AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Malnad Special Food : ಮಲೆನಾಡಿನ ಸಾಂಪ್ರದಾಯಿಕ ಅಡುಗೆ ಕೋಳಿ ಕಜ್ಜಾಯ, ಇಲ್ಲಿದೆ ರೆಸಿಪಿ

ಮಲೆನಾಡು ಎಂದ ಕೂಡಲೇ ನೆನಪಿಗೆ ಬರುವುದೇ ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿಯ ಸೊಬಗು. ಅದಲ್ಲದೇ, ಮಲೆನಾಡಿನ ಭಾಗಗಳಲ್ಲಿ ಅಕ್ಕಿರೊಟ್ಟಿ, ಅಕ್ಕಿ ಕಡುಬು ಫೇಮಸ್ ಹೇಗೋ, ಹಬ್ಬ ಹರಿದಿನಗಳಲ್ಲಿ ಕೋಳಿ ಕಜ್ಜಾಯ ಅಥವಾ ಹೊಸಗರೆ ಕಜ್ಜಾಯ ಇರಲೇ ಬೇಕು. ಬಳೆ ಆಕೃತಿಯಲ್ಲಿರುವ ಈ ಕಜ್ಜಾಯವನ್ನು ಕೋಡುಬಳೆ ಕಜ್ಜಾಯ ಎಂದು ಕರೆಯುವುದಿದೆ. ಕಜ್ಜಾಯದ ಜೊತೆಗೆ ಕೋಳಿ ಸಾರು ಇದ್ದು ಬಿಟ್ಟರೆ ನಾಲಿಗೆಗೆ ರುಚಿ, ಹೊಟ್ಟೆಗೂ ತೃಪ್ತಿಯಾಗುವುದಂತೂ ಖಂಡಿತ. ಹಾಗಾದ್ರೆ ಈ ರೆಸಿಪಿಯನ್ನು ಮಾಡುವ ವಿಧಾನವು ಇಲ್ಲಿದೆ.

Malnad Special Food : ಮಲೆನಾಡಿನ ಸಾಂಪ್ರದಾಯಿಕ ಅಡುಗೆ ಕೋಳಿ ಕಜ್ಜಾಯ, ಇಲ್ಲಿದೆ ರೆಸಿಪಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 12, 2024 | 3:42 PM

Share

ಉತ್ತರ ಕರ್ನಾಟಕದ ಜನರು ಖಡಕ್ ಜೋಳದ ರೊಟ್ಟಿ ಜೊತೆಗೆ ಖಾರವಾದ ಚಟ್ನಿ ಸವಿದರೆ, ಮಲೆನಾಡಿನ ಜನರಿಗೆ ಕಜ್ಜಾಯದ ಜೊತೆಗೆ ಕೋಳಿ ಸಾರು ಇದ್ದು ಬಿಟ್ಟರೆ ಬೇರೇನೂ ಬೇಕಾಗಿಯೇ ಇಲ್ಲ. ಅಕ್ಕಿ ಹಿಟ್ಟಿನಿಂದ ಮಾಡುವ ವಿಶೇಷ ಖಾದ್ಯವಾಗಿದ್ದು, ಇದು ನೋಡಲು ಕೊಡುಬಳೆ ಆಕಾರದಲ್ಲಿರುತ್ತದೆ. ಆದರೆ ಅದರಷ್ಟು ಸಣ್ಣದಾಗಿರುವುದಿಲ್ಲ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಈಡಿಗರ ಮನೆಯಲ್ಲಿ ತಯಾರಾಗುವ ವಿಶೇಷವಾದ ಆಹಾರವಿದು. ಈ ಹಬ್ಬ ಹರಿದಿನಗಳು ಈ ಕಜ್ಜಾಯವಿಲ್ಲದೇ ಪೂರ್ಣವಾಗುವುದೇ ಇಲ್ಲ. ಒಮ್ಮೆ ರುಚಿ ಸವಿದರೆ ಮತ್ತೆ ಮತ್ತೆ ಬೇಕೇನಿಸುತ್ತದೆ.

ಕೋಳಿ ಕಜ್ಜಾಯ ಮಾಡಲು ಬೇಕಾಗುವ ಸಾಮಗ್ರಿಗಳು

*ಅಕ್ಕಿ ಹಿಟ್ಟು, ಈರುಳ್ಳಿ, ತೆಂಗಿನ ತುರಿ, ಸ್ವಲ್ಪ ಅನ್ನ, ಚಿರೋಟಿ ರವೆ, ಹತ್ತು ಬೆಳ್ಳುಳ್ಳಿ ಎಸಳು, ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ಅಡುಗೆ ಮನೆಯ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ಯಾ? ಇಲ್ಲಿದೆ ಸಿಂಪಲ್ ಟಿಪ್ಸ್

ಕೋಳಿ ಕಜ್ಜಾಯ ಮಾಡುವ ವಿಧಾನ

  • ಮೊದಲಿಗೆ ಅಕ್ಕಿಯನ್ನು ನೀರಲ್ಲಿ ತೊಳೆದು, ಒಣಗಿಸಿದ ನಂತರದಲ್ಲಿ ತರಿತರಿಯಾಗಿ ಹಿಟ್ಟು ಮಾಡಿಟ್ಟುಕೊಳ್ಳಬೇಕು.
  • ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಒಲೆ ಮೇಲಿಟ್ಟು, ಬಿಸಿಯಾಗುತ್ತಿದ್ದಂತೆ ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ, ತೆಂಗಿನಕಾಯಿ ತುರಿ, ಬೆಳ್ಳುಳ್ಳಿ, ಅನ್ನ ಹಾಕಿ ಚೆನ್ನಾಗಿ ತಿರುಗಿಸಬೇಕು.
  • ನಂತರದಲ್ಲಿ ಅಕ್ಕಿ ಹಿಟ್ಟನ್ನು ಕುದಿಯುತ್ತಿರುವ ನೀರಿಗೆ ಹಾಕಿ ಕೈಯಾಡಿಸುತ್ತಿರಬೇಕು.
  • ರುಚಿಗೆ ತಕ್ಕಷ್ಟು ಉಪ್ಪು, ಚಿರೋಟಿ ರವೆ ಹಾಕಿ ಚೆನ್ನಾಗಿ ಕುದಿಸಬೇಕು. ಚೆನ್ನಾಗಿ ಕುದಿದು ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಪಾತ್ರೆಯನ್ನು ಒಲೆಯಿಂದ ಕೆಳಗಿಟ್ಟು ತಣ್ಣಗಾಗಲು ಬಿಡಬೇಕು.
  • ತಣ್ಣಗಾಗುತ್ತಿದ್ದಂತೆ ಅಗಲವಾದ ಪಾತ್ರೆಗೆ ಹಿಟ್ಟನ್ನು ಸುರಿದುಕೊಂಡು ಚೆನ್ನಾಗಿ ನಾದಿಕೊಳ್ಳಬೇಕು.
  • ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಕೋಲಿನ ರೂಪದಲ್ಲಿ ಉದ್ದ ಮಾಡಿ, ಎರಡು ತುದಿಗಳನ್ನು ಜೋಡಿಸಿದರೆ ಕೋಡುಬಳೆಯಂತಾಗುತ್ತದೆ.
  • ಇದನ್ನು ಎಣ್ಣೆಗೆ ಹಾಕಿ ಕರಿಯಬೇಕು. ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಎಣ್ಣೆಯಿಂದ ತೆಗೆದರೆ ಗರಿ ಗರಿಯಾದ ಕಜ್ಜಾಯ ಸವಿಯಲು ಸಿದ್ಧವಾಗಿರುತ್ತದೆ. ಕೋಳಿ ಸಾರಿನೊಂದಿಗೆ ಸವಿದರೆ ಅದರ ರುಚಿಯೇ ಬೇರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!