World social media day: ವಿಶ್ವ ಸಾಮಾಜಿಕ ಮಾಧ್ಯಮಗಳ ದಿನದ ಮಹತ್ವ, ಸಮಾಜದ ಮುಂದೆ ಇರುವ ಸವಾಲುಗಳು

ಪ್ರತಿ ವರ್ಷ ಜೂನ್ 30ರಂದು ವಿಶ್ವ ಸಾಮಾಜಿಕ ಮಾಧ್ಯಮ ದಿನವಾಗಿ ಆಚರಿಸಲಾಗುತ್ತದೆ. ಒಬ್ಬರೊಬ್ಬರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು, ಸಮೂಹ ಸಂವಹನ ನಡೆಸಲು ಮತ್ತು ಸಾಮಾಜಿಕ ಬದಲಾವಣೆಗೆ ಪ್ರಮುಖ ಸಾಧನವು ಹೌದು.

World social media day: ವಿಶ್ವ ಸಾಮಾಜಿಕ ಮಾಧ್ಯಮಗಳ ದಿನದ ಮಹತ್ವ, ಸಮಾಜದ ಮುಂದೆ ಇರುವ ಸವಾಲುಗಳು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 30, 2023 | 10:23 AM

ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಒಂದು ಭಾಗವೇ ಆಗಿದೆ, ಅದನ್ನು ಬಿಟ್ಟು ಒಂದು ಕ್ಷಣವು ಇರಲು ಸಾಧ್ಯವಿಲ್ಲದಷ್ಟು ಅದನ್ನು ಬಳಕೆ ಮಾಡಿವವರು ನಮ್ಮ ಜಗತ್ತಿನಲ್ಲಿ ಇದ್ದರೆ. ಸಾಮಾಜಿಕ ಜಾಲತಾಣಗಳಿಗೂ ಒಂದು ದಿನ ಎಂಬುದು ಇದೆ, ಅದನ್ನು ವಿಶ್ವ ಮಟ್ಟದಲ್ಲಿ ಆಚರಣೆ ಮಾಡುತ್ತಾರೆ, ಹೌದು ಇಂದು (ಜೂನ್​​30)ವಿಶ್ವ ಸಾಮಾಜಿಕ ಮಾಧ್ಯಗಳ ದಿನ (World social media day) ಎಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವವರ ನಡುವಿನ ಸಂಪರ್ಕವನ್ನು ನೆನಪಿಸಲು ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವನ್ನು ತಿಳಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಪ್ರತಿ ವರ್ಷ ವಿಶ್ವ ಸಾಮಾಜಿಕ ಮಾಧ್ಯಮ ದಿನವಾಗಿ ಆಚರಿಸಲಾಗುತ್ತದೆ. ಒಬ್ಬರೊಬ್ಬರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು, ಸಮೂಹ ಸಂವಹನ ನಡೆಸಲು ಮತ್ತು ಸಾಮಾಜಿಕ ಬದಲಾವಣೆಗೆ ಪ್ರಮುಖ ಸಾಧನವು ಹೌದು. ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರಪಂಚದಾದ್ಯಂತ ನಾವು ಸಂವಹನ ನಡೆಸುವ ಇದು ಸಂಪರ್ಕ ಸೇತುವೆ ಆಗಿದೆ.

ಸಾಮಾಜಿಕ ಮಾಧ್ಯಮ ದಿನದ ಮಹತ್ವ:

ಮೊದಲ ಸಾಮಾಜಿಕ ಮಾಧ್ಯಮ ದಿನವನ್ನು 2010 ರಲ್ಲಿ Mashable ಸುದ್ದಿ ವೆಬ್‌ಸೈಟ್‌ನಿಂದ ಆಚರಿಸಲಾಯಿತು. ಸಾಮಾಜಿಕ ಮಾಧ್ಯಮವು ನಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಮತ್ತು ಜಾಗತಿಕ ಸಂವಹನದಲ್ಲಿ ಅದರ ಪಾತ್ರದ ಬಗ್ಗೆ Mashable ತಿಳಿಸಿತ್ತು, 2018ರಲ್ಲಿ ‘ಸಾಮಾಜಿಕ ಮಾಧ್ಯಮ ದಿನದ ಆಚರಣೆ ಮಾಡಲು ಜನರಿಗೆ ತಿಳಿಸಿತ್ತು.

1997ರಲ್ಲಿ ಸಿಕ್ಸ್‌ಡಿಗ್ರೀಸ್‌ನ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪರಿಚಯಿಸಿತ್ತು. ವೆಬ್‌ಸೈಟ್ ಇತರ ವೈಶಿಷ್ಟ್ಯಗಳ ನಡುವೆ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೂ ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿತು ಮತ್ತು ನಂತರ ದಿನಗಳಲ್ಲಿ ಇವುಗಳು ಬೆಳೆದು ನಮ್ಮ ಸಮಾಜದಲ್ಲಿ ಆಗು-ಹೋಗುವ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿತ್ತು, ಇದೀಗ ಈ ಸಾಮಾಜಿಕ ಮಾಧ್ಯಮಗಳು ಬೇರೆ ಬೇರೆ ರೀತಿಯಲ್ಲಿ ಬೆಳೆಯಲು ಸಾಧ್ಯವಾಗಿದೆ.

ಬೆಳೆಯುತ್ತಿರುವ ಸವಾಲುಗಳು

ಒಂದು ಕಡೆ ಸಾಮಾಜಿಕ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿದೆ. ಒಳ್ಳೆಯ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದೆ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುಧಾರಿತ ವಿಚಾರಗಳು, ಹೊಸ ಹೊಸ ಮತ್ತು ಆಸಕ್ತಿದಾಯಕ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಇದರ ಜತೆ ಜತೆಗೆ ಸಾಮಾಜಿಕ ಜಾಲತಾಣಗಳು ಕೆಟ್ಟ ವಿಚಾರಗಳನ್ನು ವೇಗವಾಗಿ ಗ್ರಹಿಸಿಕೊಳ್ಳುತ್ತಿದೆ. ಹೌದು ಸಾಮಾಜಿಕ ಮಾಧ್ಯಮಗಳು ಕಾಳಜಿ ಮತ್ತು ಜನರಿಗೆ ವಿಚಾರಗಳನ್ನು ತಲುಪಿಸುವುದರ ಜತೆಗೆ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳು ಕೂಡ ಇಲ್ಲಿ ವೇಗವಾಗಿ ಹರಡುವ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟಿದೆ. ಇದು ಜನರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮವನ್ನು ಉಂಟು ಮಾಡಬಹುದು.

ಇದನ್ನೂ ಓದಿ: World Wind Day 2023: ವಿಶ್ವ ಗಾಳಿ ದಿನದ ಇತಿಹಾಸ, ಮಹತ್ವ ಬಗ್ಗೆ ಇಲ್ಲಿದೆ ಮಾಹಿತಿ

ವಾಷಿಂಗ್ಟನ್ ಡಿಸಿ ಮೂಲದ ಸಂಸ್ಥೆಯಾದ ‘ಸೇಪಿಯನ್ ಲ್ಯಾಬ್ಸ್’ ನಡೆಸಿದ ಇತ್ತೀಚಿನ ಅಧ್ಯಯನವು ಹದಿಹರೆಯದವರಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಅವರ ಆರೋಗ್ಯದ ಮತ್ತು ಮಾನಸಿಕ ವಿಚಾರಗಳ ಮೇಲೆ ದೊಡ್ಡ ಪರಿಣಾಮವನ್ನು ಹದಗೆಡಿಸುತ್ತದೆ ಎಂದು ಹೇಳಿದೆ.

ಹೆಚ್ಚುವರಿಯಾಗಿ ಸಾಮಾಜಿಕ ಮಾಧ್ಯಮದ ವಿಕಾಸದ ಸ್ವಭಾವವು ಸೈಬರ್ ಅಪರಾಧದ ಹೊಸ ರೂಪಗಳನ್ನು ಸೃಷ್ಟಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶವು 2021ರಲ್ಲಿ ಭಾರತವೊಂದರಲ್ಲೇ 52,974 ಸೈಬರ್ ಅಪರಾಧ ಪ್ರಕರಣಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ 11.8% ಹೆಚ್ಚಾಗಿದೆ ಎಂದು ತೋರಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ