ನಿಮ್ಮ ಮನೆಯಲ್ಲಿ ಗೋಡೆಯಿಂದ ಫ್ರಿಡ್ಜ್ ಎಷ್ಟು ದೂರದಲ್ಲಿ ಇಟ್ಟಿದ್ದೀರಿ? ಒಮ್ಮೆ ಕಣ್ಣಳತೆಯಲ್ಲಿ ನೋಡಿ ಸರಿಪಡಿಸಿ

|

Updated on: Oct 12, 2023 | 6:06 AM

ಫ್ರಿಡ್ಜ್ ಅನ್ನು ಗೋಡೆಯ ಹತ್ತಿರ ಅಥವಾ ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ, ಅದು ಬೇಗನೆ ಬಿಸಿಯಾಗುತ್ತದೆ ಮತ್ತು ಅದರ ಕಾರ್ಯಕ್ಷಮತೆಯಲ್ಲಿ ಹಾನಿಯಾಗುತ್ತದೆ. ಫ್ರಿಜ್ ಅನ್ನು ತಂಪಾಗಿಸುವ ಕಂಪ್ರೆಸರ್​​​ಗೆ ಗಾಳಿಯ ಅಗತ್ಯವಿದೆ. ಇದು ರೆಫ್ರಿಜರೇಟರ್ ಅನ್ನು ತಂಪಾಗಿರಿಸುತ್ತದೆ. ಹಾಗಾಗಿ ಫ್ರಿಡ್ಜ್ ಅನ್ನು ವಾತಾಯನ ಪ್ರದೇಶದಲ್ಲಿ ಇರಿಸದಿದ್ದರೆ ಅದು ತಣ್ಣಗಾಗುವುದಿಲ್ಲ. ಇದರಿಂದ ಫ್ರಿಡ್ಜ್ ನ ತಂಪಾಗುವಿಕೆ ಕಡಿಮೆಯಾಗಿ ಅದರಲ್ಲಿರುವ ಆಹಾರ ಪದಾರ್ಥಗಳು ಬೇಗ ಕೆಡುತ್ತವೆ.

ನಿಮ್ಮ ಮನೆಯಲ್ಲಿ ಗೋಡೆಯಿಂದ ಫ್ರಿಡ್ಜ್ ಎಷ್ಟು ದೂರದಲ್ಲಿ ಇಟ್ಟಿದ್ದೀರಿ? ಒಮ್ಮೆ ಕಣ್ಣಳತೆಯಲ್ಲಿ ನೋಡಿ ಸರಿಪಡಿಸಿ
ಫ್ರಿಡ್ಜ್ ಅನ್ನು ಗೋಡೆಯ ಪಕ್ಕದಲ್ಲಿಯೇ ಇರಿಸಿದರೆ ಏನಾಗುತ್ತದೆ?
Follow us on

ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಹಲವು ಅಂಶಗಳಿವೆ. ಟಿವಿ, ಮಿಕ್ಸರ್, ಮೈಕ್ರೋವೇವ್ ಓವನ್, ಫ್ರಿಜ್ ಎಲ್ಲವೂ ಸರಿಯಾದ ಸ್ಥಳದಲ್ಲಿರಬೇಕು. ವಿದ್ಯುತ್ ವೈರಿಂಗ್ ಪೂರ್ಣವಾಗಿರಬೇಕು. ಅದರಲ್ಲಿಯೂ ರೆಫ್ರಿಜರೇಟರ್ ಅನ್ನು ಸರಿಯಾಗಿ ಇರಿಸಬೇಕು. ರೆಫ್ರಿಜರೇಟರ್ ಮತ್ತು ಗೋಡೆಯ ನಡುವೆ ಸರಿಯಾಗಿ ಅಂತರ ಇರಬೇಕು. ಫ್ರಿಡ್ಜ್‌ ಪಕ್ಕದಲ್ಲಿ ಗ್ಯಾಸ್​ ಸಿಲಿಂಡರ್​ ಇಟ್ಟಿದ್ದರೆ, ಬಿಸಿ ಗೋಡೆಯ ಪಕ್ಕದಲ್ಲಿ ಇರಿಸಿದರೆ, ಅಪಾಯಕ್ಕೆ ಕಾರಣವಾಗಬಹುದು. ತಜ್ಞರ ಪ್ರಕಾರ, ರೆಫ್ರಿಜರೇಟರ್ ಅನ್ನು ಎಲ್ಲಿ ಇರಿಸಬೇಕು ಎಂಬುದರ ಲೆಕ್ಕಾಚಾರ ಹೀಗಿದೆ: ಫ್ರಿಡ್ಜ್​​​ನ ಹಿಂದೆ ಕನಿಷ್ಠ ಎರಡು ಇಂಚುಗಳಷ್ಟು ಜಾಗವಿರಬೇಕು. ಅದೇ ರೀತಿ, ಕ್ಯಾಬಿನೆಟ್‌ನ ಮೇಲ್ಭಾಗದಲ್ಲಿ ಒಂದು ಇಂಚಿನ ಅಂತರ ಮತ್ತು ಮೂರು ಬದಿಗಳಲ್ಲಿ 1/8 ಇಂಚಿನ ಅಂತರ ಇರಬೇಕು. ಹಾಗಾಗಿ, ಅಂತರವಿದ್ದರೆ ಮಾತ್ರ ಫ್ರಿಡ್ಜ್‌ನಿಂದ ಗಾಳಿಯು ಚೆನ್ನಾಗಿ ಸಂಚರಿಸುತ್ತದೆ. ಇದಲ್ಲದೆ, ರೆಫ್ರಿಜರೇಟರ್ ದೀರ್ಘಕಾಲದವರೆಗೆ ಹೆಚ್ಚು ಬಿಸಿಯಾಗದಂತೆ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಯಾವುದೇ ದುರಸ್ತಿ ಇಲ್ಲದೇ ತನ್ನ ಕಾರ್ಯ ಮುಂದುವರಿಸುತ್ತದೆ.

ಫ್ರಿಡ್ಜ್ ಅನ್ನು ಗೋಡೆಯ ಪಕ್ಕದಲ್ಲಿಯೇ ಇರಿಸಿದರೆ ಏನಾಗುತ್ತದೆ?

ಫ್ರಿಡ್ಜ್ ಅನ್ನು ಗೋಡೆಯ ಹತ್ತಿರ ಅಥವಾ ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ, ಅದು ಬೇಗನೆ ಬಿಸಿಯಾಗುತ್ತದೆ ಮತ್ತು ಅದರ ಕಾರ್ಯಕ್ಷಮತೆಯಲ್ಲಿ ಹಾನಿಯಾಗುತ್ತದೆ. ಫ್ರಿಜ್ ಅನ್ನು ತಂಪಾಗಿಸುವ ಕಂಪ್ರೆಸರ್​​​ಗೆ ಗಾಳಿಯ ಅಗತ್ಯವಿದೆ. ಇದು ರೆಫ್ರಿಜರೇಟರ್ ಅನ್ನು ತಂಪಾಗಿರಿಸುತ್ತದೆ. ಹಾಗಾಗಿ ಫ್ರಿಡ್ಜ್ ಅನ್ನು ವಾತಾಯನ ಪ್ರದೇಶದಲ್ಲಿ ಇರಿಸದಿದ್ದರೆ ಅದು ತಣ್ಣಗಾಗುವುದಿಲ್ಲ. ಇದರಿಂದ ಫ್ರಿಡ್ಜ್ ನ ತಂಪಾಗುವಿಕೆ ಕಡಿಮೆಯಾಗಿ ಅದರಲ್ಲಿರುವ ಆಹಾರ ಪದಾರ್ಥಗಳು ಬೇಗ ಕೆಡುತ್ತವೆ. ಅಸಮರ್ಪಕವಾದ ರೆಫ್ರಿಜರೇಟರ್ ನಿಂದ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಪರಿಸರಕ್ಕೂ ಹಾನಿಯಾಗಬಹುದು. ವಾಸ್ತವವಾಗಿ, ರೆಫ್ರಿಜರೇಟರುಗಳಿಗೆ ಸಾಕಷ್ಟು ವಿದ್ಯುತ್ ಅಗತ್ಯವಿರುತ್ತದೆ. ಹಾಗಾಗಿ ಅದು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಕಾಲಕಾಲಕ್ಕೆ ಪರಿಶೀಲಿಸುವುದು ಒಳ್ಳೆಯದು.

Also Read: ತಿನ್ನುವ ಆಹಾರ ಪ್ಯಾಕ್ ಮಾಡಲು ನ್ಯೂಸ್​​ ಪೇಪರ್ ಕಾಗದ ಬಳಸಬೇಡಿ ಎಂದು ಎಚ್ಚರಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು! ಕಾರಣ ಏನು?

ರೆಫ್ರಿಜರೇಟರ್, ಸೀಲಿಂಗ್ ಅಥವಾ ಕ್ಯಾಬಿನೆಟ್, ಪಕ್ಕದ ಗೋಡೆಗಳು ಮತ್ತು ಕ್ಯಾಬಿನೆಟ್​​ ಹಿಂದಿನ ಗೋಡೆಯ ಸ್ಥಳವು ಕನಿಷ್ಠ ಕೆಲವು ಇಂಚುಗಳಷ್ಟು ಅಂತರದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ವಸ್ತುಗಳನ್ನು ಶೈತ್ಯೀಕರಣಗೊಳಿಸಿ. ಗಾತ್ರಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸುವುದು ಫ್ರಿಜ್‌ನ ಕಾರ್ಯಕ್ಷಮತೆಯನ್ನು ಮಿತಗೊಳಿಸುತ್ತದೆ. ಫ್ರಿಡ್ಜ್ ಅನ್ನು ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಇಡುವುದನ್ನು ಹೊರತುಪಡಿಸಿ, ಫ್ರಿಜ್ ಬಾಗಿಲು ತೆರೆಯುವಾಗ ಇತರ ವಸ್ತುಗಳನ್ನು ಮುಟ್ಟುತ್ತಾ ಇರಬೇಡಿ. ನೀವು ಡಬಲ್-ಡೋರ್ ಫ್ರಿಜ್ ಹೊಂದಿದ್ದರೆ, ಎಲ್ಲಾ ಕಡೆಗಳಲ್ಲಿ 5 ಇಂಚುಗಳಷ್ಟು ಕ್ಲಿಯರೆನ್ಸ್ ಇದೆ ಎಂದು ಖಚಿತಪಡಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ