AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Depression: ಖಿನ್ನತೆಗೂ ದೇಹದ ಉಷ್ಣಾಂಶಕ್ಕೂ ಇದೆ ಸಂಬಂಧ; ಅಧ್ಯಯನದಲ್ಲಿ ಬಯಲು

Health Tips: ಖಿನ್ನತೆಯೆಂಬುದು ಮಾನಸಿಕ ಸಮಸ್ಯೆಯಾಗಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನವು ಖಿನ್ನತೆ ಮತ್ತು ನಮ್ಮ ದೇಹದ ಉಷ್ಣತೆಯ ನಡುವೆ ಸಂಬಂಧವಿದೆ ಎಂದು ಹೇಳುವ ಮೂಲಕ ಹೊಸ ಸಂಗತಿಯನ್ನು ಬಯಲು ಮಾಡಿದೆ.

Depression: ಖಿನ್ನತೆಗೂ ದೇಹದ ಉಷ್ಣಾಂಶಕ್ಕೂ ಇದೆ ಸಂಬಂಧ; ಅಧ್ಯಯನದಲ್ಲಿ ಬಯಲು
ಖಿನ್ನತೆImage Credit source: iStock
ಸುಷ್ಮಾ ಚಕ್ರೆ
|

Updated on: Feb 07, 2024 | 3:14 PM

Share

ಖಿನ್ನತೆ (Depression) ಎಂಬುದು ಒಂದು ಗಂಭೀರವಾದ ವೈದ್ಯಕೀಯ ಕಾಯಿಲೆಯಾಗಿದ್ದು, ಅದು ನೀವು ಹೇಗೆ ಭಾವಿಸುತ್ತೀರಿ, ನೀವು ಯೋಚಿಸುವ ರೀತಿ ಮತ್ತು ನೀವು ಹೇಗೆ ವರ್ತಿಸುತ್ತೀರಿ ಎಂಬುದರ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಆದರೆ, ಖಿನ್ನತೆಗೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಅದರಿಂದ ನಾವು ಹೊರಬರಬಹುದು. ಹೀಗಿದ್ದರೂ ಅನೇಕ ಜನರು ಖಿನ್ನತೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ಖಿನ್ನತೆಗೂ ನಮ್ಮ ದೇಹದಲ್ಲಿ ಬದಲಾಗುವ ತಾಪಮಾನಕ್ಕೂ ಸಂಬಂಧವಿದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

ಖಿನ್ನತೆಯ ಲಕ್ಷಣಗಳು:

ಖಿನ್ನತೆಯ ಲಕ್ಷಣಗಳು ಕೆಲವರಿಗೆ ಸೌಮ್ಯವಾಗಿ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಖಿನ್ನತೆಯ ಮುಖ್ಯ ಲಕ್ಷಣಗಳೆಂದರೆ,

– ದುಃಖದ ಭಾವನೆ. 7760436075

– ನಮಗೆ ಇಷ್ಟವಾಗುತ್ತಿದ್ದ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುವುದು.

– ಹಸಿವಿನ ಬದಲಾವಣೆಗಳು.

– ವಿಪರೀತ ತೂಕ ಇಳಿಯುವುದು.

– ನಿದ್ರಿಸಲು ತೊಂದರೆಯಾಗುವುದು ಅಥವಾ ಹೆಚ್ಚು ನಿದ್ರಿಸುವುದು.

– ಶಕ್ತಿಯ ನಷ್ಟ ಅಥವಾ ಹೆಚ್ಚಿದ ಆಯಾಸ.

– ತಪ್ಪಿತಸ್ಥ ಭಾವನೆ

– ಅತಿಯಾಗಿ ಯೋಚಿಸುವುದು, ಏಕಾಗ್ರತೆಯ ಕೊರತೆ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುವುದು.

– ಸಾವು ಅಥವಾ ಆತ್ಮಹತ್ಯೆಯ ಆಲೋಚನೆಗಳು

ಇದನ್ನೂ ಓದಿ: ಖಿನ್ನತೆಗೆ ಮಾತ್ರೆ ತೆಗೆದುಕೊಳ್ಳುತ್ತೀರಾ?; ಅದರ ಅಡ್ಡಪರಿಣಾಮಗಳೂ ತಿಳಿದಿರಲಿ

ವೈಜ್ಞಾನಿಕ ವರದಿಗಳಲ್ಲಿ ಪ್ರಕಟವಾದ ಸಂಶೋಧನೆಯು ಖಿನ್ನತೆಯಿರುವ ವ್ಯಕ್ತಿಗಳು ಹೆಚ್ಚಿನ ದೇಹದ ಉಷ್ಣತೆಯನ್ನು ಹೊಂದಿರುತ್ತಾರೆ ಎಂದು ಸೂಚಿಸುತ್ತದೆ. ಆದರೆ, ಖಿನ್ನತೆಯು ದೇಹದ ಉಷ್ಣತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಖಿನ್ನತೆಗೆ ಒಳಗಾದ ವ್ಯಕ್ತಿಗಳಲ್ಲಿ ಕಂಡುಬರುವ ಹೆಚ್ಚಿನ ದೇಹದ ಉಷ್ಣತೆಯು ಚಯಾಪಚಯ ಪ್ರಕ್ರಿಯೆಗಳಿಂದ ಹೆಚ್ಚಿದ ಶಾಖ ಉತ್ಪಾದನೆ ಅಥವಾ ಎರಡೂ ಅಂಶಗಳ ಸಂಯೋಜನೆಯಿಂದಾಗಿ ಹೆಚ್ಚಿನ ತನಿಖೆಯ ಅಗತ್ಯವನ್ನು ಅಧ್ಯಯನವು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಖಿನ್ನತೆಯಿಂದ ಪಾರಾಗಲು ಈ ಅಭ್ಯಾಸಗಳನ್ನು ಬಿಟ್ಟುಬಿಡಿ

ಈ ಅಧ್ಯಯನವು 106 ದೇಶಗಳಾದ್ಯಂತ 20,000 ಭಾಗವಹಿಸುವವರ ಡೇಟಾವನ್ನು ವಿಶ್ಲೇಷಿಸಿದೆ. ಅವರು ದೇಹದ ಉಷ್ಣತೆಯನ್ನು ಅಳೆಯಲು ಸಾಧನವನ್ನು ಧರಿಸಿದ್ದರು. 2020ರ ಆರಂಭದಲ್ಲಿ 7 ತಿಂಗಳ ಅವಧಿಯಲ್ಲಿ ಹೆಚ್ಚಿನ ಮಟ್ಟದ ಖಿನ್ನತೆಯ ರೋಗಲಕ್ಷಣದ ತೀವ್ರತೆ ಮತ್ತು ದೇಹದ ಉಷ್ಣತೆಯ ಹೆಚ್ಚಳದ ನಡುವಿನ ಪರಸ್ಪರ ಸಂಬಂಧವನ್ನು ಸಂಶೋಧಕರು ಗಮನಿಸಿದ್ದಾರೆ. ದಿನವಿಡೀ ದೇಹದ ಉಷ್ಣತೆಯಲ್ಲಿ ಕಡಿಮೆ ಏರಿಳಿತವನ್ನು ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಖಿನ್ನತೆಯ ಲಕ್ಷಣಗಳನ್ನು ಹೊಂದುತ್ತಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್
ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?