Relationship Tips : ನಿಮ್ಮ ಸಂಗಾತಿ ವಿಪರೀತ ಕೋಪ ಮಾಡಿಕೊಳ್ತಾರಾ, ಅವರನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಕೆಲವೊಮ್ಮೆ ಇದೇ ಕಾರಣದಿಂದ ಸಿಟ್ಟುಬರುತ್ತದೆ ಎಂದು ಹೇಳುವುದು ಕಷ್ಟ. ಕೋಪ ಯಾವಾಗ, ಏಕೆ ಬರುತ್ತದೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಆಗಲ್ಲ. ಕೆಲವೊಮ್ಮೆ ಪಿತ್ತ ನೆತ್ತಿಗೇರಿದಾಗ ಎದುರಿಗಿರುವ ವ್ಯಕ್ತಿಯ ಮೇಲೆ ರೇಗಿ ಬಿಡುತ್ತೇವೆ. ಸಂಬಂಧದಲ್ಲಿ ಕೋಪ ಮುನಿಸುಗಳು ಸಹಜ. ಆದರೆ ಈ ಟಿಪ್ಸ್ ಪಾಲಿಸಿದರೆ ಕೋಪಿಸಿಕೊಳ್ಳುವ ಸಂಗಾತಿಯನ್ನು ನಿಭಾಯಿಸಿಕೊಂಡು ಹೋಗುವುದು ಸುಲಭ.
ಸಾಂದರ್ಭಿಕ ಚಿತ್ರ
Follow us on
ಕೋಪ ಯಾರಿಗೆ ತಾನೇ ಬರಲ್ಲ ಹೇಳಿ. ಪ್ರೀತಿಯಿದ್ದ ಕಡೆ ಕೋಪ ವಿರುವುದು ಸಹಜ. ಅದಲ್ಲದೇ, ಪ್ರತಿಯೊಂದು ಸಂಬಂಧಕ್ಕೂ ಪ್ರೀತಿ, ಕೋಪ, ಜಗಳ ಹಾಗೂ ಭಿನ್ನಾಭಿಪ್ರಾಯವಿದ್ದರೇನೇ ಪರಿಪೂರ್ಣ. ಆದರೆ ನಿಮ್ಮ ಸಂಗಾತಿ ಸಣ್ಣ ಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುವುದರಿಂದ ಇಬ್ಬರ ಮನಸ್ಥಿತಿಯೂ ಹಾಳಾಗುತ್ತದೆ. ಕೋಪಿಸುವ ಸಂಗಾತಿಯೂ ನಿಭಾಯಿಸಿಕೊಂಡು ಹೋಗುವ ಕಲೆ ತಿಳಿದಿದ್ದರೆ ಮಾತ್ರ ಸಂಸಾರವೆನ್ನುವುದು ಸರಾಗವಾಗಿ ಸಾಗಲು ಸಾಧ್ಯ. ಸಣ್ಣ ಪುಟ್ಟದಕ್ಕೂ ಕೋಪಿಸಿಕೊಳ್ಳುವ ಪತ್ನಿ ಹಾಗೂ ಪತಿಯ ಜೊತೆಗೆ ನಿಮ್ಮ ನಡವಳಿಕೆಗಳು ಹೀಗಿರಲಿ.
ಯೋಚಿಸಿ ಮಾತನಾಡುವುದನ್ನು ಕಲಿಯಿರಿ : ಸಂಬಂಧದಲ್ಲಿ ಕೋಪಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಸಂಗಾತಿಯೂ ಸಿಟ್ಟಲ್ಲಿ ಏನಾದರೂ ಹೇಳಿದರೆ ತಕ್ಷಣವೇ ಪ್ರತಿಕ್ರಿಯಿಸಬೇಡಿ. ಇದರಿಂದ ಸಣ್ಣ ಸಂಘರ್ಷಗಳು ದೊಡ್ಡದಾಗಿ ಸಂಬಂಧವು ಸರಿಪಡಿಸಲು ಸಾಧ್ಯವಿಲ್ಲದ ಹಂತಕ್ಕೆ ತಲುಪಬಹುದು. ಕೋಪದಲ್ಲಿರುವ ಸಂಗಾತಿಯ ಮುಂದೆ ಯೋಚಿಸಿ ಮಾತನಾಡಿದರೆ, ಸಂಬಂಧವು ಉಳಿಯಲು ಸಾಧ್ಯ.
ಕೋಪದಲ್ಲಿದ್ದಾಗ ಎದುರು ಮಾತನಾಡಬೇಡಿ : ಸಂಗಾತಿ ನಿಮ್ಮೊಂದಿಗೆ ಕೋಪದಿಂದ ಮಾತನಾಡುವಾಗ, ನೀವು ಕೂಡ ಸಿಡುಕಬೇಡಿ. ಸಿಟ್ಟಲ್ಲಿ ಕೆಟ್ಟ ಶಬ್ದಗಳನ್ನು ಬಳಸಬೇಡಿ. ಹೀಗೆ ಮಾಡಿದ್ದಲ್ಲಿ ಎದುರಿಗಿರುವವರ ಸಿಟ್ಟು ಸ್ವಲ್ಪ ಕಡಿಮೆಯಾಗಬಹುದು.
ದ್ವೇಷದ ಭಾಷೆಯನ್ನು ಬೆಳೆಸಿಕೊಳ್ಳಬೇಡಿ : ಸಿಟ್ಟಲ್ಲಿ ಸಂಗಾತಿ ಸರಿಯಾಗಿ ಪ್ರತಿಕ್ರಿಯಿಸದೇ ಇರಬಹುದು. ಹೀಗಾದಾಗ ಅವರ ಮೇಲೆ ಕೋಪಿಸಿಕೊಂಡು ದ್ವೇಷ ಸಾಧಿಸಲು ಹೋಗಬೇಡಿ. ನಿಮ್ಮ ಸಂಗಾತಿಯ ಮನಸ್ಸನ್ನು ಪ್ರೀತಿಯಿಂದ ಗೆಲ್ಲಿ, ಯಾವತ್ತೂ ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ. ದ್ವೇಷ ಮಾಡಿದರೆ ಸಂಬಂಧವು ಮುರಿದು ಹೋಗುತ್ತದೆ.
ನೀವೇ ಮೊದಲು ಮಾತನಾಡಿ: ಸಣ್ಣ ಪುಟ್ಟ ಜಗಳ, ಮುನಿಸು ಹಾಗೂ ಕೋಪಕ್ಕೆ ಮೌನವಾಗಿರುವುದು ಪರಿಹಾರವಲ್ಲ. ಸಂಗಾತಿಯೂ ಮುನಿಸಿಕೊಂಡಿದ್ದರೆ, ನೀವು ಅವರನ್ನು ದೂರ ತಳ್ಳುವುದು ಸರಿಯಲ್ಲ. ಸಾಧ್ಯವಾದರೆ ಕೋಪಿಸಿರುವ ಸಂಗಾತಿಯ ಬಳಿ ಮಾತನಾಡಿ ಸಮಾಧಾನ ಮಾಡಿ. ಸಂಬಂಧವು ಉಳಿಯಬೇಕೆಂದರೆ ಇಬ್ಬರಲ್ಲಿ ಒಬ್ಬರಾದರೂ ಮಾತು ಮುಂದುವರೆಸುವುದು ಒಳ್ಳೆಯದು.
ಕೋಪದ ಹಿಂದಿರುವ ಕಾರಣ ತಿಳಿದುಕೊಳ್ಳಿ : ಸಂಗಾತಿಯೂ ನಿಮ್ಮ ಮೇಲೆ ಕೋಪಿಸಿಕೊಳ್ಳುತ್ತಿದ್ದರೆ, ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಿ. ಹೌದು, ನೀವು ಮಾಡುವ ಕೆಲಸ ಸಂಗಾತಿಗೆ ಇಷ್ಟವಾಗದೇ ಇರದು. ನಿಮ್ಮ ಕೆಲಸ, ನಡವಳಿಕೆಗಳು ಇಷ್ಟವಾಗದೇ ಸಿಟ್ಟಾಗುತ್ತಿದ್ದರೆ, ಅದನ್ನು ಬದಲಾಯಿಸಿಕೊಳ್ಳುವುದು ಒಳ್ಳೆಯದು.