Kitchen Tips : ಅಡುಗೆ ಮನೆಯ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ಯಾ? ಇಲ್ಲಿದೆ ಸಿಂಪಲ್ ಟಿಪ್ಸ್
ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛಗೊಳಿಸಲು ಸಾಲುವುದಿಲ್ಲ. ಈ ಆಹಾರ ಪದಾರ್ಥಗಳಲ್ಲಿ ಬಳಸಿದ ಎಣ್ಣೆಯ ಜಿಡ್ದು ಶುಚಿಗೊಳಿಸುವುದು ತುಂಬಾನೇ ಕಷ್ಟದ ಕೆಲಸ. ಒಂದು ವೇಳೆ ಶುಚಿಗೊಳಿಸದೇ ಇದ್ದರೆ ಈ ಕಲೆಗಳು ಅಡುಗೆ ಮನೆಯ ಅಂದವನ್ನು ಹಾಳು ಮಾಡುತ್ತದೆ. ಹೀಗಾಗಿ ಮನೆಯಲ್ಲಿರುವ ಈ ಕೆಲವು ವಸ್ತುಗಳಿಂದ ಗೋಡೆಯ ಮೇಲಿರುವ ಜಿಡ್ಡಿನ ಕಲೆಗಳನ್ನು ತೆಗೆದುಹಾಕಬಹುದು.
ಮಹಿಳೆಯರಿಗೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ತಲೆನೋವಿನ ಕೆಲಸ. ಎಷ್ಟೇ ಸ್ವಚ್ಛತೆಯನ್ನು ಕಾಪಾಡಿಕೊಂಡರೂ ಮತ್ತೆ ಮೊದಲಿನಂತೆ ಆಗುತ್ತದೆ. ಈ ಅಡುಗೆ ಮಾಡುವ ಸಮಯದಲ್ಲಿ ಎಣ್ಣೆಗಳು ಹಾಗೂ ಸಾಂಬಾರು ಪದಾರ್ಥವು ಗೋಡೆಯ ಮೇಲೆ ಚಿಮ್ಮುವುದಿದೆ. ಇದನ್ನು ಆ ತಕ್ಷಣವೇ ಸ್ವಚ್ಛಗೊಳಿಸಿದೇ ಹೋದರೆ ಜಿಡ್ಡಿನ ಕಲೆಯಾಗಿ ಉಳಿದು ಬಿಡುತ್ತದೆ.
- ಅಡುಗೆ ಮನೆಯ ಗೋಡೆಯ ಮೇಲೆ ಎಣ್ಣೆಯ ಕಲೆಗಳಿದ್ದರೆ ಉಪ್ಪು ನೀರಿನಿಂದ ತಿಕ್ಕಿದರೆ ಕಲೆಗಳು ಮಾಯವಾಗಿ ಬಿಡುತ್ತದೆ.
- ಅಡುಗೆ ಮನೆಯ ಗೋಡೆಯ ಮೇಲಿರುವ ಕಲೆಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾವು ಉತ್ತಮ. ಅಡುಗೆ ಸೋಡಾ ಬಳಸಿ ಸ್ವಚ್ಛ ಮಾಡುವುದರಿಂದ ಜಿಡ್ಡಿನ ಕಲೆಗಳು ಇಲ್ಲವಾಗಿಸಬಹುದು.
- ಬಿಳಿ ಟೂತ್ ಪೇಸ್ಟ್ ಬಳಸಿ ಕಲೆಯನ್ನು ಹೋಗಲಾಡಿಸುವುದು ಸುಲಭ. ಎಣ್ಣೆಯ ಕಲೆಯಿರುವ ಜಾಗಕ್ಕೆ ಟೂತ್ಪೇಸ್ಟ್ ಅನ್ವಯಿಸಿ, ಐದು ನಿಮಿಷಗಳವರೆಗೆ ಹಾಗೆಯೇ ಬಿಡಬೇಕು. ಆ ಬಳಿಕ ಉಜ್ಜಿ ತೊಳೆದರೆ ಕಲೆಯು ಹೋಗುತ್ತದೆ.
- ಜಿಡ್ಡಿನ ಕಲೆಗಳನ್ನು ತೊಡೆದು ಹಾಕಲು ಒಂದೊಳ್ಳೆ ಉಪಾಯ ಎಂದರೆ ಹೇರ್ ಡ್ರೈಯರ್ಗಳು. ಎಣ್ಣೆಯುಕ್ತ ಕಲೆಗಳ ಮೇಲೆ ಕಾಗದವನ್ನು ಇರಿಸಿ ಹೇರ್ ಡ್ರೈಯರ್ ಅನ್ನು ಉಜ್ಜುತ್ತ ಬಂದರೆ, ಜಿಗುಟಾದ ಎಣ್ಣೆಯನ್ನು ಕರಗಿಸಲು ಸಹಕಾರಿಯಾಗಿದೆ.
- ನಿಂಬೆ ಮತ್ತು ವಿನೆಗರ್ ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಇದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ, ಈ ನೀರಿನಿಂದ ತಿಕ್ಕಿ ತೊಳೆದರೆ ಕಲೆಯು ಹೋಗಿ, ಫಳ ಫಳನೇ ಹೊಳೆಯುತ್ತದೆ.
- ಟೈಲ್ಸ್ ಅಥವಾ ಗೋಡೆಗಳ ಮೇಲಿರುವ ಕಲೆಗಳನ್ನು ಹೋಗಲಾಡಿಸಲು ಲಿಕ್ವಿಡ್ ಡಿಶ್ ವಾಶ್ ಬಳಸಬಹುದು. ದ್ರವರೂಪದ ಡಿಶ್ ವಾಶ್ ಗೋಡೆಯ ಮೇಲೆ ಸ್ಪ್ರೇ ಮಾಡಿ ಒಂದು ಗಂಟೆಗಳ ಕಾಲ ಬಿಡಿ. ಆ ಬಳಿಕ ಬಟ್ಟೆಗೆ ಡಿಶ್ ವಾಶ್ ಹಾಕಿ ಒರೆಸಿದರೆ ಎಲ್ಲಾ ಕಲೆಯು ಮಾಯಾವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ