ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಚಳಿಯಾಗಬಾರದೆಂದರೆ ಈ ಸಿಂಪಲ್ ಟ್ರಿಕ್ ಪಾಲಿಸಿ
ಬೈಕ್, ಸ್ಕೂಟಿ ಮತ್ತು ಆಟೋದಲ್ಲಿ ಪ್ರಯಾಣಿಸುವಾಗ ಬಲವಾದ ಮತ್ತು ತಂಪಾದ ಗಾಳಿಯು ನೇರವಾಗಿ ದೇಹಕ್ಕೆ ಬಡಿದು ಸಿಕ್ಕಾಪಟ್ಟೆ ಚಳಿಯಾಗಿ ಕೈಕಾಲುಗಳು ಮರಗಟ್ಟಿದಂತಾಗುತ್ತದೆ. ದ್ವಿಚಕ್ರ ವಾಹನದಲ್ಲಿ ಪ್ರತಿದಿನ ಕಾಲೇಜು ಅಥವಾ ಕೆಲಸಕ್ಕೆ ಪ್ರಯಾಣಿಸುವವರಿಗೆ ಇದು ತುಂಬಾನೇ ಕಷ್ಟಕರವಾಗಿರುತ್ತದೆ. ಹೀಗಿರುವಾಗ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಚಳಿ ಆಗದೆ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಲು ಈ ಒಂದು ಸಿಂಪಲ್ ಟ್ರಿಕ್ಸ್ ಪಾಲಿಸಿದರೆ ಸಾಕು.

ಬಹುತೇಕ ಹೆಚ್ಚಿನವರು ಕಾಲೇಜು, ಕೆಲಸಕ್ಕೆ ಬೈಕ್, ಸ್ಕೂಟಿಯಲ್ಲಿಯೇ ಹೋಗುತ್ತಾರೆ. ಹೀಗೆ ದ್ವಿಚಕ್ರ ವಾಹನದಲ್ಲಿ (two-wheeler) ಪ್ರಯಾಣಿಸುವಾಗ ಅದರಲ್ಲೂ ಬೆಳಗ್ಗಿನ ಸಮಯದಲ್ಲಿ ಸಿಕ್ಕಾಪಟ್ಟೆ ಚಳಿಯಾಗುತ್ತದೆ. ಬಲವಾದ, ತಂಪಾದ ಗಾಳಿಯು ನೇರವಾಗಿ ದೇಹವನ್ನು ಬಡಿದು, ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಇದರಿಂದ ವಾಹನ ಚಲಾಯಿಸಲು ಕೂಡ ಕಷ್ಟಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಒಂದು ಸರಳ ಹ್ಯಾಕ್ ಅನುಸರಿಸುವ ಮೂಲಕ ಚಳಿಯಾಗದಂತೆ ನೋಡಿಕೊಳ್ಳಬಹುದು ಮತ್ತು ದೇಹವನ್ನು ಬೆಚ್ಚಗಿಡಬಹುದು. ಈ ಹ್ಯಾಕನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ದೀಪ್ತಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.
ಬೈಕ್‌ನಲ್ಲಿ ಪ್ರಯಾಣಿಸುವಾಗ ಚಳಿಯಾಗಬಾರದೆಂದರೆ ಏನು ಮಾಡಬೇಕು?
ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ನಿಮಗೆ ಚಳಿ ಆಗಬಾರದೆಂದರೆ ನೀವು ನಿಮ್ಮ ಜಾಕೆಟ್ ಅಥವಾ ಸ್ವೆಟರ್ ಒಳಗೆ ನ್ಯೂಸ್ ಪೇಪರ್ ಇಟ್ಟುಕೊಳ್ಳಬೇಕು. ಈ ವಿಧಾನವು ವಿಚಿತ್ರವೆನಿಸಬಹುದು, ಆದರೆ ಇದು ತುಂಬಾ ಪರಿಣಾಮಕಾರಿಯಾಗಿದೆ. ಪತ್ರಿಕೆಯು ಒಂದು ರೀತಿಯ ನಿರೋಧನ ಪದರವಾಗಿ ಕಾರ್ಯನಿರ್ವಹಿಸುತ್ತದೆ, ಇದು ತಣ್ಣನೆಯ ಗಾಳಿಯು ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತದೆ ಮತ್ತು ದೇಹದ ಶಾಖವು ಹೊರಹೋಗುವುದನ್ನು ತಡೆಯುತ್ತದೆ. ಇದು ತಂಪಾದ ಗಾಳಿಯು ನಿಮ್ಮ ದೇಹವನ್ನು ನೇರವಾಗಿ ಸಂಪರ್ಕಿಸುವುದನ್ನು ತಡೆಯುತ್ತದೆ, ಶೀತದಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ.
ವೃತ್ತಪತ್ರಿಕೆ ದೇಹ ಸೇರದಂತೆ ಗಾಳಿಯನ್ನು ನಿರ್ಬಂಧಿಸುತ್ತದೆ ಮತ್ತು ದೇಹದ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ತುಂಬಾ ಅಗ್ಗದ, ಸುರಕ್ಷಿತ ಮತ್ತು ತ್ವರಿತ ಪರಿಹಾರವಾಗಿದೆ. ಇದಕ್ಕಾಗಿ ನೀವು ಮೊದಲು ಜಾಕೆಟ್ ಹಾಕಿ, ನ್ಯೂಸ್ ಪೇಪರ್ ತೆಗೆದುಕೊಂಡು ಎದೆ ಮತ್ತು ಹೊಟ್ಟೆಯ ಭಾಗ ಕವರ್ ಆಗುವಂತೆ ಅದನ್ನು ಜಾಕೆಟ್ ಒಳಗೆ ಇರಿಸಿ, ಜಾಕೆಟ್ ಝಿಪ್ ಹಾಕಿ. ಈ ತಂತ್ರ ದೇಹ ಬೆಚ್ಚಗಾಗಿರಲು ಸಹಾಯ ಮಾಡುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಅಕ್ಕಿ ತೊಳೆದ ನೀರನ್ನು ವೇಸ್ಟ್ ಎಂದು ಚೆಲ್ಲಬೇಡಿ, ಅದನ್ನು ಈ ರೀತಿಯಾಗಿ ಉಪಯೋಗಿಸಿ
ಈ ಹ್ಯಾಕ್ ಅನ್ನು ಅನುಸರಿಸುವುದರ ಜೊತೆಗೆ, ಚಳಿಗಾಲದಲ್ಲಿ ಬೈಕ್ ಸವಾರಿ ಮಾಡುವಾಗ ಯಾವಾಗಲೂ ನಿಮ್ಮ ಕಿವಿ, ಕುತ್ತಿಗೆ, ಕೈಗಳು ಮತ್ತು ಪಾದಗಳನ್ನು ಮುಚ್ಚಿಕೊಳ್ಳಿ. ಕೈಗವಸುಗಳು, ಮಫ್ಲರ್, ಟೋಪಿ ಮತ್ತು ಉತ್ತಮ ಬೂಟುಗಳನ್ನು ಧರಿಸಿ, ಏಕೆಂದರೆ ದೇಹದ ಈ ಭಾಗಗಳು ಶೀತ ಚಳಿಗೆ ಹೆಚ್ಚು ಒಳಗಾಗುತ್ತವೆ. ತೀವ್ರ ಚಳಿಯ ಸಮಯದಲ್ಲಿ ಬೆಳಿಗ್ಗೆ ಬೇಗನೆ ಪ್ರಯಾಣಿಸುವುದನ್ನು ತಪ್ಪಿಸಿ, ಏಕೆಂದರೆ ಆ ಸಮಯದಲ್ಲಿ ಚಳಿ ಹೆಚ್ಚು. ನೀವು ಪ್ರಯಾಣಿಸಬೇಕಾದರೆ, ಬೆಚ್ಚಗಿನ ನೀರನ್ನು ಕುಡಿಯಿರಿ ಅಥವಾ ಬೆಚ್ಚಗಿನ ಪಾನೀಯವನ್ನು ಕುಡಿಯಿರಿ. ಇದು ನಿಮ್ಮ ದೇಹವನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಿಡಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




