Dark Circles: ಡಾರ್ಕ್​ ಸರ್ಕಲ್​ ನಿವಾರಣೆಗೆ ಇಲ್ಲಿವೆ ಸರಳ ಪರಿಹಾರ

| Updated By: Pavitra Bhat Jigalemane

Updated on: Feb 05, 2022 | 5:31 PM

ಮಹಿಳೆಯರಲ್ಲೇ ಹೆಚ್ಚು ಡಾರ್ಕ್​ ಸರ್ಕಲ್​ಗಳು ಕಂಡು ಬರುತ್ತದೆ. ಕಣ್ಣಿನ ಕೆಲಗಿನ ಚರ್ಮ ಮೃದುವಾಗಿರುತ್ತದೆ. ಕಣ್ಣಿಗೆ ಒತ್ತಡ ಬಿದ್ದಾಗ ಅವು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

Dark Circles: ಡಾರ್ಕ್​ ಸರ್ಕಲ್​ ನಿವಾರಣೆಗೆ ಇಲ್ಲಿವೆ ಸರಳ ಪರಿಹಾರ
ಸಂಗ್ರಹ ಚಿತ್ರ
Follow us on

ಡಾರ್ಕ್ ಸರ್ಕಲ್ (Dark Circle) ಅಥವಾ ಕಣ್ಣಿನ ಕೆಳಗೆ ಕಪ್ಪಾಗುವುದು ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳ ಸಮಸ್ಯೆ. ವಯಸ್ಸಿನ ಅಂತರವಿಲ್ಲದೆ ಕಾಡುವ  ಡಾರ್ಕ್​ ಸರ್ಕಲ್​ಗಳು ಮುಖದ ಅಂದವನ್ನು ಕೆಡಸುತ್ತವೆ. ಮಹಿಳೆಯರಲ್ಲೇ ಹೆಚ್ಚು ಡಾರ್ಕ್​ ಸರ್ಕಲ್​ಗಳು ಕಂಡು ಬರುತ್ತದೆ. ಕಣ್ಣಿನ ಕೆಲಗಿನ ಚರ್ಮ ಮೃದುವಾಗಿರುತ್ತದೆ. ಕಣ್ಣಿಗೆ ಒತ್ತಡ ಬಿದ್ದಾಗ ಅವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಡಾರ್ಕ್ ಸರ್ಕಲ್​ಗಳಿಗೆ ಮುಖ್ಯ ಕಾರಣ ಹೈಪರ್​ಪಿಗ್ಮೆಂಟೇಶನ್ (Hyperpigmentation), ವಿಟಮಿನ್​ ಸಿ ಕೊರತೆ, ರಕ್ತ ಸಂಚಾರ ಸರಿಯಾಗಿ ಆಗದೇ ಇರುವುದು, ನಿದ್ದೆಯ ಕೊರತೆ, ಅತಿಯಾಗಿ ಮೊಬೈಲ್​, ಟ್ಯಾಬ್​ಗಳ ಬಳಕೆ ಹೀಗೆ ಹತ್ತು ಹಲವು ಕಾರಣಗಳಿಂದ ಡಾರ್ಕ್​ ಸರ್ಕಲ್​ ಉಂಟಾಗುತ್ತದೆ. ಇದಕ್ಕೆ ನೀವು ಪರಿಹಾರವನ್ನು ಕಂಡುಕೊಳ್ಳಬಹುದು. ಇಲ್ಲಿದೆ ನೋಡಿ ಟಿಪ್ಸ್​ಗಳು

ಸ್ಕಿನ್​ ಕ್ರೀಮ್​ಗಳ ಬಳಕೆ :
ಕಣ್ಣುಗಳ ಕೆಳಗಿರುವ ಚರ್ಮವು ತೆಳ್ಳಗಿರುವುದರಿಂದ, ಇದಕ್ಕೆ ಕೋಮಲ ಚಿಕಿತ್ಸೆಯ ಅಗತ್ಯವಿರುತ್ತದೆ. ವಿಟಮಿನ್ ಸಿ, ರೆಟಿನಾಯ್ಡ್‌ಗಳು ಮತ್ತು ಹೈಲುರಾನಿಕ್ ಆಮ್ಲಗಳು ಸಮೃದ್ಧವಾಗಿರುವ ಕ್ರೀಮ್‌ಗಳು ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಹೀಗಾಗಿ ನೀವು ಕ್ರೀಮ್​ಗಳನ್ನು ಕೊಳ್ಳುವಾಗ  ಎಚ್ಚರಿಕೆಯಿಂದಿರಿ.

ಸೌತೆಕಾಯಿ:
ಯಥೇಚ್ಛವಾದ ನೀರಿನ ಅಂಶವಿರುವ ಸೌತೆಕಾಯಿ ನಿಮ್ಮ ಡಾರ್ಕ್​ ಸರ್ಕಲ್​ಗಳನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಕಣ್ಣಿನ ಮೇಲೆ ಸೌತೆಕಾಯಿಯ ಸ್ಲೈಸ್ಗಳನ್ನು ಮಾಡಿ ಇಟ್ಟುಕೊಳ್ಳಿ. ವಾರದಲ್ಲಿ 3 ಬಾರಿಯಾದರೂ ಹೀಗೆ ಮಾಡಿ, ಕ್ರಮೇಣ ನಿಮ್ಮ ಡಾರ್ಕ್​ ಸರ್ಕಲ್ಸ್​ ಕಡಿಮೆಯಾಗುತ್ತದೆ.

ಟೀ ಬ್ಯಾಗ್​:
ಟೀ ಬ್ಯಾಗ್​ಅನ್ನು ರಾತ್ರಿ ನೆನೆಹಾಕಿ ಬೆಳಗ್ಗೆ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದು ನಿಮ್ಮ ಕಣ್ಣಿನ ಕೆಳಗೆ ಕಪ್ಪು ಕಲೆಯಾಗುವುದನ್ನು ತಡೆಯುತ್ತದೆ.

ಐಸ್​ ಕ್ಯೂಬ್​ ಬಳಸಿ:
ಐಸ್​ ಕ್ಯೂಬ್​ ಅನ್ನು ಬಟ್ಟೆಯಲ್ಲಿ ಹಾಕಿಕೊಂಡು  ಕಣ್ಣಿನ ಮೇಲೆ ಇರಿಸಿಕೊಳ್ಳಿ. ಇದರಿಂದ ಒತ್ತಡದಿಂದ ಬಳಲಿದ ಕಣ್ಣಿಗೆ  ಹಿತವಾಗುತ್ತದೆ.  ಅಥವಾ ಒದ್ದೆ ಬಟ್ಟೆಯನ್ನು ಕೂಡ ಕಣ್ಣಿನ ಮೇಲೆ ಹಾಕಿಕೊಳ್ಳಿ. 20 ನಿಮಿಚಗಳ ಕಾಲ ಪ್ರತಿದಿನ ಹೀಗೆ ಮಾಡಿದರೆ ಡಾರ್ಕ್​ ಸರ್ಕಲ್​ಗಳು ಕಡಿಮೆಯಾಗುತ್ತವೆ.

ಆಹಾರ:
ಕ್ಯಾರೆಟ್​, ಬಿಟ್ರೂಟ್​ಗಳಂತಹ ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಮೂಡಿದ ಕಪ್ಪು ವರ್ತುಲಗಳು ನಿವಾರಣೆಯಾಗುತ್ತದೆ. ವಿಟಮಿನ್​ ಮತ್ತು ಮಿನರಲ್ಸ್​​ಗಳಿಂದ ಕೂಡಿದ ತರಕಾರಿಗಳು ದೇಹವನ್ನೂ ಕೂಡ ಆರೋಗ್ಯಯುತವಾಗಿಡುತ್ತದೆ.

 ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯಲ್ಲಿರುವ ಪೋಷಕಾಂಶಗಳು  ಕಣ್ಣಿನ ಕೆಳಗಿರುವ ಚರ್ಮವನ್ನು ಕಾಪಾಡುತ್ತದೆ. ಪ್ರತಿದಿನ ಮಲಗುವ ಮೊದಲು ಕೊಬ್ಬರಿ ಎಣ್ಣೆಯಿಂದ ಮಸಾಜ್​ ಮಾಡಿಕೊಳ್ಳಿ. ಇದರಿಂದ ಚರ್ಮ ಹೊಳಿಪಿನಿಂದ ಕೂಡಿಕೊಂಡು ಡಾರ್ಕ್​ ಸರ್ಕಲ್​ಗಳು ಕಡಿಮೆಯಾಗುತ್ತವೆ.

(ಇಲ್ಲಿರುವ ಮಾಹಿತಿಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ )

ಇದನ್ನೂ ಓದಿ:

ಇವೇ ನೋಡಿ ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ಸ್ಥಳಗಳು; ನಿಮ್ಮ ಟ್ರಿಪ್​ ಪ್ಲಾನ್​ಗೆ ಮರೆಯದೇ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ