Skincare Routine: ನಿಮ್ಮ ತ್ವಚೆಯ ಆರೈಕೆಯಲ್ಲಿ ಪಪ್ಪಾಯಿ ಹಣ್ಣನ್ನು ಮಿಸ್ ಮಾಡದಿರಿ
ನೀವು ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ನಿಮ್ಮ ತ್ವಚೆಯ ಆರೈಕೆಯನ್ನು ಮಾಡಬಹುದು. ಇದಲ್ಲದೇ ನೀವು ಪೇಸ್ಟ್ ಮಾಡಿ ಕೂಡ ಮುಖಕ್ಕೆ ಹಚ್ಚಬಹುದು.
ಪಪ್ಪಾಯಿ(Papaya)ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ನಿಮ್ಮ ಆರೋಗ್ಯ(Health)ಕ್ಕೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕ್ಯಾನ್ಸರ್, ಅಸ್ತಮಾ ಮುಂತಾದ ಕಾಯಿಲೆಗಳಿಗೆ ಒಂದೊಳ್ಳೆ ಔಷಧಿ ಎಂದು ಕೂಡ ಹೇಳಬಹುದು. ಪಪ್ಪಾಯಿ ಹಣ್ಣು ಮಾತ್ರವಲ್ಲದೇ ಪಪ್ಪಾಯಿ ಕಾಯಿಯಲ್ಲಿಯೂ ಕೂಡ ಪೋಷಕಾಂಶಗಳು ಸಮೃದ್ದವಾಗಿದೆ. ಇದು ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ, ಬಿ ಮತ್ತು ಇ ಗಳನ್ನು ಒಳಗೊಂಡಿದೆ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ನೀಡುವ ಪಪ್ಪಾಯ ನಿಮ್ಮ ತ್ವಚೆಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಹಾಗೂ ಕಾಂತಿಯುತ ತ್ವಚೆಗಾಗಿ ಸಹಾಯಮಾಡುತ್ತದೆ. ನೀವು ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ನಿಮ್ಮ ತ್ವಚೆಯ ಆರೈಕೆಯನ್ನು ಮಾಡಬಹುದು. ಇದಲ್ಲದೇ ನೀವು ಪೇಸ್ಟ್ ಮಾಡಿ ಕೂಡ ಮುಖಕ್ಕೆ ಹಚ್ಚಬಹುದು. ನಿಮ್ಮ ಚರ್ಮವನ್ನು ಸ್ವಚ್ಚಗೊಳಿಸಿ, ಕಾಂತಿಯುತ ತ್ವಚೆಯನ್ನು ಪಡೆಯುವಂತೆ ಮಾಡುತ್ತದೆ.
ಪಪ್ಪಾಯಿ ಹಣ್ಣಿನಿಂದ ಆಗುವ ತ್ವಚೆಯ ಪ್ರಯೋಜನಗಳು ಇಲ್ಲಿವೆ:
ಚರ್ಮವನ್ನು ಹೊಳಪುಗೊಳಿಸುತ್ತದೆ:
ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ದವಾಗಿದೆ. ಇದು ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಧಾನವಾಗಿ ಚರ್ಮದ ಕಲೆಗಳನ್ನು ಹೋಗಲಾಡಿಸುವಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ.
ಮೊಡವೆಗಳ ವಿರುದ್ಧ ಹೋರಾಡುತ್ತದೆ:
ಮೊಡವೆಗಳು ಪ್ರತಿಯೊಬ್ಬರ ಜೀವನದಲ್ಲಿ ಕೆಲವು ಹಂತದಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಆದರೆ ಇದರ ಕಲೆಗಳು ಮುಖದಲ್ಲಿ ಹಾಗೆಯೇ ಉಳಿದುಕೊಳ್ಳುವುದರಿಂದ ನಿಮ್ಮ ತ್ವಚೆಯ ಸೌಂದರ್ಯವನ್ನು ಹಾಳು ಮಾಡಿ ಬಿಡುತ್ತದೆ. ಆದ್ದರಿಂದ ನೀವು ಮೊಡವೆಗಳು ಹಾಗೂ ಅದರ ಕಲೆಗಳಿಂದ ಬಳಲುತ್ತಿದ್ದರೆ ಪಪ್ಪಾಯಿ ಹಣ್ಣು ಒಂದು ಉತ್ತಮ ಮನೆ ಮದ್ದು ಆಗಿದೆ. ನೀವು ಪೇಸ್ಟ್ ಮಾಡಿ ಕೂಡ ಮುಖಕ್ಕೆ ಹಚ್ಚಬಹುದು.
ಹಾನಿಗೊಳಗಾದ ಚರ್ಮವನ್ನು ಸರಿಪಡಿಸುತ್ತದೆ:
ಹಾನಿಗೊಳಗಾದ ಚರ್ಮವು ಅನೇಕ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಪಪ್ಪಾಯಿಯು ಲೈಕೋಪೀನ್‌ನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ಸುಕ್ಕುಗಳಂತಹ ವಯಸ್ಸಾದ ಚಿಹ್ನೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಎಷ್ಟೇ ಮಯಸ್ಸಾದರೂ ಕೂಡ ಸುಕ್ಕುಗಳಿಲ್ಲದ ತ್ವಚೆಯನ್ನು ಪಡೆಯಬಹುದು.
ಇದನ್ನು ಓದಿ: ನಿಮ್ಮ ತುಟಿಯಲ್ಲಿ ದೀರ್ಘಕಾಲದವರೆಗೆ ಲಿಪ್ ಸ್ಟಿಕ್ ಉಳಿಯಬೇಕಾ, ಈ ಟಿಪ್ಸ್ ಫಾಲೋ ಮಾಡಿ
ಚರ್ಮವನ್ನು ತಂಪಾಗಿರುವುವಂತೆ ಮಾಡುತ್ತದೆ:
ನಿಮ್ಮ ಚರ್ಮದಲ್ಲಿ ಉರಿಯುವ ಅನುಭವವಾದರೆ ಪಪ್ಪಾಯಿ ಹಣ್ಣನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಿ. ಇದು ಚರ್ಮದ ಉರಿಯನ್ನು ಶಮನಗೊಳಿಸಲು ಮತ್ತು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಯಾವುದೇ ಸಮಯದಲ್ಲಿ ತಾಜಾ ಮತ್ತು ಪೋಷಣೆಯ ಚರ್ಮಕ್ಕಾಗಿ ಪಪ್ಪಾಯಿ ಬಳಸಿ.
ಸತ್ತ ಚರ್ಮದ ಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ:
ಪಪ್ಪಾಯಿಯು ನಿಮ್ಮ ತ್ವಚೆಗೆ ಎಫ್ಫೋಲಿಯೇಟಿಂಗ್ ಮಾಡುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಸೂರ್ಯನ ಬಿಸಿಲಿಗೆ ಟ್ಯಾನ್ ಆಗಿರುವ ನಿಮ್ಮ ಚರ್ಮವನ್ನು ಸಮಗೊಳಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:54 am, Wed, 11 January 23