Lipstick Hacks: ನಿಮ್ಮ ತುಟಿಯಲ್ಲಿ ದೀರ್ಘಕಾಲದವರೆಗೆ ಲಿಪ್ ಸ್ಟಿಕ್ ಉಳಿಯಬೇಕಾ, ಈ ಟಿಪ್ಸ್ ಫಾಲೋ ಮಾಡಿ
ನೀವು ಎಷ್ಟೇ ಮೇಕ್ ಅಪ್ ಮಾಡಿದರೂ ಕೂಡ ಲಿಪ್ ಸ್ಟಿಕ್ ಹಾಕಿಲ್ಲ ಅಂದ್ರೇ ನಿಮ್ಮ ಮೇಕ್ ಅಪ್ ಅಪೂರ್ಣ.
ಲಿಪ್ ಸ್ಟಿಕ್(Lipstick ) ಪ್ರತಿಯೊಂದು ಹೆಣ್ಣಿಗೂ ಸಕ್ಕತ್ತ್ ಫೇವರೇಟ್. ನೀವು ಎಷ್ಟೇ ಮೇಕ್ ಅಪ್(Makeup) ಮಾಡಿದರೂ ಕೂಡ ಲಿಪ್ ಸ್ಟಿಕ್ ಹಾಕಿಲ್ಲ ಅಂದ್ರೇ ನಿಮ್ಮ ಮೇಕ್ ಅಪ್ ಅಪೂರ್ಣ. ಮಹಿಳೆಯರು ಮೇಕಪ್ ಮಾಡಿಕೊಳ್ಳಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಾರೆ. ಆದ್ದರಿಂದ ನೀವು ಆಕರ್ಷಕವಾಗಿ ಕಾಣಲು ಲಿಪ್ ಸ್ಟಿಕ್ ಬಳಸುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ. ಇದು ನಿಮ್ಮ ಲಿಪ್ ಸ್ಟಿಕ್ ದೀರ್ಘಕಾಲದ ವರೆಗೆ ಉಳಿಯಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿ ದಿನ ಲಿಪ್ ಸ್ಟಿಕ್ ಹಚ್ಚುವ ಮುನ್ನ ಈ ಕೆಳಗಿನ ಸಲಹೆಯನ್ನು ಪಾಲಿಸಿ.
ಲಿಪ್ ಬಾಮ್ ಬಳಸಿ:
ನೀವು ಪ್ರತಿಬಾರಿ ಲಿಪ್ ಸ್ಟಿಕ್ ಹಚ್ಚುವ ಮೊದಲು ಲಿಪ್ ಬಾಮ್ ಹಚ್ಚುವುದನ್ನು ಮರೆಯದಿರಿ. ಇದು ನಿಮ್ಮ ತುಟಿಗೆ ತೇವಾಂಶವನ್ನು ನೀಡುತ್ತದೆ. ಜೊತೆಗೆ ಚಳಿಗಾಲದಲ್ಲಿ ತುಟಿ ಒಡೆಯದಂತೆ ರಕ್ಷಣೆ ನೀಡುತ್ತದೆ. ಆದ್ದರಿಂದ ಪ್ರತಿ ಬಾರಿ ಲಿಪ್ ಬಾಮ್ ಹಚ್ಚುವುದನ್ನು ಸ್ಕಿಪ್ ಮಾಡದಿರಿ.
ಲಿಪ್ ಲೈನರ್ ಬಳಸಿ:
ನೀವು ತುಟಿಗೆ ಲಿಪ್ ಸ್ಟಿಕ್ ಹಚ್ಚುವ ಮೊದಲು ಲಿಪ್ ಲೈನರ್ ಹಚ್ಚುವುದನ್ನು ಮರೆಯದಿರಿ. ಇದು ನಿಮ್ಮ ತುಟಿಯು ಸುಂದರವಾದ ಶೇಪ್ನಲ್ಲಿ ಕಾಣುವಂತೆ ಮಾಡುತ್ತದೆ. ಜೊತೆಗೆ ನೀವು ಲಿಪ್ ಲೈನರ್ ಖರೀದಿಸುವಾಗ ಒಳ್ಳೆಯ ಗುಣಮಟ್ಟವನ್ನು ನೋಡಿ ಖರೀದಿಸಿ. ಇಲ್ಲದ್ದಿದ್ದರೆ ನಿಮ್ಮ ತುಟಿಯ ಚರ್ಮದ ಮೇಲೆ ಹಾನಿಯುಂಟು ಮಾಡಬಹುದು.
ದೀರ್ಘಕಾಲದ ವರೆಗೆ ಉಳಿಯುವ ಉತ್ತಮ ಗುಣಮಟ್ಟದ ಲಿಪ್ ಸ್ಟಿಕ್ ಖರೀದಿಸಿ:
ನೀವು ಹಚ್ಚಲು ಬಯಸುವ ನಿಮ್ಮ ನೆಚ್ಚಿನ ಬಣ್ಣದ ಲಿಪ್ ಸ್ಟಿಕ್ ಖರೀದಿಸುವುದು ಮಾತ್ರವಲ್ಲ, ಅದು ದೀರ್ಘಕಾಲದ ಉಳಿಯುವಂತಹ ಉತ್ತಮ ಗುಣಮಟ್ಟದ ಲಿಪ್ ಸ್ಟಿಕ್ ಖರೀದಿಸಿ. ಮ್ಯಾಟ್ ಲಿಪ್‌ಸ್ಟಿಕ್ ಖರೀದಿಸಿ ಇದು ಹೆಚ್ಚು ಕಾಲ ಉಳಿಯಲು ಸಹಾಯಕವಾಗಿದೆ. ಜೊತೆಗೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ: ಅತಿಯಾಗಿ ಪೇನ್ ಕಿಲ್ಲರ್ಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳೇನು, ತಿಳಿಯಿರಿ
ಫೇಸ್ ಪೌಡರ್ ಬಳಸಿ:
ನೀವು ಲಿಪ್ ಸ್ಟಿಕ್ ಹಚ್ಚಿದ ಮೇಲೆ ಅದರ ಮೇಲೆ ನೀವು ಬಳಸುವ ಫೇಸ್ ಪೌಡರ್ ಹಚ್ಚಿ. ಇದು ನಿಮ್ಮ ತುಟಿಗಳಲ್ಲಿ ಲಿಪ್ ಸ್ಟಿಕ್ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ. ಈ ರೀತಿಯಾಗಿ ತುಟಿಯ ಮೇಲೆ ಪೌಡರ್ ಬಳಸುವುದರಿಂದ ಇದು ನಿಮ್ಮ ತುಟಿಗಳಿಗೆ ಮ್ಯಾಟ್ ಫಿನೀಶ್ ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: