ಉತ್ತರ ಕರ್ನಾಟಕ ಸ್ಪೆಷಲ್ ಝುನಕದ ವಡೆ; ಸರಳವಾದ ವಿಧಾನದ ಜೊತೆಗೆ ಮಾಡಿ ಸವಿಯಿರಿ
ಉತ್ತರ ಕರ್ನಾಟಕದ ಶೈಲಿ ಬೇರೆ, ದಕ್ಷಿಣ ಕನ್ನಡದ ರುಚಿ ಬೇರೆ, ಮಲೆನಾಡಿನ ಅಡುಗೆ ಬೇರೆ. ಹೀಗಾಗಿ ಎಲ್ಲಾ ಶೈಲಿಯ ಅಡುಗೆಯನ್ನು ಸವಿಯಬೇಕು ಎನ್ನುವ ಮನಸ್ಸಿರುವವರಿಗಾಗಿ ಇಂದಿನ ಅಡುಗೆ. ಅದುವೇ ಉತ್ತರ ಕರ್ನಾಟಕ ಶೈಲಿಯ ಝುನಕದ ವಡೆ.
ಅಡುಗೆ ಮಾಡುವುದು ಒಂದು ಕಲಾತ್ಮಕ ಶೈಲಿ ಎನ್ನುವ ಮಾತಿದೆ ಅದರಂತೆ ಒಂದೇ ರೀತಿಯ ರೆಸಿಪಿಯಲ್ಲಿ ಬೇರೆ ಬೇರೆ ತರನಾದ ರುಚಿ ಬರುವಂತೆ ಮಾಡುವುದು ಕೂಡ ಒಂದು ವಿಭಿನ್ನ ಕಲೆ. ಉದಾಹರಣೆಗೆ ಪಾಯಸವನ್ನು ಮಾಡುವಾಗ ಶಾವಿಗೆ, ಕಡಲೆ ಬೇಳೆ, ಅಕ್ಕಿ, ರವೆ ಹೀಗೆ ನಾನಾ ಪದಾರ್ಥಗಳನ್ನು ಹಾಕಿ ಪಾಯಸವನ್ನು ಸಿದ್ಧ ಮಾಡುತ್ತಾರೆ. ಆದರೆ ಇದು ಒಂದೊಂದು ಭಾಗದ ವಿಶೇಷತೆಯನ್ನು ಹೊಂದಿರುತ್ತದೆ. ಉತ್ತರ ಕರ್ನಾಟಕದ ಶೈಲಿ ಬೇರೆ, ದಕ್ಷಿಣ ಕನ್ನಡದ ರುಚಿ ಬೇರೆ, ಮಲೆನಾಡಿನ ಅಡುಗೆ ಬೇರೆ. ಹೀಗಾಗಿ ಎಲ್ಲಾ ಶೈಲಿಯ ಅಡುಗೆಯನ್ನು ಸವಿಯಬೇಕು ಎನ್ನುವ ಮನಸ್ಸಿರುವವರಿಗಾಗಿ ಇಂದಿನ ಅಡುಗೆ. ಅದುವೇ ಉತ್ತರ ಕರ್ನಾಟಕ ಶೈಲಿಯ ಝುನಕದ ವಡೆ.
ಮೊದಲಿಗೆ ಝುನಕದ ವಡೆ ಮಾಡಲು ಬೇಕಾದ ಸಾಮಾಗ್ರಿಗಳು ಯಾವುದು ಎಂದು ತಿಳಿದುಕೊಳ್ಳೋಣ ಸಾಸಿವೆ, ಜೀರಿಗೆ, ಅಡುಗೆ ಎಣ್ಣೆ, 1ಬಟಲು ಕಡಲೆ ಹಿಟ್ಟು, ರುಬ್ಬಿದ ಹಸಿ ಮೆಣಸಿನ ಕಾಯಿ, ಈರುಳ್ಳಿ, ಕರಿ ಬೇವು, ಬೆಳ್ಳುಳ್ಳಿ, ಬೆಲ್ಲ, ಹುಣಸೆ ಹಣ್ಣು, ಉಪ್ಪು, ಅರಿಶಿಣದ ಪುಡಿ, ಕೊಬ್ಬರಿ ತುರಿ, ಎಳ್ಳು, ಕೊತ್ತಂಬರಿ ಸೊಪ್ಪು.
ಝುನಕದ ವಡೆ ಮಾಡುವ ವಿಧಾನ:
ಒಲೆ ಹಚ್ಚಿ, ಒಂದು ಪಾತ್ರೆಗೆ ಎಣ್ಣೆ ಹಾಕಿಕೊಳ್ಳಬೇಕು, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ ಮತ್ತು ಕರಿ ಬೇವು ಹಾಕಿ, ನಂತರ ಬೆಳ್ಳುಳ್ಳಿಯನ್ನು ಸ್ವಲ್ಪ ಜಜ್ಜಿ ಸೇರಿಸಿಕೊಳ್ಳಿ. ಬಳಿಕ ಈರುಳ್ಳಿ ಹಾಕಿ ಸರಿಯಾಗಿ ಕಲಸಿಕೊಳ್ಳಿ, ನಂತರ ಹಸಿಮೆಣಸಿನ ಪೇಸ್ಟ್ ಹಾಕಿ, ಉಪ್ಪು ಮತ್ತು ಅರಿಶಿಣ ಹಾಕಬೇಕು, ಆಮೇಲೆ ಹುಣಸೆ ಹುಳಿ ಮತ್ತು ಬೆಲ್ಲ ಹಾಕಿ, ಒಂದು ಬಟಲು ನೀರು ಸೇರಿಸಿ ಚೆನ್ನಾಗಿ ಕುದಿ ಬರಿಸಿ, ಬಳಿಕ ಕಡಲೆ ಹಿಟ್ಟು ಸ್ವಲ್ಪ ಸ್ವಲ್ಪವಾಗಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಇನ್ನೊಂದು ಪ್ಲೇಟ್ ತೆಗೆದುಕೊಂಡು ಎಣ್ಣೆ ಸವರಿ ಇಟ್ಟುಕೊಳ್ಳಬೇಕು. ಬಳಿಕ ತಯಾಸಿದ ವಡೆಯ ಮಿಶ್ರಣವನ್ನು ಆ ಪ್ಲೇಟ್ಗೆ ಹಾಕಿ ತಟ್ಟಿಕೊಳ್ಳಬೇಕು ಬಳಿಕ ಅದರ ಮೇಲೆ ಸ್ವಲ್ಪ ಎಳ್ಳು, ಕೊಬರಿ ತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಹಾಕಬೇಕು ಮತ್ತು ಝುನಕದ ವಡೆ ಸವಿಯಲು ಸಿದ್ಧವಾಗುತ್ತದೆ.
ಇದನ್ನೂ ಓದಿ:
ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ
ಸೀಗಡಿ ಪೆಪ್ಪರ್ ಸ್ಪೈಸಿ; ಸರಳವಾದ ವಿಧಾನದ ಜೊತೆ 20 ನಿಮಿಷಗಳಲ್ಲಿ ತಯಾರಿಸಿ