Health Insurance: ತೂಕ ಕಡಿಮೆ ಮಾಡಿಕೊಂಡ್ರೆ ಸಿಗುತ್ತೆ ಅಗ್ಗದ ಆರೋಗ್ಯ ವಿಮೆ!

|

Updated on: Jun 29, 2023 | 7:02 PM

ತೂಕವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ನೀವು ಸ್ವಲ್ಪ ವರ್ಕೌಟ್ ಮಾಡುವ, ಬೆವರುವ ಮೂಲಕ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಪಡೆಯಬಹುದು!

Health Insurance: ತೂಕ ಕಡಿಮೆ ಮಾಡಿಕೊಂಡ್ರೆ ಸಿಗುತ್ತೆ ಅಗ್ಗದ ಆರೋಗ್ಯ ವಿಮೆ!
ಸಾಂದರ್ಭಿಕ ಚಿತ್ರ
Follow us on

ಕೋವಿಡ್ ಸಾಂಕ್ರಾಮಿಕದ ನಂತರ ಆರೋಗ್ಯ ವಿಮೆ (Health Insurance) ಮಾಡಿಸಿಕೊಳ್ಳುವ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಹೆಚ್ಚಾಗಿದೆ. ವೈಯಕ್ತಿಕ ಹಣಕಾಸು ತಜ್ಞರು ಆರೋಗ್ಯ ವಿಮೆಯನ್ನು ಉತ್ತಮ ಹೂಡಿಕೆ ಎಂದು ವಿವರಿಸುತ್ತಾರೆ. ಇದು ಅನಾರೋಗ್ಯದ ಕಷ್ಟದ ಸಮಯದಲ್ಲಿ ಆರ್ಥಿಕವಾಗಿ ನಿಮಗೆ ಸಹಾಯ ಮಾಡುತ್ತದೆ ಮತ್ತು ಎರಡನೆಯದಾಗಿ, ಆದಾಯ ತೆರಿಗೆ ವಿನಾಯಿತಿ ಪಡೆಯುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ಆದರೆ, ತೂಕವನ್ನು ಕಡಿಮೆ ಮಾಡುವ (Weight loss) ಮೂಲಕ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?

ಹೌದು, ನೀವು ಸ್ವಲ್ಪ ವರ್ಕೌಟ್ ಮಾಡುವ, ಬೆವರುವ ಮೂಲಕ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಪಡೆಯಬಹುದು! ವಿಮೆಯನ್ನು ನಿರ್ಧರಿಸುವ ಮೊದಲು ಕಂಪನಿಗಳು ಹಲವಾರು ಮಾನದಂಡಗಳನ್ನು ಪರಿಶೀಲಿಸುವುದರಿಂದ, ಕಡಿಮೆ ತೂಕವು ನಿಮಗೆ ಬಹಳಷ್ಟು ಸಹಾಯ ಮಾಡಲಿದೆ. ನೀವು ಹೆಚ್ಚು ಫಿಟ್ ಆಗಿದ್ದರೆ ಆರೋಗ್ಯ ವಿಮಾ ಪ್ರೀಮಿಯಂ ಕಡಿಮೆ ಇರುತ್ತದೆ.

ಸಾಮಾನ್ಯವಾಗಿ ವಿಮಾ ಕಂಪನಿಗಳು ಆರೋಗ್ಯ ವಿಮೆಯನ್ನು ಕೊಡುವುದಕ್ಕೆ ಮುನ್ನ ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ), ಧೂಮಪಾನದ ಅಭ್ಯಾಸ ಮತ್ತು ಮಾದಕ ವ್ಯಸನ ಇತ್ಯಾದಿಗಳನ್ನು ಪರಿಶೀಲಿಸುತ್ತಾರೆ. ಇದರ ಆಧಾರದ ಮೇಲೆ ವಿಮಾ ಪ್ರೀಮಿಯಂ ಅನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ, ಫಿಟ್ ಆಗಿದ್ದರೆ, ಕಡಿಮೆ ಪ್ರೀಮಿಯಂನಲ್ಲಿ ಆರೋಗ್ಯ ವಿಮಾ ಕಂಪನಿಯಿಂದ ವಿಮೆಯನ್ನು ಪಡೆಯಬಹುದು.

ಸ್ಥೂಲಕಾಯ ಪರಿಶೀಲಿಸುವುದು ಹೇಗೆ?

ಸ್ಥೂಲಕಾಯವನ್ನು ಹೇಗೆ ಪರಿಶೀಲಿಸಬಹುದು? ಪರಿಶೀಲಿಸುವುದು ಏಕೆ? ಏಕೆಂದರೆ ಇದರಿಂದ ಎಷ್ಟು ತೂಕವನ್ನು ಕಳೆದುಕೊಳ್ಳಬೇಕು ಎಂಬುನ್ನು ತಿಳಿಯಬಹುದು. ಇದಕ್ಕೆ ಉತ್ತಮ ಮಾನದಂಡವೆಂದರೆ ಬಿಎಂಐ ಅಥವಾ ಬಾಡಿ ಮಾಸ್ ಇಂಡೆಕ್ಸ್ ಅನ್ನು ಪರಿಶೀಲಿಸುವುದು. ನಿಮ್ಮ ದೇಹದ ಉದ್ದ ಮತ್ತು ತೂಕದ ಅನುಪಾತವನ್ನು ಬಿಎಂಐನಲ್ಲಿ ಲೆಕ್ಕಹಾಕಲಾಗುತ್ತದೆ. ನಿಮ್ಮ ಬಿಎಂಐ ಫಲಿತಾಂಶವು 18.5 ಮತ್ತು 24.9 ರ ನಡುವೆ ಇದ್ದರೆ, ನಿಮ್ಮ ತೂಕವು ಸಾಮಾನ್ಯವಾಗಿದೆ ಎಂದು ಪರಿಗಣಿಸಲಾಗುತ್ತದೆ.

ಬಿಎಂಐ ಫಲಿತಾಂಶವು 18.5 ಕ್ಕಿಂತ ಕಡಿಮೆ ಇದ್ದರೆ ನಿಮ್ಮ ತೂಕವು ನಿಯಂತ್ರಣದಲ್ಲಿದೆ ಎಂದು ಅರ್ಥ. ಆದರೆ 25 ಮತ್ತು 29.9 ರ ನಡುವಿನ ಬಿಎಂಐ ಇದ್ದರೆ ಎಂದರೆ ನಿಮ್ಮ ತೂಕ ಸಾಮಾನ್ಯಕ್ಕಿಂತ ಹೆಚ್ಚಾಗಿದೆ ಎಂದರ್ಥ. ಬಿಎಂಐ 30 ಕ್ಕಿಂತ ಹೆಚ್ಚಿದ್ದರೆ ನೀವು ಸ್ಥೂಲಕಾಯತೆ ಹೊಂದಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಇಂಥ ಸ್ಥಿತಿಯಲ್ಲಿ ನೀವು ವ್ಯಾಯಾಮ ಮಾಡುವ ಮೂಲಕ ಬೆವರು ಹರಿಸಬೇಕಾಗುತ್ತದೆ. ಬಿಎಂಐ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಬಿಎಂಐ ಸ್ಕೋರ್ ಅನ್ನು ನೀವು ಆನ್‌ಲೈನ್‌ನಲ್ಲಿ ತಿಳಿಯಬಹುದಾಗಿದೆ.

ಸ್ಥೂಲಕಾಯದವರಿಗೆ ಹೆಚ್ಚು ಪ್ರೀಮಿಯಂ ವಿಧಿಸುವುದು ಯಾಕೆ?

ಸ್ಥೂಲಕಾಯದ ಜನರು ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆರೋಗ್ಯ ವಿಮಾ ಕಂಪನಿಗಳು ಅಧಿಕ ತೂಕ ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚಿನ ಪ್ರೀಮಿಯಂ ವಿಧಿಸುತ್ತವೆ. ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಹೃದಯಾಘಾತ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ಕಂಪನಿಗಳು ಅವರಿಗೆ ಹೆಚ್ಚಿನ ವಿಮೆಯನ್ನು ವಿಧಿಸುತ್ತವೆ.

ಇದನ್ನೂ ಓದಿ: Monsoon 2023: ಮಳೆಗಾಲದಲ್ಲಿ ಕೂದಲು ಉದುರುವಿಕೆಯನ್ನು ತಡೆಯುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ಇದನ್ನು ಗಮನದಲ್ಲಿಟ್ಟುಕೊಂಡು ವಿಮಾ ಕಂಪನಿಗಳು ಈಗ ಗ್ರಾಹಕರಿಗೆ ಫಿಟ್‌ನೆಸ್ ಬಗ್ಗೆ ಅರಿವು ಮೂಡಿಸಿ ಅದಕ್ಕಾಗಿ ಅಭಿಯಾನಗಳನ್ನು ನಡೆಸುತ್ತಿವೆ. ಫಿಟ್ನೆಸ್ ಬಗ್ಗೆ ಗಮನಹರಿಸುವ ಗ್ರಾಹಕರಿಗೆ ಕಂಪನಿಗಳು ರಿಯಾಯಿತಿಗಳನ್ನು ನೀಡುತ್ತಿವೆ.

ಹೆಚ್ಚು ಫಿಟ್ ಇದ್ದರೆ ಸಿಗುತ್ತದೆ ಪ್ರೀಮಿಯಂ ಮೇಲೆ ಹೆಚ್ಚು ರಿಯಾಯಿತಿ!

ವಿಮಾ ಕಂಪನಿಗಳು ವ್ಯಾಯಾಮ ಮಾಡುವ ಗ್ರಾಹಕರಿಗೆ ಮುಂದಿನ ವರ್ಷದ ಪ್ರೀಮಿಯಂನಲ್ಲಿ ಶೇಕಡಾ 10 ರಿಂದ 30 ರಷ್ಟು ರಿಯಾಯಿತಿ ನೀಡಲು ಚಿಂತನೆ ನಡೆಸುತ್ತಿವೆ ಎಂದು ‘ಪಾಲಿಸಿ ಬಜಾರ್’ ಉಲ್ಲೇಖಿಸಿದೆ. ಕೆಲವು ಕಂಪನಿಗಳು ಶೇ 50 ರ ವರೆಗೆ ನೇರ ರಿಯಾಯಿತಿಯನ್ನು ನೀಡಲು ಚಿಂತನೆ ನಡೆಸುತ್ತಿವೆ. ಆರೋಗ್ಯ ವಿಮೆ ತೆಗೆದುಕೊಳ್ಳುವವರು ಆದಾಯ ತೆರಿಗೆಯ ಸೆಕ್ಷನ್ 80 (ಡಿ) ಅಡಿಯಲ್ಲಿ, 25,000 ರೂ. ನಿಂದ 1 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.