ಕೆಜಿಎಫ್ ಸಿನಿಮಾದ ನಂತರ ಗಡ್ಡ ಬಿಡುವುದು ಫ್ಯಾಶನ್ ಆಗಿಬಿಟ್ಟಿದೆ. ಸೆಲೆಬ್ರಿಟಿಗಳಿಂದ ಹಿಡಿದು ಯುವಜನತೆಯವರೆಗೂ ಬಿಯರ್ಡ್ ಇಷ್ಟ ಪಡುವವರೇ ಹೆಚ್ಚು. ಇದು ನಿಮಗೆ ಒಳ್ಳೆಯ ರಫ್ ಲುಕ್ ನಲ್ಲಿ ನೀಡುತ್ತದೆ. ಹುಡುಗಿಯರು ಕೂಡ ಈ ನೋಟವನ್ನು ಇಷ್ಟಪಡುತ್ತಾರೆ. ಆದರೆ ಸುಂದರವಾಗಿ ಕಾಣುವ ಈ ಗಡ್ಡವನ್ನು ಬೆಳೆಸುವುದು ನಿಜಕ್ಕೂ ಕಷ್ಟ. ಬೆವರಿಗೆ ಇದು ಹೆಚ್ಚು ತುರಿಕೆ ಹಾಗೂ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಇದಲ್ಲದೇ ಬೆವರಿನಿಂದಾಗಿ ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕುಗಳು ಉಂಟಾಗುವ ಸಾಧ್ಯತೆಗಳೂ ಇವೆ. ಅದಕ್ಕಾಗಿಯೇ ದಟ್ಟವಾದ ಗಡ್ಡವಿರುವವರು ತುರಿಕೆಯಂತಹ ಸಮಸ್ಯೆಗಳನ್ನು ತಪ್ಪಿಸಲು ಈ ಸಲಹೆಗಳನ್ನು ಅನುಸರಿಸಬೇಕು.
ತುರಿಕೆ ತಡೆಗಟ್ಟಲು ಸ್ನಾನ ಮಾಡುವ ಮೊದಲು ನಿಮ್ಮ ಗಡ್ಡವನ್ನು ಎಣ್ಣೆಯಿಂದ ಮಸಾಜ್ ಮಾಡಿ. ವಾರಕ್ಕೆ ಎರಡು ಬಾರಿಯಾದರೂ ಇದನ್ನು ಮಾಡುವುದು ಉತ್ತಮ. ನಿಮ್ಮ ಚರ್ಮದ ಪ್ರಕಾರವನ್ನು ಅವಲಂಬಿಸಿ ಉತ್ತಮ ಕ್ಲೆನ್ಸರ್ ಅನ್ನು ಬಳಸುವುದು ಸಹ ಅಗತ್ಯವಾಗಿದೆ.
ಇದನ್ನೂ ಓದಿ: ರಾತ್ರಿ ಈ ಆಹಾರ ಸೇವಿಸಿದರೆ ಉತ್ತಮ ನಿದ್ರೆ ಬರುವುದು ಗ್ಯಾರಂಟಿ
ಸ್ನಾನ ಮಾಡುವಾಗ ನೀವು ನಿಮ್ಮ ಗಲ್ಲವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದಕ್ಕಾಗಿ ಉತ್ತಮ ಕಂಡೀಷನರ್ ಆಯ್ಕೆಮಾಡಿ. ನಂತರ ಉತ್ತಮ ಲೋಷನ್ ಹಚ್ಚಿ. ಹೀಗೆ ಮಾಡುವುದರಿಂದ ತುರಿಕೆ ಉಂಟಾಗುವುದಿಲ್ಲ.
ಇದಲ್ಲದೆ ನಿಮ್ಮ ಗಡ್ಡ ಕಪ್ಪಾಗಿ ಹಾಗೂ ದಟ್ವವಾಗಿ ಬೆಳೆಯಲು ತೆಂಗಿನ ಎಣ್ಣೆಯಿಂದ ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿ. ಇದು ನಿಮ್ಮ ತ್ವಚೆಯ ಆರೋಗ್ಯ ಹಾಗೂ ಗಡ್ಡ ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ