ಬೇಸಿಗೆಯಲ್ಲಿ ಐಸ್ ಕ್ರೀಮ್ ಇಲ್ಲದೆ ದಿನ ಪೂರ್ಣವಾಗುವುದಿಲ್ಲ ಎನ್ನುವವರು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಹೇಗಾದರೂ, ಅಂಗಡಿಗಳಿಂದ ಒಂದು ಐಸ್ ಕ್ರೀಮ್ ಆರ್ಡರ್ ಮಾಡಿ ಸವಿಯಬೇಕು ಎಂದು ಸದಾ ಬಯಸುತ್ತಿರುತ್ತಾರೆ. ಆದರೆ ಅದು ಈ ಲಾಕ್ಡೌನ್ ಕಾಲಘಟ್ಟದಲ್ಲಿ ಸಾಧ್ಯವಿಲ್ಲ. ಹೀಗಾಗಿ ಐಸ್ ಕ್ರೀಮ್ ಪ್ರಿಯರು ಬೇಸರದಲ್ಲಿರುತ್ತಾರೆ. ಇದರಿಂದ ಚಿಂತೆಗಿಡಾಗುವುದು ಬೇಡ. ಮನೆಯಲ್ಲೇ ಸರಳ ವಿಧಾನದ ಜತೆಗೆ ರುಚಿಕರವಾದ ಐಸ್ ಕ್ರೀಮ್ ಮಾಡುವ ವಿಧಾನವನ್ನು ಇಂದು ನಾವು ತಿಳಿದುಕೊಳ್ಳೋಣ.
ಯೂಟ್ಯೂಬರ್ ಶಿವೇಶ್ ಭಾಟಿಯಾ ಅವರ ಈ ಸುಲಭ ಪಾಕವಿಧಾನದೊಂದಿಗೆ ಚಾಕ್ಲೇಟ್ ಕೇಕ್ ಐಸ್ ಕ್ರೀಮ್ ಅನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ನೋಡೊಣ. ಮೊದಲಿಗೆ ಐಸ್ ಕ್ರೀಮ್ ಮಾಡಲು ಬೇಕಾದ ಸಾಮಾಗ್ರಿಗಳ ಬಗ್ಗೆ ಗಮನಹರಿಸೋಣ.
ಚಾಕ್ಲೇಟ್ ಕೇಕ್ ಐಸ್ ಕ್ರೀಮ್ ಮಾಡಲು ಬೇಕಾದ ಸಾಮಾಗ್ರಿಗಳು 1 ಕಪ್ ಚಾಕ್ಲೇಟ್ ಕೇಕ್ ಕ್ರಂಬ್ಸ್,
2 ಕಪ್ ವಿಪ್ಪಿಂಗ್ ಕ್ರೀಮ್, 400 ಗ್ರಾಂ ಕಂಡೆನ್ಸರ್ ಮಿಲ್ಕ್, ಅರ್ಧ ಟೀಸ್ಪೂನ್ ಅಡಿಗೆ ಸೋಡಾ, ಅರ್ಧ ಕಪ್ ಸಕ್ಕರೆ.
ಚಾಕ್ಲೇಟ್ ಕೇಕ್ ಐಸ್ ಕ್ರೀಮ್ ಮಾಡುವ ವಿಧಾನ
ಮೊದಲು ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ಬಳಿಕ ಅದಕ್ಕೆ ಕಂಡೆನ್ಸರ್ ಮಿಲ್ಕ್ ಸೇರಿಸಿ. ಬಳಿಕ ಅದಕ್ಕೆ ಚಾಕೊಲೇಟ್ ಕೇಕ್ ಕ್ರಂಬ್ಸ್ ಸೇರಿಸಿ. ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅಡಿಗೆ ಸೋಡಾ ಮತ್ತು ಸಕ್ಕರೆ ಸೆರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ ರಾತ್ರಿಯಡೀ ಫ್ರಿಡ್ಜ್ನಲ್ಲಿ ಇಡಿ. ಈಗ ರುಚಿಕರವಾದ ಚಾಕ್ಲೇಟ್ ಕೇಕ್ ಐಸ್ ಕ್ರೀಮ್ ಸವಿಯಲು ಸಿದ್ಧ.