Cleaning Tips : ಮನೆಯ ಸ್ವಚ್ಛತೆಗೂ ಇರಲಿ ಟೈಮ್ ಟೇಬಲ್, ಸ್ವಚ್ಛತೆ ಹೇಗಿರಬೇಕು? ಇಲ್ಲಿದೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 13, 2024 | 11:43 AM

ಮನೆ ಚಿಕ್ಕದಾಗಿದ್ದರೂ ಚೊಕ್ಕವಾಗಿರಬೇಕು ಎನ್ನುವ ಮಾತಿದೆ. ಮನೆ ಹಾಗೂ ಮನಸ್ಸು ಎರಡು ಸ್ವಚ್ಛವಾಗಿದ್ದರೆ ಆ ಮನೆ ಸ್ವರ್ಗವೇ ಸರಿ. ಆದರೆ ಈಗಿನ ಬ್ಯುಸಿ ಕೆಲಸದ ನಡುವೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಮಯವೇ ಇಲ್ಲದಾಗಿದೆ. ಹಾಗಾದ್ರೆ ಈ ಕೆಲವು ಸಲಹೆಯಂತೆ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿದರೆ ಆರೋಗ್ಯವಂತರಾಗಬಹುದು.

Cleaning Tips : ಮನೆಯ ಸ್ವಚ್ಛತೆಗೂ ಇರಲಿ ಟೈಮ್ ಟೇಬಲ್, ಸ್ವಚ್ಛತೆ ಹೇಗಿರಬೇಕು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಗೃಹಿಣಿಯರಿಗೆ ಮನೆಯ ಸ್ವಚ್ಛತೆ ಎನ್ನುವುದು ತಲೆ ನೋವಿನ ಕೆಲಸ. ಆದರೆ ಮನೆಯು ಸುಂದರವಾಗಿ ಕಾಣಬೇಕೆಂದರೆ ಪ್ರತಿಯೊಂದು ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸುವುದು ಅಗತ್ಯ. ಯಾವುದೇ ಕೋಣೆ ಇರಲಿ, ಎಲ್ಲವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದರೆ ಉದ್ಯೋಗದಲ್ಲಿರುವ ಮಹಿಳೆಯರು ನಿತ್ಯವೂ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ಕಷ್ಟದಾಯಕ. ಹೀಗಾಗಿ ಈ ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಮನೆಯು ಸ್ವಚ್ಛವಾಗಿ ಸುಂದರವಾಗಿರುವುದರಲ್ಲಿ ಎರಡು ಮಾತಿಲ್ಲ.

  • ಪ್ರತಿದಿನವು ಮನೆಯ ಸ್ವಚ್ಛತೆಯ ಕಡೆಗೆ ಗಮನ ಕೊಡುವುದು ಬಹುಮುಖ್ಯ. ಹೀಗಾಗಿ ಅಡುಗೆ ಮನೆಯ ಶೆಲ್ಫ್, ಸಿಂಕ್‌ ಸ್ವಚ್ಛಗೊಳಿಸುವುದು, ಬೆಡ್‌ಶೀಟ್‌, ಬೆಡ್‌ಸ್ಪ್ರೆಡ್‌ ಧೂಳು ತೆಗೆಯುವುದು, ಮನೆಯ ಕಸ ಗುಡಿಸಿ ನೆಲವರೆಸುವುದು, ಕಸದ ಬುಟ್ಟಿಯಲ್ಲಿರುವ ಕಸ ವಿಲೇವಾರಿ, ಶೌಚಾಲಯ ಸ್ವಚ್ಛತೆ, ಸೋಪಿನ ಕಲ್ಮಶ ಮತ್ತು ಕೊಳಕು ಸಂಗ್ರಹವಾಗುವುದನ್ನು ತಪ್ಪಿಸಲು ಬಚ್ಚಲು ಮನೆ ಸ್ವಚ್ಛತೆಯನ್ನು ದಿನಾಲೂ ಮಾಡಲೇಬೇಕು.
  • ವಾರಕೊಮ್ಮೆದರೂ ನೆಲ ಒರೆಸಿ, ಡೋರ್‌ ಮ್ಯಾಟ್‌ ಬದಲಿಸುವುದು. ಫ್ರಿಡ್ಜ್ ಒಳಗಿನ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು. ಮಿಕ್ಸಿ, ಓವನ್‌, ಮೈಕ್ರೋವೇವ್‌ ಶುಚಿಗೊಳಿಸುವುದು, ಕನ್ನಡಿ, ಧೂಳು ತುಂಬಿದ ಪೀಠೋಪಕರಣಗಳ ಸ್ವಚ್ಛತೆ, ಬಟ್ಟೆ ತೊಳೆದು ಮಡಿಚಿ ಇಡುವುದು ಹಾಗೂ ಪಾದರಕ್ಷೆ ಇಡುವ ಜಾಗವನ್ನು ಶುಚಿವಾಗಿಟ್ಟುಕೊಳ್ಳಿ.
  • ತಿಂಗಳಿಗೊಮ್ಮೆಯಾದರು ಮನೆಯಲ್ಲಿರುವ ವಾಷಿಂಗ್ ಮೆಷಿನ್, ಕಪಾಟು, ಬೀರು, ಶೋಕೇಸ್‌ ಸ್ವಚ್ಛಗೊಳಿಸುವುದು, ವ್ಯಾಕ್ಯೂಮ್ ಕ್ಲೀನರ್, ಡಿಶ್ ವಾಶರ್, ಧೂಳಿನಿಂದ ತುಂಬಿದ ಲೈಟ್ಸ್ ಗಳನ್ನು ಶುಚಿಗೊಳಿಸಬೇಕು. ಅವಧಿ ಮುಗಿದಿರುವ ಅಡುಗೆ ಸಾಮಗ್ರಿಗಳ ಬೇರ್ಪಡಿಸುವುದು, ಹಾಸಿಗೆ, ಬೆಡ್‌ಶೀಟ್‌ಗಳನ್ನು ತೊಳೆಯುವುದು ಅತ್ಯಗತ್ಯ.
  • ಪ್ರತಿ ಮೂರು ಆರು ತಿಂಗಳಿಗೊಮ್ಮೆಯಾದರೂ ಓವನ್, ಪೀಠೋಪಕರಣಗಳು, ಫ್ರಿಡ್ಜ್ ನ ಹೊರಭಾಗ, ದಿಂಬುಗಳು, ಒಲೆಯ ಒಳಭಾಗವನ್ನು ಸ್ವಚ್ಛಗೊಳಿಸುತ್ತ ಇರಿ. ಅದಲ್ಲದೇ ಶವರ್ ಕರ್ಟೈನ್ ಲೈನರ್ ಅನ್ನು ಸ್ವಚ್ಛಗೊಳಿಸಿ.
  • ವರ್ಷಕೊಮ್ಮೆ ಧೂಳು ತುಂಬಿದ ಮನೆಯ ಕಿಟಕಿಗಳು ಹಾಗೂ ಕಾರ್ಪೆಟ್ ಗಳ ಸ್ವಚ್ಛತೆ, ಮನೆಯ ಸುತ್ತ ಇರುವುದು ಒಳಚರಂಡಿಯನ್ನು ತೆರವು ಮಾಡುವುದು, ಬೇಡದ ಸಸ್ಯಗಳನ್ನು ಕೀಳುವ ಮೂಲಕ ಮನೆಯ ಹೊರಗಿನ ಸ್ವಚ್ಛತೆಗೂ ಗಮನ ಕೊಡುವುದು ಅಷ್ಟೇ ಮುಖ್ಯ.

ಇದನ್ನೂ ಓದಿ: ಮಲೆನಾಡಿನ ಸಾಂಪ್ರದಾಯಿಕ ಅಡುಗೆ ಕೋಳಿ ಕಜ್ಜಾಯ, ಇಲ್ಲಿದೆ ರೆಸಿಪಿ

ವೈರಲ್​​ ಪೋಸ್ಟ್​ ಇಲ್ಲಿದೆ (ಎಕ್ಸ್​​​ ಖಾತೆ)

ಸ್ವಚ್ಛವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯ

ಮನೆಯ ಸ್ವಚ್ಛತೆ ಕಾಪಾಡಿಕೊಂಡರೆ ನೆಮ್ಮದಿಯೊಂದಿಗೆ ಉತ್ತಮ ಆರೋಗ್ಯವನ್ನು ಪಡೆಯಬಹುದು. ಮಕ್ಕಳಿದ್ದು ಬಿಟ್ಟರೆ, ಈ ಧೂಳು ಕೊಳಕು ಸೋಂಕು ಮತ್ತು ರೋಗಾಣುಗಳಿಂದ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ತಂದೊಡುತ್ತದೆ. ಅದಲ್ಲದೇ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಹೋದರೆ ಹುಳಹುಪ್ಪಟೆಗಳ ಕಾಟ ಹೆಚ್ಚಾಗುತ್ತದೆ. ಈ ಸಲಹೆಗಳನ್ನು ನಿಮ್ಮ ಮನೆಯನ್ನು ಶುಚಿಗೊಳಿಸುವ ದಿನಚರಿಯಲ್ಲಿ ಸೇರಿಸಿಕೊಂಡರೆ ಸ್ವಚ್ಛ ಮತ್ತು ನೈರ್ಮಲ್ಯದ ಮನೆಯ ವಾತಾವರಣದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ