AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಕೆಲಸವನ್ನು ಬದಿಗಿಟ್ಟು ನಿಮ್ಮ ಸಂಗಾತಿ ಜತೆ ಹೀಗೆ ಸಮಯ ಕಳೆಯಿರಿ

ನೀವು ನಿಮ್ಮ ಸಂಗಾತಿಯೊಂದಿಗೆ ಆಗಾಗ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಆಗ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ.

Relationship: ಕೆಲಸವನ್ನು ಬದಿಗಿಟ್ಟು ನಿಮ್ಮ ಸಂಗಾತಿ ಜತೆ ಹೀಗೆ ಸಮಯ ಕಳೆಯಿರಿ
Relationship
TV9 Web
| Updated By: ನಯನಾ ರಾಜೀವ್|

Updated on: Aug 14, 2022 | 11:12 AM

Share

ನೀವು ನಿಮ್ಮ ಸಂಗಾತಿಯೊಂದಿಗೆ ಆಗಾಗ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಆಗ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಏಕೆಂದರೆ ಸದಾ ಕಚೇರಿಯ ಕೆಲಸವನ್ನೇ ತಲೆಯಲ್ಲಿಟ್ಟುಕೊಂಡರೆ ನಿಮ್ಮವರನ್ನು ಕ್ರಮೇಣವಾಗಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಿಮ್ಮವರಿಗಾಗಿ ನೀವು ಕೆಲ ಸಮಯವನ್ನು ಮೀಸಲಿಡಲೇಬೇಕು.

ಹಾಗಾದರೆ ನಿಮ್ಮ ಸಂಗಾತಿ ಜತೆಗೆ ನೀವು ಹೇಗೆ ಸಮಯ ಕಳೆಬಹುದು, ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ದಿನಸಿ ಸಾಮಾನುಗಳನ್ನು ಖರೀದಿಸಲು ಒಟ್ಟಿಗೆ ತೆರಳಿ, ಕನಿಷ್ಠ ಒಂದು ಹೊತ್ತಾದರೂ ಒಟ್ಟಿಗೆ ಕುಳಿತು ಊಟ ಮಾಡಿ, ನಿತ್ಯ ಒಂದರ್ಧ ಗಂಟೆಯಾದರೂ ಜತೆಗೆ ಕುಳಿತು ಮಾತನಾಡಿ. ಅಡುಗೆ ಮನೆಯಲ್ಲಿ ನಿಮ್ಮ ಸಂಗಾತಿಗೆ ಸ್ವಲ್ಪ ಸಹಾಯ ಮಾಡಿ, ಅವರನ್ನು ಲಾಂಗ್ ಡ್ರೈವ್​ಗೆ ಕರೆದುಕೊಂಡು ಹೋಗಿ.

ಮೊಬೈಲ್ ದೂರವಿಟ್ಟು ಸಂಗಾತಿಯೊಂದಿಗೆ ಮಾತನಾಡಿ ಸದಾ ಮೊಬೈಲ್​ನಲ್ಲಿಯೇ ಮುಳುಗಿಕೊಂಡಿರಬೇಡಿ, ಮೊಬೈಲ್ ಅನ್ನು ಬದಿಗಿಟ್ಟು ಸಂಗಾತಿ ಜತೆಗೆ ಕೆಲ ಸಮಯ ಮಾತನಾಡುವುದರಿಂದ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ.

ಯಾವುದಾದರೂ ಗೇಮ್​ಗಳನ್ನು ಆಡಿ ಕೇರಮ್, ವೀಡಿಯೋ ಗೇಮ್​ಗಳು, ಶೆಟಲ್, ಪಗಡೆ ಹೀಗೆ ನಿಮಗೆ ಯಾವುದಿಷ್ಟವೋ ಆ ಆಟಕ್ಕಾಗಿ ನಿತ್ಯ ಕೆಲ ಸಮಯವನ್ನು ಮೀಸಲಿಡಿ.

ಒಟ್ಟಿಗೆ ಯೋಗ ಮಾಡಿ ಒಟ್ಟಿಗೆ ಯೋಗ ಮಾಡುವುದು, ಬೈಕಿಂಗ್ ಮಾಡುವುದು, ನೃತ್ಯ ಅಥವಾ ಪೇಂಟಿಂಗ್ ಪಾಠಗಳಿಗೆ ದಾಖಲಾಗುವುದು ಇತ್ಯಾದಿ ಯಾವುದಾದರೂ ಆಗಿರಬಹುದು. ಒಟ್ಟಿಗೆ ಸಮಯ ಕಳೆಯುವುದು ನಿಮ್ಮ ಉದ್ದೇಶವಾಗಿರಲಿ.

ನಿಮ್ಮ ಭವಿಷ್ಯದ ಬಗ್ಗೆ ಕುಳಿತು ಮಾತನಾಡಿ ಹಣಕಾಸಿನ ಯೋಜನೆಯಾಗಿರಬಹುದು ಅಥವಾ ಕುಟುಂಬದ ಕುರಿತ ಆಲೋಚನೆಯಾಗಿರಬಹುದು, ಒಟ್ಟಿಗೆ ನಿರ್ಧಾರವನ್ನು ತೆಗೆದುಕೊಳ್ಳಿ.

ಆಕರ್ಷಕ ಉಡುಗೊರೆಗಳು ಸಣ್ಣ ಸಣ್ಣ ಉಡುಗೊರೆಗಳು ಕೂಡ ಸಂತೋಷವನ್ನು ಇಮ್ಮಡಿಗೊಳಿಸುತ್ತವೆ. ಹೀಗಾಗಿ ಆಗಾಗ ನಿಮ್ಮ ಸಂಗಾತಿಗೆ ಉಡುಗೊರೆಯನ್ನು ನೀಡುತ್ತಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ