ಸಂಬಂಧದಲ್ಲಿ, ನಾವು ಒಬ್ಬರಿಗೊಬ್ಬರು ಇದ್ದೇವೆ ಎಂದು ಹೇಳುವುದಕ್ಕಿಂತ ಹೆಚ್ಚಾಗಿ, ನಾವು ನಿಜವಾಗಿಯೂ ಇರಬೇಕು. ಕ್ರಿಯೆಯು ಪದಗಳಿಗಿಂತ ಹೆಚ್ಚು ಜೋರಾಗಿ ಮಾತನಾಡುತ್ತದೆ ಎಂಬುದು ನಿಮಗೆ ತಿಳಿದಿರಬಹುದು. ಪದಗಳು ಮತ್ತು ಕ್ರಿಯೆಗಳು ಸ್ಥಿರವಾಗಿ ಹೊಂದಿಕೆಯಾಗದಿದ್ದಾಗಲೇ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಯಾರನ್ನೇ ಇಷ್ಟ ಪಟ್ಟರು ಸಹ ಅವರು ದೀರ್ಘಕಾಲದವರೆಗೆ ಇರಲು ಬಯಸುತ್ತೇವೆ. ಕಷ್ಟ, ಸುಖದಲ್ಲಿ ಯಾವುದೇ ಏರಿಳಿತಗಳಿರಲಿ ಒಬ್ಬರಿಗೊಬ್ಬರು ಜೊತೆಯಾಗಿ ಇರಬೇಕೆಂದು ಬಯಸುತ್ತೇವೆ. ನಮಗೆಲ್ಲರಿಗೂ ವಿಭಿನ್ನ ಆಲೋಚನೆಗಳಿವೆ. ಅದರಲ್ಲಿಯೂ ಪ್ರೀತಿಯ ವಿಷಯಕ್ಕೆ ಬಂದಾಗ ನಮ್ಮನ್ನು ನಾವು ವ್ಯಕ್ತಪಡಿಸುವ ರೀತಿ ಭಿನ್ನವಾಗಿರುತ್ತದೆ. ಹಾಗಾಗಿ ಆರೋಗ್ಯಕರ ಮತ್ತು ದೀರ್ಘ ಸಂಬಂಧಕ್ಕೆ ಪರಸ್ಪರ ಪ್ರೀತಿ ತೋರಿಸುವುದು ಹೇಗೆ? ಎಂಬುದು ಕೂಡ ಪ್ರಮುಖ ಅಂಶವಾಗಿರುತ್ತದೆ. ಚಿಕಿತ್ಸಕರ ಪ್ರಕಾರ ಒಬ್ಬರಿಗೊಬ್ಬರು ಸರಳವಾಗಿ ಪ್ರೀತಿ ತೋರಿಸುವುದು ಹೇಗೆ? ಮತ್ತಷ್ಟು ವಿವರ ಇಲ್ಲಿದೆ:
ಸಮಯ: ಯಾರಿಗಾದರೂ ನಿಮ್ಮ ಸಮಯ ಮತ್ತು ಗಮನವನ್ನು ನೀಡುವುದು ಒಂದು ಪ್ರಮುಖ ಪ್ರೀತಿಯ ಭಾಷೆಯಾಗಿದೆ. ನಿಮ್ಮಿಬ್ಬರ ಮಧ್ಯೆ ಆಳವಾದ ಸಂಪರ್ಕವನ್ನು ನಿರ್ಮಾಣ ಮಾಡಿಕೊಳ್ಳಲು ಮತ್ತು ಒಟ್ಟಿಗೆ ಗುಣಮಟ್ಟದ ಮಾತುಕತೆ ನಡೆಸಲು ಸಂಬಂಧಗಳಲ್ಲಿ ಹೆಚ್ಚು ಸಮಯ ನಿಗದಿಪಡಿಸುವುದು ಮುಖ್ಯವಾಗಿದೆ. ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳುವುದು: ನಮಗೆ ನೀಡಿದ ಕಾರ್ಯ ಅಥವಾ ಕೆಲಸ ಗಳನ್ನು ಒಟ್ಟಿಗೆ ನಿರ್ವಹಿಸುವುದು ಮತ್ತು ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳುವುದು ಮತ್ತೊಂದು ರೀತಿಯಲ್ಲಿ ಪ್ರೀತಿಯನ್ನು ಹಂಚಿಕೊಳ್ಳುವ ಭಾಷೆಯಾಗಿದೆ. ಅಥವಾ ನಿಮ್ಮಲ್ಲಿ ಒಬ್ಬರಿಗೆ ನೀಡಿದ ಕೆಲಸವನ್ನು ಎರಡು ಭಾಗ ಮಾಡಿಕೊಂಡು ಕೆಲಸವನ್ನು ನಿರ್ವಹಿಸುವುದರಿಂದ, ಸಮಾನ ಗೌರವ ಮತ್ತು ಜವಾಬ್ದಾರಿ ಮತ್ತು ನಿಮ್ಮಿಬ್ಬರ ಮಧ್ಯೆ ಉತ್ತಮ ಒಡನಾಟವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:Relationships: ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಪೋಷಣೆ: ಪ್ರೀತಿ ಮಾಡುವುದು ಮಾತ್ರವಲ್ಲ. ಆ ಸಂಬಂಧವನ್ನು ಪೋಷಿಸಲು ಸಮಯ ತೆಗೆದುಕೊಳ್ಳಬೇಕು. ಏಕೆಂದರೆ ಒಂದೇ ದಿನದಲ್ಲಿ ಎಲ್ಲವೂ ಮುಗಿದುಹೋಗಬೇಕು ಎಂದರೆ ಅದು ಸಾಧ್ಯವಿಲ್ಲ. ಮುಂದೆ ಈ ಪ್ರೀತಿಯಿಂದಾಗಿ ಪರಸ್ಪರ ಪ್ರೀತಿ ಮತ್ತು ಯಾವುದೇ ತೊಂದರೆ ಬಂದರೂ ಸಹ ನಿಭಾಯಿಸುವ ಶಕ್ತಿ ನೀಡುತ್ತದೆ.
ಪ್ರಚೋದನೆ: ಇದು ದೈಹಿಕ, ಭಾವನಾತ್ಮಕ ಮತ್ತು ಮಾನಸಿಕದವರೆಗೆ ಎಲ್ಲಾ ರೀತಿಯ ಪ್ರಚೋದನೆಗಳನ್ನು ಒಳಗೊಂಡಿದೆ. ಅಲ್ಲದೆ ಇದರಲ್ಲಿ ತಮಾಷೆ, ಚೇಷ್ಟೆ ಎಲ್ಲವನ್ನೂ ಒಳಗೊಂಡಿರುತ್ತದೆ. ಹೊಸ ಅನುಭವಗಳನ್ನು ಸಂಗ್ರಹಿಸುವುದು ಸಹ ಪ್ರಚೋದನೆಯ ಭಾಗಗಳಾಗಿವೆ. ಇದು ಕೂಡ ಪ್ರೀತಿ ವ್ಯಕ್ತ ಪಡಿಸುವ ರೀತಿಯಾಗಿದೆ.