Kitchen Tips in Kannada : ಟಿಫನ್ ಬಾಕ್ಸಿನ ದುರ್ವಾಸನೆ ಹೋಗಲಾಡಿಸುವುದೇಗೆ? ಇಲ್ಲಿದೆ ಸರಳ ಸಲಹೆ

ಭಾರತೀಯರು ಮಸಾಲೆ ಪ್ರಿಯರು. ಹೀಗಾಗಿ ತಮ್ಮ ಅಡುಗೆಗಳಲ್ಲಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಈ ಅಡುಗೆಯು ನಾಲಿಗೆ ರುಚಿಯನ್ನು ನೀಡುತ್ತದೆ. ಮೂಗಿಗೆ ಅಡುಗೆಯ ಘಮ ಬಡಿಯೇತೆಂದರೆ ಹೊಟ್ಟೆಯಂತೂ ಕೇಳುವುದೇ ಇಲ್ಲ. ಈ ಅಡುಗೆಯನ್ನೇ ಆಫೀಸಿಗೆ ಹೋಗುವವರು ಬುತ್ತಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಊಟವಾದ ಬಳಿಕ ಬುತ್ತಿಯನ್ನು ಎಷ್ಟೇ ತೊಳೆದರೂ ಕೂಡ ಕೆಟ್ಟ ವಾಸನೆಯೊಂದು ಮೂಗಿಗೆ ಬಡಿಯುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್.

Kitchen Tips in Kannada : ಟಿಫನ್ ಬಾಕ್ಸಿನ ದುರ್ವಾಸನೆ ಹೋಗಲಾಡಿಸುವುದೇಗೆ? ಇಲ್ಲಿದೆ ಸರಳ ಸಲಹೆ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 18, 2024 | 3:06 PM

ಬೆಳಗ್ಗೆ ಆಫೀಸಿಗೆ ಹೋಗುವವರು ಮಧ್ಯಾಹ್ನಕ್ಕೆಂದು ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಊಟ ಮಾಡಿದ ಬಳಿಕ ಈ ಬುತ್ತಿಯನ್ನು ತೊಳೆದರೂ ಮಸಾಲೆ ಭರಿತ ಪದಾರ್ಥಗಳ ಘಮವಂತೂ ಹೋಗುವುದೇ ಇಲ್ಲ. ಸಂಜೆ ಮನೆಗೆ ಬಂದ ಕೂಡಲೇ ಬುತ್ತಿಯ ಮುಚ್ಚಳ ತೆಗೆದಾಗ ಮೂಗಿಗೆ ಈ ಗಾಢವಾದ ವಾಸನೆಯೊಂದು ಹೊರ ಬರುತ್ತದೆ. ಘಮ್ ಎನಿಸುವ ಸಾಮೂನನ್ನು ಹಾಕಿ ತೊಳೆದರೂ ಏನು ಪ್ರಯೋಜನವಾಗುವುದಿಲ್ಲ.

* ಬೇಕಿಂಗ್‌ ಸೋಡಾ: ಒಂದು ಚಮಚ ಬೇಕಿಂಗ್‌ ಸೋಡಾವನ್ನು ನೀರಿನಲ್ಲಿ ಕಲಸಿ ಊಟದ ಡಬ್ಬಿಯೊಳಗೆ ಹಾಕಿ, ಒಂದೆರಡು ಗಂಟೆ ಹಾಗೆ ನೆನೆಯಲು ಬಿಡಿ. ಆ ನಂತರ ಬಿಸಿನೀರಿನಲ್ಲಿ ತೊಳೆದರೆ ಟಿಫನ್ ಡಬ್ಬಿಯಲ್ಲಿರುವ ಕೆಟ್ಟ ವಾಸನೆಯು ಹೋಗುತ್ತದೆ.

* ನಿಂಬೆಹಣ್ಣಿನ ಸಿಪ್ಪೆ : ನಿಂಬೆ ಹಣ್ಣಿನ ಸಿಪ್ಪೆಯನ್ನು ಕೆಟ್ಟ ವಾಸನೆ ಬರುವ ಡಬ್ಬಿಯೊಳಗೆ ಹಾಕಿ ಚೆನ್ನಾಗಿ ಉಜ್ಜಿಕೊಳ್ಳಬೇಕು. ಒಂದೆರಡು ಗಂಟೆ ಬಿಟ್ಟು ಡಬ್ಬಿ ತೊಳೆಯುವುದರಿಂದ ಡಬ್ಬಿಯಿಂದ ಹೊರ ಬರುವ ಕೆಟ್ಟ ವಾಸನೆಯು ಇಲ್ಲದಂತಾಗುತ್ತದೆ.

* ವೈಟ್‌ ವಿನೆಗರ್ :‌ ವಿನೆಗರ್‌ ಹಾಗೂ ನೀರು ಈ ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಡಬ್ಬಿಗೆ ಹಾಕಿ ಸ್ವಲ್ಪ ಸಮಯದವರೆಗೆ ಹಾಗೆ ಬಿಡಬೇಕು. ಆ ಬಳಿಕ ಬಿಸಿನೀರಿನಲ್ಲಿ ತೊಳೆದರೆದರೆ ಡಬ್ಬಿಯಿಂದ ಹೊರ ಬರುವ ಕೆಟ್ಟ ವಾಸನೆಯು ಇಲ್ಲವಾಗುತ್ತದೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ನೊಣಗಳ ಕಾಟಕ್ಕೆ ಇದುವೇ ಪರಿಹಾರ

* ಆಲೂಗಡ್ಡೆ: ಹಸಿ ಆಲೂಗಡ್ಡೆಯನ್ನು ಹೋಳುಗಳಾಗಿಮಾಡಕೊಂಡು, ಆ ಹೋಳಿನಿಂದ ಊಟದ ಡಬ್ಬಿಯನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಹತ್ತು ನಿಮಿಷಗಳ ಬಳಿಕ ಡಬ್ಬಿಯನ್ನು ತೊಳೆದರೆ ಕೆಟ್ಟ ವಾಸನೆಯು ಇರುವುದಿಲ್ಲ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ