AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Defying Skincare Hacks: ವಯಸ್ಸನ್ನು ಮೀರಿದ ಸ್ಕಿನ್ ಕೇರ್ ಹ್ಯಾಕ್ಸ್! 50 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಯೂ ಈ ವಿಷಯ ತಿಳಿದುಕೊಳ್ಳಬೇಕು

50 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಬೇಕಾದ ಅತ್ಯಂತ ಪರಿಣಾಮಕಾರಿಯಾದ ಚರ್ಮದ ಆರೈಕೆ ಹ್ಯಾಕ್ ಗಳ ಬಗ್ಗೆ ತಿಳಿಸಲಾಗಿದ್ದು, ಸುಕ್ಕುಗಳನ್ನು ತಡೆಯುವುದರಿಂದ ಹಿಡಿದು ಚರ್ಮದ ಹೊಳಪನ್ನು ಹೆಚ್ಚಿಸುವವರೆಗೆ, ತಾರುಣ್ಯದ ಮೈಬಣ್ಣವನ್ನು ನೀಡಲು ನಿಮಗೆ ಸಲಹೆಗಳನ್ನು ನೀಡಲಾಗಿದೆ.

Defying Skincare Hacks: ವಯಸ್ಸನ್ನು ಮೀರಿದ ಸ್ಕಿನ್ ಕೇರ್ ಹ್ಯಾಕ್ಸ್! 50 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಯೂ ಈ ವಿಷಯ ತಿಳಿದುಕೊಳ್ಳಬೇಕು
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 19, 2023 | 3:46 PM

Share

ವಯಸ್ಸಾದಂತೆ ಚರ್ಮದಲ್ಲಿ ಹಲವಾರು ರೀತಿಯಲ್ಲಿ ಬದಲಾವಣೆಗಳಾಗುತ್ತದೆ. ನಮ್ಮ ಚರ್ಮವನ್ನು ಮೃದುವಾಗಿಡುವ ಎರಡು ಅಗತ್ಯ ಪ್ರೋಟೀನ್ ಗಳಾದ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯು ನಿಧಾನಗೊಳ್ಳುತ್ತದೆ, ಇದರ ಪರಿಣಾಮವಾಗಿ ಸುಕ್ಕುಗಳು ಮತ್ತು ಚರ್ಮದ ಕುಗ್ಗುವಿಕೆ ಉಂಟಾಗುತ್ತದೆ. ಹೆಚ್ಚುವರಿಯಾಗಿ, ಹಾರ್ಮೋನುಗಳ ಬದಲಾವಣೆಗಳು, ಜೀವನಶೈಲಿ, ಚರ್ಮದ ಆರೋಗ್ಯ ಮೇಲೆ ಪರಿಣಾಮ ಬೀರುತ್ತವೆ.

ಆಂಟಿ ಏಜಿಂಗ್ ಸ್ಕಿನ್ ಕೇರ್ ಹ್ಯಾಕ್ಸ್

50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ತಮ್ಮ ಚರ್ಮದ ಆರೈಕೆ ಹ್ಯಾಕ್​​ಗಳು ಸಾಕಷ್ಟು ಇವೆ. ನಿಮ್ಮ ಚರ್ಮದ ಆರೈಕೆಯ ದಿನಚರಿಯಲ್ಲಿ ಅಳವಡಿಸಿಕೊಳ್ಳಲು ಕೆಲವು ಅಗತ್ಯ ಸಲಹೆಗಳು ಇಲ್ಲಿವೆ.

ಹೈಡ್ರೇಟ್, ಹೈಡ್ರೇಟ್, ಹೈಡ್ರೇಟ್

ನಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ, ಆದರೆ ಆರೋಗ್ಯಕರ, ತಾರುಣ್ಯದಿಂದ ಕಾಣುವ ಚರ್ಮವನ್ನು ಕಾಪಾಡಿಕೊಳ್ಳಲು ಇದು ನಿರ್ಣಾಯಕ ಸ್ಥಾನದಲ್ಲಿರುತ್ತದೆ. ನಮಗೆ ವಯಸ್ಸಾದಂತೆ, ನಮ್ಮ ಚರ್ಮವು ಶುಷ್ಕವಾಗುತ್ತದೆ. ಆದ್ದರಿಂದ ಅದನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ನೀರಿನಾಂಶ ಅತ್ಯಗತ್ಯ. ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಮತ್ತು ಸ್ನಾನ ಮಾಡಿದ ಬಳಿಕ ನಿಮ್ಮ ಚರ್ಮಕ್ಕೆ ಹೈಡ್ರೇಟಿಂಗ್ ಮಾಯಿಶ್ಚರೈಸರ್ ಹಚ್ಚಿ.

ರೆಟಿನಾಲ್ ಅಂಶವಿರುವ ಉತ್ಪನ್ನಗಳನ್ನು ಬಳಸಿ

ರೆಟಿನಾಲ್ ಒಂದು ಪ್ರಬಲ ಘಟಕಾಂಶವಾಗಿದ್ದು, ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಅಲ್ಲದೆ ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ. ಇದು ಯಾವುದೇ ಆಂಟಿ-ಏಜಿಂಗ್ ಸ್ಕಿನ್ ಕೇರ್ ದಿನಚರಿಯಲ್ಲಿ ಇರಲೇಬೇಕಾಗಿದೆ. ಆದರೆ ರೆಟಿನಾಲ್ ಕೆಲವು ಚರ್ಮದ ಪ್ರಕಾರಗಳಿಗೆ ಕಿರಿಕಿರಿ ಉಂಟುಮಾಡಬಹುದು, ಆದ್ದರಿಂದ ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಳಸಿ ನೋಡಿ ಬಳಿಕ ನಿಮ್ಮ ತ್ವಚೆಗೆ ಹೊಂದಿಕೆಯಾದಲ್ಲಿ ಮತ್ತೆ ಬಳಸಬಹುದು.

ಸೂರ್ಯನಿಂದ ಚರ್ಮವನ್ನು ರಕ್ಷಿಸಿ

ವೃದ್ಧಾಪ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು ಸೂರ್ಯನ ಹಾನಿ. ಹಾನಿಕಾರಕ ಯುವಿ ಕಿರಣಗಳು ಸುಕ್ಕುಗಳು, ಕಪ್ಪು ಕಲೆಗಳು ಮತ್ತು ಚರ್ಮದ ಕ್ಯಾನ್ಸರ್ಗೆ ಕಾರಣವಾಗಬಹುದು. ನಿಮ್ಮ ಚರ್ಮವನ್ನು ರಕ್ಷಿಸಲು, ಮೋಡ ಕವಿದ ದಿನಗಳಲ್ಲಿಯೂ ಸಹ ಪ್ರತಿದಿನ 30 ಅಥವಾ ಅದಕ್ಕಿಂತ ಹೆಚ್ಚಿನ ಎಸ್ಪಿಎಫ್ ಹೊಂದಿರುವ ಸ್ಪೆಕ್ಟ್ರಮ್ ಸನ್ಸ್ಕ್ರೀನ್ ಅನ್ನು ಹಚ್ಚಿಕೊಳ್ಳಿ.

ಇದನ್ನೂ ಓದಿ: Skincare Routine: ನಿಮ್ಮ ತ್ವಚೆಯ ಆರೈಕೆಯಲ್ಲಿ ಪಪ್ಪಾಯಿ ಹಣ್ಣನ್ನು ಮಿಸ್ ಮಾಡದಿರಿ

ಸಾಕಷ್ಟು ನಿದ್ರೆ ಮಾಡಿ

ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನಿದ್ರೆ ಅತ್ಯಗತ್ಯ, ಹಾಗಾಗಿ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಇದು ಅಗತ್ಯ. ನಿದ್ರೆಯ ಸಮಯದಲ್ಲಿ, ನಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಪಡೆಯುವುದು ನಮ್ಮ ಚರ್ಮವನ್ನು ತಾರುಣ್ಯ ಮತ್ತು ಕಾಂತಿಯುತವಾಗಿ ಕಾಣಲು ಸಹಾಯ ಮಾಡುತ್ತದೆ. ಪ್ರತಿ ರಾತ್ರಿ ಕನಿಷ್ಠ ಏಳರಿಂದ ಎಂಟು ಗಂಟೆಗಳ ನಿದ್ರೆ ಪಡೆಯಲು ಪ್ರಯತ್ನಿಸಿ.

ಜೇಡ್ ರೋಲರ್ ಬಳಸಿ

ಜೇಡ್ ರೋಲರ್ ಗಳು ರಕ್ತ ಪರಿಚಲನೆಯನ್ನು ಸುಧಾರಿಸುವ, ಉಬ್ಬುವಿಕೆಯನ್ನು ಕಡಿಮೆ ಮಾಡುವ ಮತ್ತು ಚರ್ಮದ ಆರೈಕೆ ಮಾಡಲು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ. ನಿಮ್ಮ ಮುಖ ಮತ್ತು ಕುತ್ತಿಗೆಯನ್ನು ಮಸಾಜ್ ಮಾಡಲು ಪ್ರತಿದಿನ ಜೇಡ್ ರೋಲರ್ ಬಳಸಿ, ನಂತರ ನಿಮ್ಮ ಚರ್ಮದ ಕಾಂತಿಯಲ್ಲಿ ವ್ಯತ್ಯಾಸವನ್ನು ನೀವು ಗಮನಿಸಬಹುದು.

ಸಮಯವನ್ನು ಹಿಂದಕ್ಕೆ ತರಲು

ಸಾಧ್ಯವಿಲ್ಲವಾದರೂ, ನಾವು ವಯಸ್ಸಾದಂತೆ ಆರೋಗ್ಯಕರ, ಯೌವನಭರಿತವಾಗಿ ಕಾಣುವ ಚರ್ಮವನ್ನು ಕಾಪಾಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಚರ್ಮದ ಆರೈಕೆ ಹ್ಯಾಕ್​​ಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವ ಮೂಲಕ, ಸುಕ್ಕುಗಳನ್ನು ಕಡಿಮೆ ಮಾಡಲು, ಚರ್ಮದ ವಿನ್ಯಾಸ ಮತ್ತು ಟೋನ್ ಅನ್ನು ಸುಧಾರಿಸಲು ಮತ್ತು ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡಲು ಸಹಾಯ ಮಾಡಬಹುದು. ನೆನಪಿಡಿ, ಸ್ಥಿರತೆ ಮುಖ್ಯ, ಆದ್ದರಿಂದ ನಿಮ್ಮ ದಿನಚರಿಯನ್ನು ಸರಿಯಾಗಿ ಪಾಲನೆ ಮಾಡಿ ಬಳಿಕ ಕಾಲಾನಂತರದಲ್ಲಿ ನೀವು ಅದರ ಪ್ರಯೋಜನಗಳನ್ನು ನೋಡಬಹುದು.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?