Skin Care Tips: ಬಿಸಿ ವಾತಾವರಣದಿಂದ ಚರ್ಮಕ್ಕೆ ಹಾನಿ, ಇದನ್ನು ಸರಿಪಡಿಸುವುದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: May 05, 2023 | 7:09 PM

ಚರ್ಮದ ಆರೈಕೆ ಬಗ್ಗೆ ಗಮನ ಹರಿಸುವ ಮೂಲಕ, ಬೇಸಿಗೆಯಲ್ಲಿ ನಿಮ್ಮ ಚರ್ಮ ಆರೋಗ್ಯಕರ ಮತ್ತು ಹೊಳಪಿನಿಂದ ಕೂಡಿರುವಂತೆ ನೋಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಇಲ್ಲಿದೆ ಸಲಹೆ

Skin Care Tips: ಬಿಸಿ ವಾತಾವರಣದಿಂದ ಚರ್ಮಕ್ಕೆ ಹಾನಿ, ಇದನ್ನು ಸರಿಪಡಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಬೇಸಿಗೆ ಕಾಲದಲ್ಲಿ ದೇಹವನ್ನು ಮಾತ್ರವಲ್ಲ ಚರ್ಮವನ್ನು ಸೂರ್ಯನ ಕಿರಣಗಳಿಂದ ತಪ್ಪಿಸುವುದು ದೊಡ್ಡ ಸವಾಲು. ಏಕೆಂದರೆ ತಾಪಮಾನ ಹೆಚ್ಚಾದಂತೆ, ಶಾಖವು ವಿಪರೀತವಾಗಬಹುದು ಹಾಗಾಗಿ ಶಾಖವನ್ನು ನಿಭಾಯಿಸಲು ದೇಹ ತಂಪಾಗಿರಿಸುವುದು ಮುಖ್ಯವಾಗಿದೆ. ಈಗಾಗಲೇ ನೀವು ಅದರ ಬಗ್ಗೆ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಬಹುದು. ಅದರ ಜೊತೆಗೆ ನಿಮ್ಮ ಸೂಕ್ಷ್ಮ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಸಹ ಅತ್ಯಗತ್ಯ. ತಜ್ಞರ ಪ್ರಕಾರ, ಬೇಸಿಗೆಯ ತಿಂಗಳುಗಳಲ್ಲಿ ನಿಮ್ಮ ಚರ್ಮವನ್ನು ರಕ್ಷಿಸುವ ಪ್ರಮುಖ ಅಂಶವೆಂದರೆ ಚೆನ್ನಾಗಿ ನೀರಿನಾಂಶ ಆಗಿರುವುದು, ಇದರಿಂದ ಅತಿಯಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮವನ್ನು ರಕ್ಷಿಸುವುದಲ್ಲದೆ ನಿಮ್ಮನ್ನು ಸೋಂಕುಗಳಿಗೆ ಹೆಚ್ಚು ಗುರಿಯಾಗಿಸುವುದನ್ನು ಕಡಿಮೆ ಮಾಡುತ್ತದೆ.

ಎಚ್ಟಿ ಲೈಫ್ ಸ್ಟೈಲ್​​ಗೆ ನೀಡಿದ ಸಂದರ್ಶನದಲ್ಲಿ, ಡಿಎನ್ಬಿಯ ಎಂಡಿ (ಚರ್ಮ ಮತ್ತು ವಿಡಿ), ಡಿಡಿವಿ, ಪರ್ಫೆಕ್ಷನ್ ಕಾಸ್ಮೆಟಾಲಜಿ ಕೇಂದ್ರದ ಸ್ಥಾಪಕ, ನಿರ್ದೇಶಕಿ ಮತ್ತು ಸಿಇಒ ಡಾ.ರಾಜಶ್ರೀ ಮಾಯೇಕರ್ ಕೆಲವು ಮಾರ್ಗಸೂಚಿಗಳನ್ನು ಶಿಫಾರಸು ಮಾಡಿದ್ದಾರೆ. ಇದು ನಿಮ್ಮ ಚರ್ಮವು ಋತುವಿನಾದ್ಯಂತ ಆರೋಗ್ಯಕರ ಮತ್ತು ಹೊಳಪಿನಿಂದ ಕೂಡಿರಲು ಸಹಾಯ ಮಾಡುತ್ತದೆ.

ನಿಮ್ಮ ಚರ್ಮದ ಪ್ರಕಾರಕ್ಕೆ ಸರಿಹೊಂದುವ ಸನ್ ಸ್ಕ್ರೀನ್ ಆಯ್ಕೆಮಾಡಿ:

ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಸನ್ ಸ್ಕ್ರೀನ್ ಆಯ್ಕೆ ಮಾಡುವುದು ಸೂಕ್ತವಾಗಿದೆ. ಇದರಿಂದ ಯಾವುದೇ ದದ್ದುಗಳು ಅಥವಾ ಬ್ರೇಕ್ಔಟ್ಗಲು ಉಂಟಾದಲ್ಲಿ ಬೇರೆ ಉತ್ಪನ್ನಕ್ಕೆ ಬದಲಾಯಿಸುವುದು ಒಳ್ಳೆಯದು. ಸನ್ ಸ್ಕ್ರೀನ್ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (ಎಸ್ಪಿಎಫ್) ಅನ್ನು ಪರಿಶೀಲಿಸುವುದು ಸಹ ಅತ್ಯಗತ್ಯ, ಏಕೆಂದರೆ ಇದು ನೀವು ಬಿಸಿಲಿನಲ್ಲಿ ಸುರಕ್ಷಿತವಾಗಿ ಕಳೆಯಬಹುದಾದ ಸಮಯವನ್ನು ಸೂಚಿಸುತ್ತದೆ. ಸೂರ್ಯನ ಹಾನಿಕಾರಕ ನೇರಳಾತೀತ (ಯುವಿ) ಕಿರಣಗಳು ನಿಮ್ಮ ಚರ್ಮಕ್ಕೆ ಗಂಭೀರ ಹಾನಿಯನ್ನು ಉಂಟುಮಾಡಬಹುದು, ಇದು ಹೈಪರ್ಪಿಗ್ಮೆಂಟೇಶನ್, ಸನ್ಬರ್ನ್ ಮತ್ತು ಚರ್ಮದ ಕ್ಯಾನ್ಸರ್​​ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಒಳಾಂಗಣದಲ್ಲಿರಲಿ ಅಥವಾ ಹೊರಾಂಗಣದಲ್ಲಿರಲಿ, ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಯಾವಾಗಲೂ ಸನ್ ಸ್ಕ್ರೀನ್ ಅನ್ನು ಹಚ್ಚಿಕೊಳ್ಳುವುದು ಬಹಳ ಮುಖ್ಯ.

ನೀರಿನಾಂಶ ಇರಬೇಕು: ನಿರ್ಜಲೀಕರಣವು ನಿಮ್ಮ ದೇಹದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಇದು ನಿಮ್ಮ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ನಾವು ಬೆವರುತ್ತಿದ್ದಂತೆ, ನಮ್ಮ ಚರ್ಮವು ಜಲಸಂಚಯನವನ್ನು ಕಳೆದುಕೊಳ್ಳುತ್ತದೆ. ಇದು ಚರ್ಮಕ್ಕೆ ಕಿರಿಕಿರಿಯ ಉಂಟು ಮಾಡಬಹುದು, ಬಿಸಿಲಿನ ತಾಪಕ್ಕೆ ಹೆಚ್ಚು ಒಳಗಾಗುವುದನ್ನು ತಪ್ಪಿಸಲು, ಎಲ್ಲಾ ಸಮಯದಲ್ಲೂ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಮೂಲಕ ಮತ್ತು ಪ್ರತಿ ಅರ್ಧ ಗಂಟೆಗೊಮ್ಮೆ ನೀರು ಕುಡಿಯುತ್ತಾ ಚೆನ್ನಾಗಿ ಹೈಡ್ರೇಟ್ ಆಗಿರುವುದು ಅತ್ಯಗತ್ಯ. ಹೆಚ್ಚುವರಿಯಾಗಿ, ನಿಮ್ಮ ಆಹಾರದಲ್ಲಿ ಸಾಕಷ್ಟು ಹೈಡ್ರೇಟಿಂಗ್ ಇರುವ ಮತ್ತು ಕಲ್ಲಂಗಡಿಯಂತಹ ಬೇಸಿಗೆಯಲ್ಲಿ ಸಿಗುವ ರಸಭರಿತ ಹಣ್ಣುಗಳನ್ನು ಸೇವಿಸುವುದು ನಿಮ್ಮ ದೇಹ ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Defying Skincare Hacks: ವಯಸ್ಸನ್ನು ಮೀರಿದ ಸ್ಕಿನ್ ಕೇರ್ ಹ್ಯಾಕ್ಸ್! 50 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಯೂ ಈ ವಿಷಯ ತಿಳಿದುಕೊಳ್ಳಬೇಕು

ಉತ್ಕರ್ಷಣ ನಿರೋಧಕ ಗುಣಗಳು ಹೆಚ್ಚಿರುವ ಆಹಾರಗಳನ್ನು ಸೇವಿಸಿ:

ಶಾಖ ವಿಪರಿತವಾಗಿರುವ ಸಮಯದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಲು ಆರೋಗ್ಯಕರ ಆಹಾರವನ್ನು ತಿನ್ನುವುದು ಬಹಳ ಮುಖ್ಯ. ಉತ್ಕರ್ಷಣ ನಿರೋಧಕ ಭರಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಲು ತಜ್ಞರು ಹೆಚ್ಚು ಶಿಫಾರಸು ಮಾಡಿದ್ದಾರೆ. ಏಕೆಂದರೆ ಅವು ನೈಸರ್ಗಿಕ ಸನ್ ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುತ್ತವೆ. ಈ ಆಹಾರಗಳು ಸೌರ ವಿಕಿರಣದ ಹಾನಿಕಾರಕ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ತೀವ್ರವಾದ ಬೇಸಿಗೆಯ ಶಾಖದಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡದ ವಿರುದ್ಧ ರಕ್ಷಣಾತ್ಮಕವಾಗಿರಲು ಸಹಾಯ ಮಾಡುತ್ತದೆ. ಈ ಆರೋಗ್ಯಕರ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ, ನಿಮ್ಮ ಚರ್ಮವನ್ನು ರಕ್ಷಿಸಲು ಮತ್ತು ಆರೋಗ್ಯಕರ, ಕಾಂತಿಯುತ ಮೈಬಣ್ಣವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡಬಹುದು.

ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ, ಟೋನ್ ಮಾಡಿ ಮತ್ತು ಮಾಯಿಶ್ಚರೈಸ್ ಮಾಡಿ:

ಬೇಸಿಗೆಯ ತಿಂಗಳಿನಲ್ಲಿ ನಿಯಮಿತ ಚರ್ಮದ ಆರೈಕೆಯ ದಿನಚರಿಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇದರಲ್ಲಿ ಶುದ್ಧೀಕರಣ, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಸೇರಿವೆ. ಶಾಖ ಮತ್ತು ತೇವಾಂಶವು ಹೆಚ್ಚುವರಿ ತೈಲ ಉತ್ಪಾದನೆ, ಮುಚ್ಚಿದ ರಂಧ್ರಗಳು ಮತ್ತು ಹೆಚ್ಚಿದ ಬೆವರಿಗೆ ಕಾರಣವಾಗಬಹುದು, ಇದು ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಮತ್ತು ನೀರಿನಾಂಶನಿಂದ ಇರಲು ಇನ್ನಷ್ಟು ಸಹಕಾರಿಯಾಗಿದೆ. ದಿನವಿಡೀ ಚರ್ಮದ ಮೇಲೆ ಸಂಗ್ರಹವಾಗುವ ಕೊಳೆ, ಎಣ್ಣೆ ಮತ್ತು ಬೆವರನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಟೋನಿಂಗ್ ಚರ್ಮದ ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ರಂಧ್ರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾಯಿಶ್ಚರೈಸಿಂಗ್ ಶುಷ್ಕತೆಯನ್ನು ತಡೆಗಟ್ಟಿ ಚರ್ಮವನ್ನು ಕಾಪಾಡಿಕೊಳ್ಳಲು ಮತ್ತು ಯುವಿ ವಿಕಿರಣದಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನಿಯಮಿತ ಚರ್ಮದ ಆರೈಕೆಯ ದಿನಚರಿಯನ್ನು ಅನುಸರಿಸುವ ಮೂಲಕ, ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮುಖ್ಯ.

ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ:

ಚರ್ಮದ ಆರೈಕೆಗಾಗಿ ಸೂರ್ಯನಿಗೆ ಮತ್ತಷ್ಟು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಅಲ್ಲದೆ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವುದು ಅತ್ಯಗತ್ಯ. ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುದು, ನೆರಳಿನಲ್ಲಿ ಉಳಿಯುವುದು ಮತ್ತು ಹೆಚ್ಚುವರಿ ಸನ್ಸ್ಕ್ರೀನ್ ಹಚ್ಚುವುದು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗಗಳಾಗಿವೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸುವುದು ಒಳ್ಳೆಯದು. ಏಕೆಂದರೆ ಇದು ಸೂರ್ಯನ ಕಿರಣಗಳು ಪ್ರಬಲವಾಗಿರುವಾಗ. ಹೊರಗೆ ಹೋಗಬೇಕಾದರೆ, ಸೂರ್ಯನ ಕಿರಣಗಳಿಂದ ರಕ್ಷಿಸಲು ಸಾಧ್ಯವಾದಷ್ಟು ನೆರಳನ್ನು ಪಡೆಯಲು ತಜ್ಞರು ಶಿಫಾರಸು ಮಾಡುತ್ತಾರೆ. ಇದರ ಜೊತೆಗೆ ಬೇಸಿಗೆಯಲ್ಲಿ, ಅಡುಗೆಮನೆಯಲ್ಲಿ ಅಡಗಿರುವ ಹಲವಾರು ಬ್ಯೂಟಿ ಹ್ಯಾಕ್​​​ಗಳಿಂದ, ನಿಮ್ಮ ಚರ್ಮಕ್ಕೆ ಗ್ಲೋ ನೀಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ