AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೊಮ್ಮೆ ಪ್ರೆಶರ್​ ಕುಕ್ಕರ್​ನಲ್ಲಿ ಬಳಸುವ ಗ್ಯಾಸ್ಕೆಟ್ ಸಡಿಲವಾದರೆ ಏನು ಮಾಡಬೇಕು?

ಒಂದೊಮ್ಮೆ ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಮನೆಯ ಪ್ರೆಶರ್ ಕುಕ್ಕರ್​ನ ಗ್ಯಾಸ್ಕೆಟ್ ಸಡಿಲವಾಗಿಬಿಡುತ್ತೆ ಎಂದುಕೊಳ್ಳಿ. ಮತ್ತೊಂದು ರಬ್ಬರ್​ನ್ನು ತರಲು ತುಂಬಾ ದೂರಹೋಗಬೇಕು ಇವತ್ತೊಂದು ದಿನ ಕುಕ್ಕರ್ ಸರಿ ಇರಬಹುದಿತ್ತು ಎಂದೆನಿಸುತ್ತದೆ ಅಲ್ಲವೇ ಆ ಒಂದು ದಿನ ಮಾತ್ರ ಕುಕ್ಕರ್​ನಲ್ಲಿ ಪ್ರೆಶರ್ ನಿಲ್ಲುವಂತೆ ಮಾಡುವ ಕೆಲವು ಉಪಾಯಗಳನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ. ಕುಕ್ಕರ್​ನ ಗ್ಯಾಸ್ಕೆಟ್​ ಅನ್ನು ನೀವು ಬದಲಾಯಿಸಿದರೆ ಉತ್ತಮ ಆದರೆ ಸ್ವಲ್ಪ ಸಮಯದವರೆಗೆ ಅದಿಲ್ಲದೆಯೂ ಕುಕ್ಕರ್​ನಲ್ಲಿ ಅನ್ನ ಮಾಡಬಹುದಾಗಿದೆ.

ಒಂದೊಮ್ಮೆ ಪ್ರೆಶರ್​ ಕುಕ್ಕರ್​ನಲ್ಲಿ ಬಳಸುವ ಗ್ಯಾಸ್ಕೆಟ್ ಸಡಿಲವಾದರೆ ಏನು ಮಾಡಬೇಕು?
ಕುಕ್ಕರ್Image Credit source: Times Of India
ನಯನಾ ರಾಜೀವ್
|

Updated on: Sep 09, 2023 | 3:00 PM

Share

ಒಂದೊಮ್ಮೆ ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಮನೆಯ ಪ್ರೆಶರ್ ಕುಕ್ಕರ್​ನ ಗ್ಯಾಸ್ಕೆಟ್ ಸಡಿಲವಾಗಿಬಿಡುತ್ತೆ ಎಂದುಕೊಳ್ಳಿ. ಮತ್ತೊಂದು ಗ್ಯಾಸ್ಕೆಟ್ ತರಲು ತುಂಬಾ ದೂರಹೋಗಬೇಕು ಇವತ್ತೊಂದು ದಿನ ಕುಕ್ಕರ್ ಸರಿ ಇರಬಹುದಿತ್ತು ಎಂದೆನಿಸುತ್ತದೆ ಅಲ್ಲವೇ ಆ ಒಂದು ದಿನ ಮಾತ್ರ ಕುಕ್ಕರ್​ನಲ್ಲಿ ಪ್ರೆಶರ್ ನಿಲ್ಲುವಂತೆ ಮಾಡುವ ಕೆಲವು ಉಪಾಯಗಳನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ. ದೀರ್ಘಕಾಲದವರೆಗೆ ಈ ವಿಧಾನವನ್ನು ಅನುಸರಿಸಬೇಡಿ.   ಕುಕ್ಕರ್​ನ ಗ್ಯಾಸ್ಕೆಟ್​ ಅನ್ನು ನೀವು ಬದಲಾಯಿಸಿದರೆ ಉತ್ತಮ ಆದರೆ ಸ್ವಲ್ಪ ಸಮಯದವರೆಗೆ ಅದಿಲ್ಲದೆಯೂ ಕುಕ್ಕರ್​ನಲ್ಲಿ ಅನ್ನ ಮಾಡಬಹುದಾಗಿದೆ.

ಕುಕ್ಕರ್​ನ ಗ್ಯಾಸ್ಕೆಟ್ ಸಡಿಲವಾಗುವುದೇಕೆ? ತಿಳಿಯಿರಿ

ಒಂದು ನಿಮ್ಮ ಕುಕ್ಕರ್​ನ ಗ್ಯಾಸ್ಕೆಟ್ ತುಂಬಾ ಹಳೆಯದಾಗಿರಬೇಕು, ದೈನಂದಿನ ಬಳಕೆಯಿಂದಾಗಿ ಅದರ ಸ್ಥಿತಿ ಸ್ಥಾಪಕತ್ವ ಕಡಿಮೆಯಾಗುತ್ತದೆ. ಒಂದೊಮ್ಮೆ ಗ್ಯಾಸ್ಕೆಟ್​ನ್ನು ನೀವು ಸರಿಯಾಗಿ ತೊಳೆಯದಿದ್ದರೂ ಹೀಗೆ ಆಗಬಹುದು.

-ಪ್ರತಿ ಬಳಕೆಯ ನಂತರ, ನೀವು ಒತ್ತಡದ ಕುಕ್ಕರ್ ಮತ್ತು ಅದರ ರಬ್ಬರ್ ಅನ್ನು ತೆಗೆದುಹಾಕಿ ಮತ್ತು ಅದನ್ನು ತೊಳೆಯಬೇಕು. -ಒತ್ತಡದ ಕುಕ್ಕರ್‌ನ ರಬ್ಬರ್ ಅನ್ನು ಯಾವಾಗಲೂ ಸೋಪ್ ಮತ್ತು ನೀರಿನಿಂದ ತೊಳೆಯಿರಿ, ಆದರೆ ಕಬ್ಬಿಣದ ಸ್ಕ್ರಬ್ಬರ್ ಅನ್ನು ಬಳಸಬೇಡಿ. ಅದರಿಂದ ಗೀರುಗಳಾಗಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

-ತೊಳೆದ ನಂತರ, ಪ್ರೆಶರ್ ಕುಕ್ಕರ್‌ನ ರಬ್ಬರ್ ಚೆನ್ನಾಗಿ ಒಣಗಲು ಬಿಡಿ, ಅದನ್ನು ಕುಕ್ಕರ್‌ನ ಮುಚ್ಚಳದಲ್ಲಿ ಇಡಬೇಡಿ.

-ನೀವು ಈ ತಪ್ಪುಗಳನ್ನು ಪುನರಾವರ್ತಿಸದಿದ್ದರೆ, ರಬ್ಬರ್ ದೀರ್ಘಕಾಲದವರೆಗೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

ಕುಕ್ಕರ್​ನ ಗ್ಯಾಸ್ಕೆಟ್ ಸಡಿಲವಾಗಿದ್ದರೆ ಏನು ಮಾಡಬೇಕು? ಗ್ಯಾಸ್ಕೆಟ್​ನ್ನು ನೀರಿಗೆ ಹಾಕಿ ತಣ್ಣಗಿಡಿ ಈ ವಿಧಾನವು ಸಡಿಲವಾದ ರಬ್ಬರ್ ಅನ್ನು ಸ್ವಲ್ಪಮಟ್ಟಿಗೆ ಬಳಸಬಹುದಾಗಿದೆ. 10 ನಿಮಿಷಗಳ ಕಾಲ ಫ್ರಿಜ್‌ನಲ್ಲಿ ಅಥವಾ ಐಸ್ ವಾಟರ್ ಬಾತ್‌ನಲ್ಲಿ ಇರಿಸಿದರೆ ಅದು ಕುಕ್ಕರ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತದೆ.

ಮತ್ತಷ್ಟು ಓದಿ: ಬೇರೆಯವರ ದುರಾದೃಷ್ಟ ನಿಮಗೆ ತಗಲಬಾರದೆಂದರೆ ಇತರರಿಂದ ಈ ವಸ್ತುಗಳನ್ನು ಸ್ವೀಕರಿಸಬೇಡಿ

ಕುಕ್ಕರ್​ ಮುಚ್ಚುಳದ ಮೇಲೆ ಟೇಪ್ ಹಾಕಿ ನೀವು ಶಾಶ್ವತವಾಗಿ ಟೇಪ್ ಹಾಕಬಾರದು ಅದರಿಂದ ಅಪಾಯ ಹೆಚ್ಚು ಕೇವಲ ಒಂದು ದಿನದ ಮಟ್ಟಿಗೆ ಈ ಉಪಾಯ ಮಾಡಬಹುದು. ಮುಚ್ಚುಳದ ಮೇಲೆ ಸೆಲ್ಲೋ ಟೇಪ್ ಹಾಕಿ.

ಹಿಟ್ಟಿನ ಸಹಾಯ ಪಡೆಯಬಹುದು ಹಿಟ್ಟಿನ ಸಹಾಯದಿಂದ ಕುಕ್ಕರ್​ನ ಮುಚ್ಚುಳವನ್ನು ಬಿಗಿಗೊಳಿಸಬಹುದು. ಗ್ಯಾಸ್ಕೆಟ್​ನ್ನು​ ಅನ್ನು ಮುಚ್ಚುಳಕ್ಕೆ ಅಂಟಿಸಿಕೊಳ್ಳಲು ನೀವು ಹಿಟ್ಟನ್ನು ಹಚ್ಚಬಹುದು. ಪ್ರೆಶರ್ ಕುಕ್ಕರ್‌ನ ಮುಚ್ಚಳದಲ್ಲಿರುವ ಸೀಟಿ ಮತ್ತು ತುರ್ತು ಒತ್ತಡ ಬಿಡುಗಡೆ ಕವಾಟವನ್ನು ಸಹ ಸ್ವಚ್ಛಗೊಳಿಸುತ್ತಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ