kitchen Tips in Kannada : ಈರುಳ್ಳಿ ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: May 21, 2024 | 12:08 PM

ಭಾರತೀಯ ಅಡುಗೆಯಲ್ಲಿ ಈರುಳ್ಳಿಯಿಲ್ಲದೇ ಯಾವುದೇ ಅಡುಗೆಯು ರುಚಿಸುವುದಿಲ್ಲ. ಅಡುಗೆಯ ರುಚಿ ಹಾಗೂ ಸ್ವಾದವನ್ನು ಹೆಚ್ಚಿಸುವ ಈರುಳ್ಳಿಯನ್ನು ಹಸಿಯಾಗಿಯೇ ತಿನ್ನುತ್ತಾರೆ. ಆದರೆ ಈ ದೀರ್ಘಕಾಲದವರೆಗೂ ಈ ತರಕಾರಿಯನ್ನು ತಾಜಾವಾಗಿಡುವುದು ಕಷ್ಟ. ಅದಲ್ಲದೇ, ಬೇಸಿಗೆಯಲ್ಲಿ ಈರುಳ್ಳಿ ಬೇಗನೇ ಕೆಡುವುದಲ್ಲದೇ ಮೊಳಕೆಯೊಡೆಯುತ್ತದೆ. ಈ ಸುಲಭ ವಿಧಾನಗಳಿಂದ ಕೆಡದಂತೆ ದೀರ್ಘಕಾಲದವರೆಗೆ ಸಂರಕ್ಷಿಸಿಟ್ಟುಕೊಳ್ಳಬಹುದು.

kitchen Tips in Kannada : ಈರುಳ್ಳಿ ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
Follow us on

ಯಾವುದೇ ಅಡುಗೆಯಿರಲಿ ಈರುಳ್ಳಿಯಿಲ್ಲದೇ ರುಚಿ ಬರುವುದೇ ಇಲ್ಲ. ಮಸಾಲೆಯುಕ್ತ ಆಹಾರಗಳಿಗೆ ಈರುಳ್ಳಿ ಇರಲೇಬೇಕು. ಅಡುಗೆಗೆ ಹೆಚ್ಚು ಉಪಯೋಗವಾಗುವ ಕಾರಣ ಈರುಳ್ಳಿ ಹೆಚ್ಚು ತರುತ್ತೇವೆ. ಆದರೆ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ತಂದ ಈರುಳ್ಳಿ ಬೇಗನೇ ಕೆಡುತ್ತದೆ. ಹೆಚ್ಚಿನವರು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಈ ಕೆಲವು ತಪ್ಪುಗಳನ್ನು ಮಾಡದೇ ಕೆಲ ಸಲಹೆಗಳನ್ನು ಅನುಸರಿಸಿದರೆ ಒಳ್ಳೆಯದು.

  • ಈರುಳ್ಳಿಯನ್ನು ಶೇಖರಿಸಿಡುವಾಗ ಶುಷ್ಕ ಮತ್ತು ತಂಪಾದ ವಾತಾವರಣವಿರಲಿ.
  • ಗಾಳಿಯಾಡುವ ಪ್ರದೇಶದಲ್ಲಿಟ್ಟರೆ ಈರುಳ್ಳಿಯು ಬೇಗನೆ ಕೆಡುವುದಿಲ್ಲ.
  • ಒಣ ಬಟ್ಟೆಯಿಂದ ಈರುಳ್ಳಿಯನ್ನು ಒರೆಸಿ, ತೆರೆದ ಬ್ಲಾಸ್ಕೆಟ್ ನಲ್ಲಿ ಗಾಳಿಯಾಡುವಂತೆ ಇಡುವುದು ಒಳ್ಳೆಯದು.
  • ಈರುಳ್ಳಿ ಗ್ಯಾಸ್ ಬಿಡುಗಡೆ ಮಾಡುತ್ತದೆ. ಹೀಗಾಗಿ ಈರುಳ್ಳಿಯ ಜೊತೆಗೆ ಬೇರೆ ತರಕಾರಿ ಹಾಗೂ ಹಣ್ಣುಗಳನ್ನು ಇಡಬೇಡಿ.
  • ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಪ್ಲಾಸ್ಟಿಕ್‌ ಕವರ್‌ನೊಳಗೆ ಹಾಕಿಡಬಾರದು. ಹೀಗೆ ಮಾಡಿದರೆ ಬೇಗನೇ ಕೊಳೆತು ಹೋಗುತ್ತದೆ.
  • ಈರುಳ್ಳಿಯನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಶೇಖರಿಸಿಡಬೇಡಿ. ಹೀಗಿಟ್ಟರೆ ಬೇಗನೇ ಹಾಳಾಗುತ್ತದೆ.
  • ಕತ್ತರಿಸಿದ ಹಾಗೂ ಸಿಪ್ಪೆ ಸುಲಿದ ಈರುಳ್ಳಿಯನ್ನು ಆದಷ್ಟು ಬೇಗ ಅಡುಗೆ ಬಳಸುವುದು ಒಳ್ಳೆಯದು.
  • ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ತರುವಾಗ ದೊಡ್ಡ ಈರುಳ್ಳಿಯನ್ನೇ ಆಯ್ಕೆ ಮಾಡಿಕೊಳ್ಳಿ. ಒಣಸಿಪ್ಪೆಯ ಪದರುಗಳೂ ಹಾಗೂ ದೊಡ್ಡ ಈರುಳ್ಳಿಯು ಹೆಚ್ಚು ಕಾಲ ಉಳಿಯುತ್ತದೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ