AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಾದ ಜನಪ್ರಿಯ ಸೌಂದರ್ಯ ಸ್ಪರ್ಧೆಯ ವಿಜೇತರಿಬ್ಬರೂ ರಾಜೀನಾಮೆ; ನಿಜಕ್ಕೂ ನಡೆದಿದ್ದೇನು?

ಈ ತಿಂಗಳ ಆರಂಭದಲ್ಲಿ ಅಮೆರಿಕಾದಲ್ಲಿ ಐತಿಹಾಸಿಕ ಘಟನೆಯೊಂದು ನಡೆದಿದೆ. ಮಿಸ್ USA ಮತ್ತು ಮಿಸ್ ಟೀನ್ USA ಕಿರೀಟ ತೊಟ್ಟಿದ್ದ ಇಬ್ಬರೂ ರಾಜೀನಾಮೆ ನೀಡಿ, ತಮ್ಮ ಕಿರೀಟವನ್ನು ಹಿಂದಿರುಗಿಸಿದ್ದಾರೆ. ಮಿಸ್ ಟೀನ್ ಯುಎಸ್ಎ ಉಮಾಸೋಫಿಯಾ ಶ್ರೀವಾಸ್ತವ್ ಅವರ ಬದಲಿಗೆ ಇನ್ನೂ ಯಾರನ್ನೂ ವಿಜೇತರೆಂದು ಘೋಷಿಸಿಲ್ಲ. ಇದರಿಂದಾಗಿ ಮಿಸ್ ಯುಎಸ್ಎ ಸ್ಪರ್ಧೆಯ ಬಗ್ಗೆ ಹಲವು ಚರ್ಚೆಗಳು ಹುಟ್ಟಿಕೊಂಡಿವೆ.

ಅಮೆರಿಕಾದ ಜನಪ್ರಿಯ ಸೌಂದರ್ಯ ಸ್ಪರ್ಧೆಯ ವಿಜೇತರಿಬ್ಬರೂ ರಾಜೀನಾಮೆ; ನಿಜಕ್ಕೂ ನಡೆದಿದ್ದೇನು?
ಉಮಾಸೋಫಿಯಾ ಶ್ರೀವಾಸ್ತವ
ಸುಷ್ಮಾ ಚಕ್ರೆ
|

Updated on: May 21, 2024 | 9:57 PM

Share

ಇತ್ತೀಚೆಗೆ ಮಿಸ್ USA 2023 ಪ್ರಶಸ್ತಿಯನ್ನು ಪಡೆದ ಸ್ಪರ್ಧಿ ನೋಲಿಯಾ ವೊಯ್ಗ್ಟ್ (Noelia Voigt) ರಾಜೀನಾಮೆ ನೀಡಿದ ಬೆನ್ನಲ್ಲೇ ಮಿಸ್ ಟೀನ್ ಯುಎಸ್​ಎ ವಿಜೇತೆಯಾಗಿದ್ದ ಉಮಾಸೋಫಿಯಾ ಶ್ರೀವಾಸ್ತವ (UmaSofia Srivastava) ಕೂಡ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಂನಲ್ಲಿ ದೊಡ್ಡ ಪೋಸ್ಟ್​ ಒಂದನ್ನು ಹಾಕಿದ್ದಾರೆ. ನೋಲಿಯಾ ಮೇ 9ರಂದು ಬರೆದ ಪತ್ರದ ಪ್ರಕಾರ, ಈ ಸ್ಪರ್ಧೆಯ ಸಿಇಒ ಲೈಂಗಿಕ ಕಿರುಕುಳದ ಘಟನೆಯನ್ನು ತಪ್ಪಾಗಿ ನಿರ್ವಹಿಸಿದ್ದಾರೆ. ಸ್ಪರ್ಧೆಯ ಸ್ಥಳದಲ್ಲಿ ಉತ್ತಮ ಕೆಲಸದ ವಾತಾವರಣವನ್ನು ಸೃಷ್ಟಿಸಿಲ್ಲ ಎಂದು ವೊಯ್ಗ್ಟ್ ಆರೋಪಿಸಿದ್ದಾರೆ.

“ಮಿಸ್ USA ಸಂಸ್ಥೆಯೊಳಗೆ ವಿಷಕಾರಿ ಕೆಲಸದ ವಾತಾವರಣವಿದೆ, ಅದು ಕಳಪೆ ನಿರ್ವಹಣೆಯಾಗಿದೆ. ಅಲ್ಲಿ ಕಿರುಕುಳ ನೀಡಲಾಗುತ್ತದೆ” ಎಂದು 24 ವರ್ಷದ ನೋಲಿಯಾ ಪತ್ರದಲ್ಲಿ ಬರೆದಿದ್ದಾರೆ. “ನಾನು ಮಿಸ್ USA 2023 ಪ್ರಶಸ್ತಿಯನ್ನು ಗೆದ್ದ ನಂತರ ಈ ಕಿರುಕುಳ ಪ್ರಾರಂಭವಾಯಿತು” ಎಂದು ಕೂಡ ಪತ್ರದಲ್ಲಿ ಅವರು ನಮೂದಿಸಿದ್ದಾರೆ. ಈ ಸುದ್ದಿಯು ಅನೇಕರಿಗೆ ಆಶ್ಚರ್ಯಕರವಾಗಿರಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯಾವಾಗಲೂ ಆದ್ಯತೆ ನೀಡಲು ಮರೆಯದಿರಿ ಮತ್ತು ನಿಮ್ಮ ಯೋಗಕ್ಷೇಮವನ್ನು ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಜೀವನದಲ್ಲಿ, ನಿಮಗೆ ಮತ್ತು ನಿಮ್ಮ ಮಾನಸಿಕ ಆರೋಗ್ಯಕ್ಕೆ ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯತೆಯನ್ನು ನಾನು ಬಹಳ ಗೌರವಿಸುತ್ತೇನೆ. ಮಿಸ್ USA ಆಗಿ ನನ್ನ ಪ್ರಯಾಣವು ನಂಬಲಾಗದಷ್ಟು ಅರ್ಥಪೂರ್ಣವಾಗಿದೆ. ನಾನು ಬಹಳ ಹೆಮ್ಮೆಯಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ದುಃಖಕರವೆಂದರೆ, ಮಿಸ್ USA 2023 ಪ್ರಶಸ್ತಿಗೆ ರಾಜೀನಾಮೆ ನೀಡಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ನೋಲಿಯಾ ತಿಳಿಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: Crime News: ಮಗುವಿನ ಜೊತೆ ಮಲಗಿದ್ದ ಮಗಳ ಕೊಲೆ; ತೆಲಂಗಾಣ ದಂಪತಿ ಬಂಧನ

ಇದಾದ ಬಳಿಕ ಮಿಸ್ ಟೀನ್ ಯುಎಸ್​ಎ ವಿಜೇತೆ ಉಮಾಸೋಫಿಯಾ ಶ್ರೀವಾಸ್ತವ ಕೂಡ ರಾಜೀನಾಮೆ ನೀಡುವ ಮೂಲಕ ಈ ಸ್ಪರ್ಧೆಯ ಬಗ್ಗೆ ತೀವ್ರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಲವು ತಿಂಗಳ ಕಾಲ ಗೊಂದಲದಲ್ಲಿದ್ದ ನಾನು ಕೊನೆಗೂ ಗಟ್ಟಿ ನಿರ್ಧಾರ ಮಾಡಿ ಮಿಸ್ ಟೀನ್ USA 2023 ಪ್ರಶಸ್ತಿಗೆ ರಾಜೀನಾಮೆ ನೀಡುವ ಆಯ್ಕೆಯನ್ನು ಮಾಡಿದ್ದೇನೆ ”ಎಂದು ಅವರು Instagramನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ವೈಯಕ್ತಿಕ ಮೌಲ್ಯಗಳು ಇನ್ನು ಮುಂದೆ ಸಂಸ್ಥೆಯ ನಿರ್ದೇಶನದೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವುದಿಲ್ಲ ಎಂದು ನಾನು ಕಂಡುಕೊಂಡಿದ್ದರಿಂದ ನಾನು ರಾಜೀನಾಮೆ ನೀಡಲು ನಿರ್ಧರಿಸಿದೆ.” ಎಂದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ