ಜಾಮೂನು ಭಾರತದಾದ್ಯಂತದ ಅತ್ಯಂತ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಒಂದು. ಬಾಯಲ್ಲಿಟ್ಟರೆ ಕರಗುವ ಗುಲಾಬ್ ಜಾಮೂನನ್ನು ದೊಡ್ಡವರಿಂದ ಚಿಕ್ಕವರವರೆಗೂ ಎಲ್ಲರೂ ಕೂಡ ಇಷ್ಟ ಪಡುತ್ತಾರೆ. ಈಗಾಗಲೇ ವಿವಿಧ ಬಗೆಯ ಗುಲಾಬ್ ಜಾಮೂನ್ ಗಳಿವೆ. ಈ ಸ್ವೀಟ್ ಮಾಡುವುದು ಕಷ್ಟವೇನಲ್ಲ. ಮಾರುಕಟ್ಟೆಯಲ್ಲಿ ದೊರಕುವ ರೆಡಿಮೆಡ್ ಇನ್ಸ್ಟೆಂಟ್ ಮಿಕ್ಸರ್‌ಗಳಿಂದಲೇ ಜಾಮೂನ್ ತಯಾರಿಸಲಾಗುತ್ತದೆ. ಗುಲಾಬ್ ಜಾಮೂನನ್ನು ವೆರೈಂಟಿಯಾಗಿಯೂ ತಯಾರಿಸಬಹುದು.
ಆದರೆ ಇದೀಗ ಸೋಶಿಯಲ್ ಮೀಡಿಯಾ ಸಿಂಪಲ್ ರೆಸಿಪಿಯಾಗಿರುವ ಬ್ರೆಡ್ ಗುಲಾಬ್ ಜಾಮೂನ್ ಪಾಕವಿಧಾನದ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಹೆಚ್ಚಿನವರ ಮನೆಯಲ್ಲಿ ಬ್ರೆಡ್ ಇದ್ದೆ ಇರುತ್ತದೆ. ಬೆಳಗ್ಗಿನ ತಿಂಡಿಯನ್ನು ಮಾಡಲು ಉದಾಸೀನವಾಗಿಬಿಟ್ಟರೆ ಬ್ರೆಡ್ ತಿಂದು ತಿಂಡಿಯನ್ನು ಮುಗಿಸಿಬಿಡುತ್ತಾರೆ. ಹೀಗಾಗಿ ಬ್ರೆಡ್ ಯಿದ್ದರೆ ಸಿಂಪಲ್ ವಿಧಾನದ ಮೂಲಕ ಸ್ವೀಟ್ ಮಾಡಿ ತಿನ್ನಬಹುದು. ಈ ವಿಡಿಯೋದಲ್ಲಿ ಮೊದಲು ಬ್ರೆಡನ್ನು ತುಂಡುಗಳನ್ನು ಕತ್ತರಿಸಿಕೊಂಡು ಪುಡಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ತಲೆಹೊಟ್ಟು ಇರುವವರು ಈ ಸಿಂಪಲ್ ಮನೆಮದ್ದು ಒಮ್ಮೆ ಪ್ರಯತ್ನಿಸಿ ನೋಡಿ
ವಿಡಿಯೋ ಇಲ್ಲಿದೆ ನೋಡಿ
ಬ್ರೆಡ್ ಪುಡಿಗೆ ಬಿಸಿ ಮಾಡಿದ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಲಾಗಿದ್ದು ಉಂಡೆ ಉಂಡೆಗಳನ್ನು ತಯಾರಿಸಿಕೊಳ್ಳುವುದನ್ನು ಕಾಣಬಹುದು. ಈ ಉಂಡೆಗಳನ್ನು ಕಾದ ಎಣ್ಣೆಗೆ ಹಾಕಿ ಕರಿಯಲಾಗಿದೆ. ಉಂಡೆಗಳು ಕಂದು ಬಣ್ಣಕ್ಕೆ ಬರುತ್ತಿದ್ದಂತೆ ತೆಗೆದು ಸಣ್ಣ ಬೌಲ್ ಗೆ ಹಾಕಲಾಗಿದೆ. ಆ ಬಳಿಕ ಗುಲಾಬ್ ಜಾಮೂನ್‌ಗೆ ಬೇಕಾದ ಸಕ್ಕರೆ ಪಾಕವನ್ನು ತಯಾರಿಸಲು, ಒಂದು ಪಾತ್ರೆಗೆ ಸಕ್ಕರೆ, ನೀರು ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಪಾಕವನ್ನು ರೆಡಿ ಮಾಡಲಾಗಿದೆ. ತದನಂತರದಲ್ಲಿ ತಯಾರಿಸಿಕೊಂಡಿರುವ ಉಂಡೆಗಳಿರುವ ಪಾತ್ರೆಗೆ ಈ ಸಕ್ಕರೆ ಪಾಕವನ್ನು ಹಾಕಲಾಗಿದೆ. ಈ ಉಂಡೆಗಳನ್ನು ಸಕ್ಕರೆ ನೀರಿನಲ್ಲಿ ನೆನೆಯಲು ಸ್ವಲ್ಪ ಸಮಯ ಬಿಡಲಾಗಿದೆ. ಸ್ವಲ್ಪ ಸಮಯದ ಬಳಿಕ ರುಚಿ ರುಚಿಯಾದ ಬ್ರೆಡ್ ಗುಲಾಬ್ ಜಾಮೂನು ಸವಿಯಲು ಸಿದ್ಧವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 am, Sat, 2 March 24