Relationship Tips : ಹುಡುಗರೇ, ಈ ಗುಣಗಳು ನಿಮ್ಮಲ್ಲಿದ್ದರೆ ಸಂಗಾತಿಯು ದೂರವಾಗ್ತಾರೆ

ಸಂಬಂಧವು ಚೆನ್ನಾಗಿರಬೇಕೆಂದರೆ ಪ್ರೀತಿ ಕಾಳಜಿಯಿದ್ದರೆ ಸಾಲದು. ಒಬ್ಬರಿಗೆ ಇನ್ನೊಬ್ಬರ ಗುಣ ಸ್ವಭಾವಗಳು ಇಷ್ಟವಾಗಬೇಕು. ಪ್ರಾರಂಭದಲ್ಲಿ ಅತಿಯಾದ ಪ್ರೀತಿಸುತ್ತಿದ್ದ ಹುಡುಗಿಯು ನಿಮ್ಮನ್ನು ದ್ವೇಷಿಸಲು ಆರಂಭಿಸಿದ್ದಾರೆಂದರೆ ನಿಮ್ಮಲ್ಲಿ ಅವರಿಗಿಷ್ಟವಾಗದ ಗುಣಗಳು ಇವೆ ಎಂದರ್ಥ. ಹಾಗಾದ್ರೆ ಹುಡುಗಿಯರಿಗೆ ಇಷ್ಟವಾಗದ ಹುಡುಗರ ಗುಣ ಸ್ವಭಾವವೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Relationship Tips : ಹುಡುಗರೇ, ಈ ಗುಣಗಳು ನಿಮ್ಮಲ್ಲಿದ್ದರೆ ಸಂಗಾತಿಯು ದೂರವಾಗ್ತಾರೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 11, 2024 | 5:00 PM

ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗುವುದು ಸುಲಭದ ಮಾತಲ್ಲ. ಸಂಬಂಧದಲ್ಲಾಗುವ ಸಣ್ಣ ಪುಟ್ಟ ತಪ್ಪುಗಳೇ ಬಿರುಕು ಮೂಡಲು ಕಾರಣವಾಗುತ್ತದೆ. ಹೀಗಾಗಿ ಸಂಗಾತಿಗಳಿಬ್ಬರೂ ಅಥವಾ ಪ್ರೇಮಿಗಳಿಬ್ಬರೂ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡರೂ ಸಾಲುವುದಿಲ್ಲ. ಕೆಲವೊಮ್ಮೆ ಹುಡುಗರ ಈ ಗುಣಗಳಿಂದ ಹುಡುಗಿಯರು ದೂರವಾಗುವ ಸಂದರ್ಭವೇ ಹೆಚ್ಚು. ಹುಡುಗರೇ, ಈ ವಿಚಾರಗಳು ಇಬ್ಬರ ಬಂಧವನ್ನು ಹಾಳು ಮಾಡುತ್ತಿದ್ದರೆ ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳುವುದು ಮುಖ್ಯ.

* ಖಾಸಗಿ ಅಂತರವನ್ನು ಕಸಿದುಕೊಳ್ಳುವುದು : ಸಂಬಂಧವು ಎಷ್ಟೇ ಪ್ರೀತಿ ಹಾಗೂ ಕಾಳಜಿಯನ್ನು ಹೊಂದಿದ್ದರೂ, ಖಾಸಗಿ ಅಂತರವೆನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ದಿನವಿಡಿ ತನ್ನೊಂದಿಗೆ ಮಾತನಾಡಬೇಕು, ಎಲ್ಲಿ ಹೋಗುವುದಾದರೂ ತನ್ನ ಅನುಮತಿ ಪಡೆದುಕೊಂಡು ಹೋಗಬೇಕು ಎನ್ನುವ ಹುಡುಗರೆಂದರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಒಂದು ವೇಳೆ ಇಂತಹ ಹುಡುಗರ ಪ್ರೀತಿಯಲ್ಲಿ ಹುಡುಗಿಯರು ಬಿದ್ದಿದ್ದರೆ ತಾನು ಬಂಧಿಯಲ್ಲಿದ್ದೇವೆ ತನಗೆ ಸ್ವಾತಂತ್ರವಿಲ್ಲ ಎನ್ನುವ ಭಾವ ಮೂಡಬಹುದು. ಈ ಗುಣಗಳು ಬ್ರೇಕಪ್ ಹಂತಕ್ಕೂ ತಲುಪಬಹುದು.

* ಸಣ್ಣ ಪುಟ್ಟ ವಿಷಯಗಳಿಗೂ ರೇಗಾಡುವ ವ್ಯಕ್ತಿ : ಪ್ರತಿಯೊಬ್ಬ ಹುಡುಗಿಯು ತನ್ನ ಸಂಗಾತಿಯು ತನ್ನ ಜೊತೆಗೆ ಪ್ರೀತಿಯಿಂದ ನಡೆದುಕೊಳ್ಳಲಿ ಎಂದು ಬಯಸುವುದು ಸಹಜ. ಆದರೆ ಸಣ್ಣ ಪುಟ್ಟ ವಿಷಯಗಳಿಗೂ ಕಿರುಚಾಡುತ್ತಾ ರೇಗಾಡುತ್ತಿದ್ದರೆ ಅಂತಹ ವ್ಯಕ್ತಿಗಳು ಯಾರಿಗೂ ಕೂಡ ಇಷ್ಟವಾಗುವುದಿಲ್ಲ. ಕೆಲವು ಸೂಕ್ಷ್ಮ ವಿಚಾರಗಳನ್ನು ಪ್ರೀತಿಯಿಂದ ಹೇಳಿದರೇನೇ ಒಳ್ಳೆಯದು. ಏರು ಧ್ವನಿಯಲ್ಲಿ ಹೇಳುವುದರಿಂದ ಸಂಬಂಧವು ಹಾಳಾಗುತ್ತದೆ. ಅಂತಹ ಗುಣವು ತನ್ನ ಸಂಗಾತಿ ಅಥವಾ ಹುಡುಗನಲ್ಲಿದ್ದರೆ ಆತನನ್ನು ಆದಷ್ಟು ದೂರವಿಡುತ್ತಾಳೆ.

* ಪದೇ ಪದೇ ಅನುಮಾನಿಸುವುದು : ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಹಾಗೂ ಆತ್ಮಗೌರವ ಎನ್ನುವುದಿರುತ್ತದೆ. ಫೋನ್ ಬ್ಯುಸಿ ಬಂದಾಗ ಈ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದರೆ ಯಾವ ಹುಡುಗಿಯು ಇದನ್ನು ಇಷ್ಟ ಪಡುವುದಿಲ್ಲ. ಹೀಗಾಗಿ ಅನಮಾನಿಸುವ ಹುಡುಗರೆಂದರೆ ಹುಡುಗಿಯರಿಗೆ ಅಷ್ಟಕಷ್ಟೆ. ಪ್ರಾರಂಭದಲ್ಲಿ ಇದು ಪೊಸೆಸಿವ್‌ ನೆಸ್‌ ಎಂದು ಭಾವಿಸಿದರೂ ಕ್ರಮೇಣವಾಗಿ ದ್ವೇಷಿಸಲು ಪ್ರಾರಂಭಿಸುತ್ತಾರೆ.

ಇದನ್ನೂ ಓದಿ: ಆಷಾಢ ಮಾಸಕ್ಕೆ ಗಂಡ ಹೆಂಡತಿ ಒಟ್ಟಿಗೆ ಇರುವಂತಿಲ್ಲ ಯಾಕೆ?

* ಹಳೆಯ ಸಂಬಂಧದ ಬಗ್ಗೆ ಪದೇ ಪದೇ ಚುಚ್ಚಿ ಮಾತನಾಡುವ ಸ್ವಭಾವ : ಸಾಮಾನ್ಯವಾಗಿ ಸಂಬಂಧವು ಚೆನ್ನಾಗಿರಬೇಕೆಂದರೆ ಯಾವುದೇ ಮುಚ್ಚುಮರೆ ಇರಬಾರದು. ಹೀಗಾಗಿ ಹುಡುಗಿ ತನ್ನ ಹುಡುಗ ಅಥವಾ ಸಂಗಾತಿಯ ಬಳಿ ವೈಯುಕ್ತಿಕ ವಿಷಯಗಳನ್ನು ಹಂಚಿಕೊಂಡಿರಬಹುದು. ಆದರೆ ಹಳೆಯ ಸಂಬಂಧದ ವಿಷಯವನ್ನೇ ಇಟ್ಟುಕೊಂಡು ಚುಚ್ಚಿ ಮಾತನಾಡುವ ಹುಡುಗನನ್ನು ಹುಡುಗಿಯು ಇಷ್ಟ ಪಡುವುದೇ ಇಲ್ಲ. ಪ್ರಾರಂಭದಲ್ಲಿ ಸಹಿಸಿಕೊಂಡು ಹೋದರೂ ತದನಂತರದಲ್ಲಿ ದ್ವೇಷಿಸಲು ಪ್ರಾರಂಭಿಸುವುದಂತೂ ಖಂಡಿತ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!