ನಿಮ್ಮಲ್ಲಿ ಈ ನಡವಳಿಕೆಗಳು ಕಂಡು ಬಂದರೆ ದಾಂಪತ್ಯ ಜೀವನದಲ್ಲಿ ನೀವು ಬೆಂಬಲ ನೀಡುವ ಸಂಗಾತಿಯಾಗಿಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 07, 2024 | 5:55 PM

relationship: ಸಂಬಂಧಕ್ಕೆ ಪ್ರೀತಿಯು ಮುಖ್ಯವಾದರೆ, ನಂಬಿಕೆಯೇ ಜೀವಾಳ. ಒಬ್ಬರು ಮತ್ತೊಬ್ಬರನ್ನು ಅರ್ಥ ಮಾಡಿಕೊಂಡು ಸದಾ ಬೆಂಬಲವನ್ನು ನೀಡುತ್ತಾ ಸಾಗಿದರೆ ಸಂಬಂಧವು ಸಂತೋಷವನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಂಬಂಧವನ್ನು ಹಾಳು ಮಾಡಬಹುದು. ಅದಲ್ಲದೇ ಸಂಗಾತಿಯ ಸಣ್ಣ ಪುಟ್ಟ ಬದಲಾವಣೆಗಳು ಮನಸ್ಸಿಗೆ ಗಾಢವಾದ ನೋವನ್ನುಂಟು ಮಾಡಬಹುದು. ಒಂದು ವೇಳೆ ಸಂಗಾತಿಯಲ್ಲಿ ಈ ಕೆಲವು ನಡವಳಿಕೆಗಳು ಕಂಡು ಬಂದರೆ ಆಕೆ ಅಥವಾ ಆತನಿಂದ ಯಾವುದೇ ಬೆಂಬಲ ರೀತಿಯ ಸಿಗುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ನಿಮ್ಮಲ್ಲಿ ಈ ನಡವಳಿಕೆಗಳು ಕಂಡು ಬಂದರೆ ದಾಂಪತ್ಯ ಜೀವನದಲ್ಲಿ ನೀವು ಬೆಂಬಲ ನೀಡುವ ಸಂಗಾತಿಯಾಗಿಲ್ಲ
ಸಾಂದರ್ಭಿಕ ಚಿತ್ರ
Follow us on

ಸಂಬಂಧವು ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ. ವರ್ಷಗಳು ಉರುಳಿದಂತೆ ಭಾವನೆಗಳ ತೀವ್ರತೆಯು ಕಡಿಮೆಯಾಗಬಹುದು. ಸದಾ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ವ್ಯಕ್ತಿಯು ಏನನ್ನು ವ್ಯಕ್ತಪಡಿಸದೇ ಸುಮ್ಮನಾಗಬಹುದು. ಹೀಗೆಂದ ಮಾತ್ರ ಸಂಬಂಧವು ಸರಿಯಿಲ್ಲ ಎಂದು ಹೇಳುವುದು ಕಷ್ಟ. ಆದರೆ ಜವಾಬ್ದಾರಿಗಳು, ಒತ್ತಡ ತುಂಬಿದ ಬದುಕು ಈ ರೀತಿಯ ಬದಲಾವಣೆಗೆ ಕಾರಣವಾಗಿರುತ್ತದೆ. ಆದರೆ ಈ ವೇಳೆಯಲ್ಲಿ ಸಂಗಾತಿಗಳಿಬ್ಬರೂ ಅರ್ಥ ಮಾಡಿಕೊಂಡು ಜೊತೆಯಾಗಿ ಸಾಗಬೇಕು. ವರುಷಗಳು ಉರುಳುತ್ತ ಸಂಗಾತಿಗೆ ಬೆಂಬಲವನ್ನು ನೀಡುವಲ್ಲಿ ವಿಫಲವಾಗುತ್ತೇವೆ. ಈ ವೇಳೆಯಲ್ಲಿ ಕೆಲವೊಂದು ನಡವಳಿಕೆಗಳು ನಿಮ್ಮ ಸಂಬಂಧದ ಕೊಂಡಿಯು ಕಳಚುವಂತೆ ಮಾಡುತ್ತದೆ.

* ಸಂಗಾತಿಯ ಭಾವನೆಗೆ ಬೆಲೆ ನೀಡದೇ ಇರುವುದು : ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು, ಅಸಮಾಧಾನಗಳು ಮೂಡುವುದು ಸಹಜ. ಆದರೆ ಸಂಗಾತಿಯು ಕೋಪದಲ್ಲಿದ್ದಾಗ ಅವರ ಭಾವನೆಗೆ ಬೆಲೆ ಕೊಡುವುದು ಮುಖ್ಯ. ಅವರೇನನ್ನಾದರೂ ಹೇಳುತ್ತಿದ್ದರೆ ಅದನ್ನು ಕೇಳುವ ಮನೋಭಾವವಿರಬೇಕು. ಒಂದು ವೇಳೆ ಉತ್ತಮ ಕೇಳುಗನಾಗದೇ ಅವರನ್ನು ಅಪಹಾಸ್ಯ ಮಾಡುವುದು, ಅವರ ನೋವಿನ ಮಾತುಗಳನ್ನು ತಿರಸ್ಕರಿಸುತ್ತಿದ್ದರೆ ನೀವು ಉತ್ತಮ ಬೆಂಬಲ ನೀಡುವ ಸಂಗಾತಿಯಾಗಿಲ್ಲ ಎಂದರ್ಥ.

* ಭರವಸೆ ನೀಡಿ ಸಂಗಾತಿಯನ್ನು ಹತಾಶೆಗೊಳಿಸುವುದು : ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ನೀಡಿದ ಭರವಸೆಯನ್ನು ಈಡೇರಿಸುವುದು ಮುಖ್ಯವಾಗುತ್ತದೆ. ಸಂಗಾತಿಗೆ ಕೆಲವೊಂದು ಭರವಸೆಯನ್ನು ನೀಡಿ ಅದನ್ನು ಪಾಲಿಸದೇ ಇದ್ದಾಗ ಸಹಜವಾಗಿ ನಿಮ್ಮಿಂದ ಬೇಸರವಾಗುತ್ತದೆ. ಹೀಗಾಗಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಗಾತಿಗೆ ಭರವಸೆ ನೀಡಿ ಅದನ್ನು ಪಾಲಿಸುವುದು ಮುಖ್ಯ. ನೀವು ಹೇಳಿದ್ದಂತೆ ನಡೆದುಕೊಂಡರೆ ಸಂಗಾತಿಯು ನಿಮ್ಮ ಮೇಲೆ ನಂಬಿಕೆ ಮೂಡಿ ಸಂಬಂಧವು ಗಟ್ಟಿಯಾಗುತ್ತದೆ.

* ಸಂಗಾತಿಯ ಗೆಲುವನ್ನು ಸಂಭ್ರಮಿಸದೆ ಇರುವುದು: ದಾಂಪತ್ಯ ಜೀವನದಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗಬೇಕು. ಅದೇ ರೀತಿ ಒಬ್ಬರ ಇನ್ನೊಬ್ಬರ ಏಳಿಗೆ, ಗೆಲುವನ್ನು ಸಂಭ್ರಮಿಸುವುದು ಕೂಡ ಮುಖ್ಯ. ಅವರ ಯಶಸ್ಸನ್ನು ತನ್ನ ಯಶಸ್ಸು ಎನ್ನುವಂತೆ ಸಂಭ್ರಮಿಸಿದರೆ ಹೋದರೆ ನೀವು ಬೆಸ್ಟ್ ಸಂಗಾತಿ ಎನಿಸಿಕೊಳ್ಳುವುದಿಲ್ಲ. ಈ ರೀತಿಯ ವರ್ತನೆಯಿಂದ ನಿಮ್ಮ ಸಂಗಾತಿಗೆ ಯಾವುದೇ ಬೆಂಬಲ ಸಿಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

* ಎಲ್ಲವೂ ನನಗಾಗಿ ಎನ್ನುವ ಭಾವ: ಏನೇ ಮಾಡಿದರೂ ನಮಗೆ ಎನ್ನುವುದಕ್ಕಿಂತ ನನಗೆ ಎನ್ನುವ ಭಾವವು ದಾಂಪತ್ಯ ಜೀವನದ ಬಿರುಕಿಗೆ ಕಾರಣವಾಗಬಹುದು. ವೈವಾಹಿಕ ಜೀವನದಲ್ಲಿ ಇಬ್ಬರೂ ಸಮಾನರು, ಇಬ್ಬರಲ್ಲಿಯು ಸಮಾನ ಮನಸ್ಥಿತಿಯು ಇರಬೇಕು. ಅದಲ್ಲದೇ ಸಂಗಾತಿಯ ಸನ್ನಿವೇಶವನ್ನು ಅರ್ಥ ಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡು ಸಾಗುವುದು ಮುಖ್ಯ. ಒಂದು ವೇಳೆ ಈ ಗುಣ ನಿಮ್ಮಲ್ಲಿ ಇಲ್ಲದೆ ಹೋದರೆ ನಿಮ್ಮ ಸಂಗಾತಿಗೆ ಬೆಂಬಲವನ್ನು ನೀಡುವ ಸಂಗಾತಿಯಾಗಿಲ್ಲ ಎನ್ನುವುದನ್ನು ತೋರಿಸುತ್ತದೆ.

ಇದನ್ನೂ ಓದಿ: ಖಿನ್ನತೆಗೂ ದೇಹದ ಉಷ್ಣಾಂಶಕ್ಕೂ ಇದೆ ಸಂಬಂಧ; ಅಧ್ಯಯನದಲ್ಲಿ ಬಯಲು

* ಕಠಿಣ ಸನ್ನಿವೇಶದಲ್ಲಿ ಸಂಭಾಷಣೆಯನ್ನು ತಪ್ಪಿಸದೇ ಇರುವುದು: ವೈವಾಹಿಕ ಜೀವನದಲ್ಲಿ ಕಠಿಣ ಹಾಗೂ ಕಷ್ಟದ ಸನ್ನಿವೇಶಗಳು ಬರಬಹುದು. ಈ ಸಮಯದಲ್ಲಿ ಸಂಗಾತಿಯಾದವರಿಬ್ಬರೂ ಜೊತೆಯಾಗಿ ನಿಲ್ಲಬೇಕು. ಆದರೆ ಹೆಚ್ಚಿನವರು ಒಬ್ಬರು ಇನ್ನೊಬ್ಬರನ್ನು ದೂರುವ ಕೆಲಸಗಳನ್ನು ಮಾಡುತ್ತಾರೆ. ಈ ವೇಳೆಯಲ್ಲಿ ಅನಾವಶ್ಯಕ ಸಂಭಾಷಣೆಯನ್ನು ತಪ್ಪಿಸಿ ಇಬ್ಬರೂ ಕುಳಿತು ಮಾತನಾಡಿ ಆ ಸಮಸ್ಯೆಯಿಂದ ಅಥವಾ ಸನ್ನಿವೇಶದಿಂದ ಮುಕ್ತರಾಗುವುದು ಹೇಗೆ ಎಂದು ಯೋಚಿಸಬೇಕು. ಕೆಲವರು ಈ ಸಮಯದಲ್ಲಿ ಜಗಳ ಹಾಗೂ ವಾದಕ್ಕೆ ಇಳಿಯುತ್ತಾರೆ. ಕಠಿಣ ಸಮಯದಲ್ಲಿಯು ಸಂಗಾತಿಯ ಜೊತೆಗೆ ನಿಲ್ಲದೆ ಹೋಗುವುದು ಉತ್ತಮ ಸಂಗಾತಿಯ ಲಕ್ಷಣವಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ