕೊನೆಗೊಳಿಸುವುದು ಎಂಬುದನ್ನು ನಾವು ಕಲಿಯಬೇಕು ಎಂದು ಥೆರಫಿಸ್ಟ್ ಇಸ್ರಾ ನಾಸಿರ್ ಅವರು ಹೇಳುತ್ತಾರೆ.
ಪ್ರಾಮಾಣಿಕವಾಗಿ ಮತ್ತು ನೇರವಾಗಿರಿ: ಸಂಬಂಧವನ್ನು ಕೊನೆಗೊಳಿಸುವಾಗ ಪ್ರಾಮಾಣಿಕತೆಯು ಅತ್ಯುತ್ತಮ ನೀತಿಯಾಗಿದೆ. ಸಂಬಂಧವನ್ನು ಕೊನೆಗೊಳಿಸಲು ನಿಮ್ಮ ಕಾರಣಗಳ ಬಗ್ಗೆ ಸ್ಪಷ್ಟವಾಗಿ ಮತ್ತು ನೆರವಾಗಿರಿ. ಸಂಬಂದವನ್ನು ಕೊನೆಗೊಳಿಸಲು ಸ್ಪಷ್ಟವಾದ ಕಾರಣಗಳನ್ನು ತಿಳಿಸಿ ಹಾಗೂ ಸಹಾನೂಭೂತಿ ಮತ್ತು ತಿಳುವಳಿಕೆ ಕೂಡಾ ಮುಖ್ಯವಾಗಿರುತ್ತದೆ.
ತಪ್ಪಿಸುವಿಕೆ: ಇಬ್ಬರ ನಡುವಿನ ಸಂಬಂಧವು ಯಾವಾಗ ಸತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆಗ ಅದೇ ಸಂದರ್ಭದಲ್ಲಿ ಸಂಬಂಧವನ್ನು ಕೊನೆಗೊಳಿಸುವುದು ಸಹ ಮುಖ್ಯವಾಗಿರುತ್ತವೆ. ನಾವು ಮುರಿದು ಹೋದ ಸಂಬಂಧದಲ್ಲಿ ಮುಂದುವರೆದಾಗ ಅದು ಹೆಚ್ಚು ನೋವನ್ನು ಉಂಟುಮಾಡುತ್ತದೆ.
ಸರಿಯಾದ ಸಮಯ ಮತ್ತು ಸ್ಥಲವನ್ನು ಆಯ್ಕೆ ಮಾಡಿ: ಸಂಬಂಧವನ್ನು ಕೊನೆಗೊಳಿಸುವಾಗ ಸಂಗಾತಿಗಳಿಬ್ಬರು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಮಾತನಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಇದಕ್ಕಾಗಿ ಖಾಸಗಿ ಮತ್ತು ಆರಾಮದಾಯಕ ಸ್ಥಳವನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ.
ಪ್ರತಿಕ್ರಿಯೆ: ನಮ್ಮ ಒಂದು ಕ್ರಿಯೆಯು ಇತರರನ್ನು ಎಷ್ಟು ನೋಯಿಸುತ್ತದೆ ಎಂಬುದನ್ನು ನಾವು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾವು ಸಂಬಂಧವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುವಾಗ ಆ ಕಡೆಯಿಂದ ಬರುವ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಆಲಿಸಬೆಕಾಗುತ್ತದೆ.
ಇದನ್ನೂ ಓದಿ: Relationship: ಸಂಬಂಧವನ್ನು ಉಳಿಸಿಕೊಳ್ಳಲು ಸತ್ಯಕ್ಕಿಂತ ಸುಳ್ಳಿನ ಅಗತ್ಯವಿದೆಯೇ?
ಗೌರವ ಮತ್ತು ದಯೆ ತೋರಿಸಿ: ಸಂಬಂಧವು ಕಾರ್ಯರೂಪಕ್ಕೆ ಬರದಿದ್ದರೂ ಸಹ, ನಿಮ್ಮ ಸಂಗಾತಿಗೆ ಗೌರವ ಮತ್ತು ದಯೆ ತೋರುವುದು ಮುಖ್ಯವಾಗಿರುತ್ತದೆ. ಏಕೆಂದರೆ ಅವರಿಗೂ ಕೂಡಾ ನಿಮ್ಮಂತೆಯೇ ಭಾವನೆಗಳಿರುತ್ತವೆ. ಆ ಭಾವನೆಗಳಿಗೆ ಗೌರವಿಸಿ, ಸರಿಯಾದ ರೀತಿಯಲ್ಲಿ ಸಂಬಂಧವನ್ನು ಕೊನೆಗೊಳಿಸಬೇಕು.
ಸಂಗಾತಿಯ ಮಾತುಗಳನ್ನು ಆಲಿಸಿ: ಪರಿಸ್ಥಿತಿಗಳ ಬಗ್ಗೆ ಅವರ ಭಾವನೆಗಳು ಆಲೋಚನೆಗಳನ್ನು ವ್ಯಕ್ತಪಡಿಸಲು ನಿಮ್ಮ ಸಂಗಾತಿಗೆ ಅವಕಾಶ ನೀಡಿ. ಅವರು ಹೇಳುವುದನ್ನು ಆಲಿಸಿ ಮತ್ತು ಅವರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಿ.
ಸ್ಪಷ್ಟವಾಗಿರಿ: ಸಂಗಾತಿಯಿಂದ ದೂರವಾದ ನಂತರ ಏನಾಗುತ್ತದೆ ಎಂಬುದರ ಬಗ್ಗೆ ನಿಮಗೆ ಸ್ಪಷ್ಟವಾದ ಕಲ್ಪನೆ ಇರಬೇಕು. ಮತ್ತು ಸ್ಪಷ್ಟ ಗಡಿಗಳನ್ನು ಇರಿಸಿ ಹಾಗೂ ಅವುಗಳನ್ನು ಗೌರವಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: