AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಾಗ ಪ್ರಜ್ಞೆ ತಪ್ಪಿ ಕುಸಿದು ಬೀಳುತ್ತಿದ್ದೀರಾ? ಭಯ ಪಡುವುದು ಬೇಡ, ಈ ವಿಧಾನಗಳನ್ನು ಅನುಸರಿಸಿ

ನಿಮ್ಮ ಆರೋಗ್ಯದಲ್ಲಿ ಏನೇ ಏರುಪೇರಾದರೂ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ. ಚಿಕ್ಕ ಸಮಸ್ಯೆಯೂ ಮುಂದೊಂದು ದಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟುಮಾಡಬಲ್ಲದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಯಾವುದೇ ನಿರ್ಲಕ್ಷ್ಯ ಬೇಡ. 

ಆಗಾಗ ಪ್ರಜ್ಞೆ ತಪ್ಪಿ ಕುಸಿದು ಬೀಳುತ್ತಿದ್ದೀರಾ? ಭಯ ಪಡುವುದು ಬೇಡ, ಈ ವಿಧಾನಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jun 05, 2021 | 7:27 AM

ದೇಹಕ್ಕೆ ಸುಸ್ತಾದಾಗ ಬೆವರುವುದು ಅಥವಾ ತಲೆ ತಿರುಗುವುದು ಸಾಮಾನ್ಯ. ಹಾಗಂತ ಯಾವುದೇ ಕಾರಣಕ್ಕೂ ಇಂತಹ ಸಮಸ್ಯೆಗಳನ್ನು ಕಡೆಗಣಿಸಬೇಡಿ. ಇದು ಮೂರ್ಛೆ ಹೋಗುವ ಲಕ್ಷಣಗಳೂ ಆಗಿರಬಹುದು. ಮೂರ್ಛೆ ಹೋಗುವ ಸಮಯದಲ್ಲಿ ದೇಹದ ಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿ ಮಾಡುವುದು ನಿಮ್ಮ ಆರೋಗ್ಯ ದೃಷ್ಟಿಯಿಂದ ಒಳಿತು.

ಪದೇ ಪದೇ ತಲೆ ಸುತ್ತುವಂತಾಗುತ್ತಿದೆ ಅಥವಾ ತಾತ್ಕಾಲಿಕವಾಗಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದೀರಿ ಎಂದಾದರೆ ದೇಹಕ್ಕೆ ಅಪಾಯಕಾರಿ ಒಡ್ಡುವ ಮುನ್ಸೂಚನೆಗಳಾಗಿರಬಹುದು. ಹಾಗಾಗಿ ಪ್ರಜ್ಞೆ ತಪ್ಪುವುದು ಸಾಮಾನ್ಯ ಎಂಬ ನಿರ್ಲಕ್ಷ್ಯ ಎಂಬ ಭಾವನೆ ಎಂದಿಗೂ ಬೇಡ. ಆ ಸಮಯದಲ್ಲಿ ಹೆಚ್ಚಿನ ಕೆಲಸಗಳು ಬೇಡ. ವಿಶ್ರಾಂತಿ ತೆಗೆದುಕೊಳ್ಳಿ. ಆಹಾರ ಕ್ರಮ ಬದಲಿಸಿಕೊಳ್ಳಿ. ಹೆಚ್ಚು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದೇಹದ ಸೃದೃಢವಾಗುತ್ತದೆ ಹಾಗೂ ನರದೌರ್ಬಲ್ಯದಂತಹ ಸಮಸ್ಯೆ ಪರಿಹಾರವಾಗುತ್ತದೆ.

ನಿಮ್ಮ ಆರೋಗ್ಯದಲ್ಲಿ ಏನೇ ಏರುಪೇರಾದರೂ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ. ಚಿಕ್ಕ ಸಮಸ್ಯೆಯೂ ಮುಂದೊಂದು ದಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟುಮಾಡಬಲ್ಲದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಯಾವುದೇ ನಿರ್ಲಕ್ಷ್ಯ ಬೇಡ.

ಲಕ್ಷಣಗಳು ಯಾವುದು? * ತಲೆನೋವು * ಪ್ರಜ್ಞೆ ತಪ್ಪುವುದು * ತಲೆತಿರುಗುವುದು * ಅಸ್ಥಿರತೆ ಅಥವಾ ದುರ್ಬಲತೆ

ಅಸಮ ಹೃದಯ ಬಡಿತ. ಕೆಲವು ಸೆಕೆಂಡುಗಳ ಕಾಲ ಹೃದಯ ಬಡಿತ ತಾತ್ಕಾಲಿಕವಾಗಿ ನಿಲ್ಲುವುದರಿಂದ ಮೆದುಳಿಗೆ ರಕ್ತದ ಸಂಚಾರವು ಕೆಲಕಾಲ ಸ್ಥಗಿತಗೊಳ್ಳುತ್ತದೆ. ರಕ್ತದೊತ್ತಡ ಉಂಟಾಗುವುದರಿಂದ ಮೆದುಳಿಕೆ ರಕ್ತ ಪೂರೈಕೆ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಪರಿಹಾರಗಳೇನು?  * ನಿಯಮಿತವಾಗಿ ಊಟ ಮಾಡಿ. ಊಟಮಾಡುವುದನ್ನು ಎಂದೂ ತಪ್ಪಿಸಬೇಡಿ * ಸಾಕಷ್ಟು ನೀರು ಕುಡಿಯಿರಿ * ಒಂದೇ ಸ್ಥಳದಲ್ಲಿ ತುಂಬಾ ಸಮಯದವರೆಗೆ ಕಾಲುಗಳನ್ನು ಅಲುಗಾಡಿಸದಯೇ ಹಾಗೆಯೇ ಇರಬೇಡಿ * ಮೂರ್ಛೆ ಕಾಯಿಯಿಂದ ಬಳಲುತ್ತಿದ್ದರೆ ಆದಷ್ಟು ಬಿಸಿಲಿನಿಂದ ದೂರವಿರಿ * ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆಯ ಸಮಸ್ಯೆಗೆ ಔಚಧಿಗಳನ್ನು ಸೂಚಿಸಿದಂತೆಯೇ ಸೇವನೆ ಮಾಡಿ * ರಕ್ತದೊತ್ತಡವನ್ನು ನಿಯಂತ್ರಿಸಲು ನಿಯಮಿತವಾಗಿ ಉಪ್ಪು ಸೇವಿಸಿ.

ಇದನ್ನೂ ಓದಿ: 

Health Tips: ಬಾದಾಮಿ ಸೇವನೆಯ 5 ಆರೋಗ್ಯಕಾರಿ ಪ್ರಯೋಜನಗಳು

Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ

ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ