Chocolate Day Gift Ideas: ನಿಮ್ಮ ಸಂಗಾತಿಗೆ ಈ ರೀತಿ ಚಾಕೋಲೇಟ್ ಕೊಟ್ಟು ಸರ್​ಪ್ರೈಸ್ ನೀಡಿ

Valentine’s Week 2024: ಈಗಾಗಲೇ ಪ್ರೇಮಿಗಳ ವಾರ ಶುರುವಾಗಿದೆ. ರೋಸ್ ಡೇ, ಪ್ರಪೋಸ್ ಡೇ ಆದ ನಂತರ ಬರುವ 3ನೇ ದಿನವೇ ಚಾಕೋಲೇಟ್ ಡೇ. ಚಾಕೋಲೇಟ್ ದಿನಕ್ಕೆ ನಿಮ್ಮ ಪ್ರೇಮಿಗೆ ಸರ್​ಪ್ರೈಸ್ ಉಡುಗೊರೆ ನೀಡಬೇಕೆಂಬ ಆಸೆಯಿದೆಯೇ? ಅದಕ್ಕೆ ಈ ರೀತಿ ಪ್ಲಾನ್ ಮಾಡಿ.

Chocolate Day Gift Ideas: ನಿಮ್ಮ ಸಂಗಾತಿಗೆ ಈ ರೀತಿ ಚಾಕೋಲೇಟ್ ಕೊಟ್ಟು ಸರ್​ಪ್ರೈಸ್ ನೀಡಿ
ಚಾಕೋಲೇಟ್
Follow us
ಸುಷ್ಮಾ ಚಕ್ರೆ
| Updated By: Digi Tech Desk

Updated on:Feb 08, 2024 | 10:56 AM

ಪ್ರೇಮಿಗಳ ವಾರದ ಅಂಗವಾಗಿ ಪ್ರತಿ ವರ್ಷ ಫೆಬ್ರವರಿ 9ರಂದು ಚಾಕೊಲೇಟ್ ದಿನವನ್ನು (Chocolate Day) ಆಚರಿಸಲಾಗುತ್ತದೆ. ಪ್ರೇಮಿಗಳ ವಾರವಿಡೀ (Valentine’s Week) ಪ್ರೀತಿಯಲ್ಲಿರುವವರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಏನೇನೋ ಪ್ಲಾನ್ ಮಾಡುತ್ತಾರೆ. ಚಾಕೊಲೇಟ್ ವ್ಯಕ್ತಿಯ ಮನಸಿನ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದು ಅವರನ್ನು ಸಂತೋಷಗೊಳಿಸುತ್ತದೆ. ಕೋಕೋ ಬೀನ್ಸ್ ಚಾಕೊಲೇಟ್‌ಗಳನ್ನು ತಯಾರಿಸಲು ಬಳಸುವ ಪ್ರಾಥಮಿಕ ಘಟಕಾಂಶವಾಗಿದೆ. ಇದರಿಂದ ಆರೋಗ್ಯಕ್ಕೂ ಪ್ರಯೋಜನಗಳಿವೆ. ಚಾಕೊಲೇಟ್ ದಿನದಂದು ನಿಮ್ಮ ಪ್ರೇಮಿಗೆ ಯಾವ ರೀತಿಯ ಸರ್​ಪ್ರೈಸ್ ಕೊಡಬಹುದು ಎಂಬ ಬಗ್ಗೆ ಸಲಹೆಗಳು ಇಲ್ಲಿವೆ.

ಚಾಕೊಲೇಟ್ ಜೊತೆ ಹೂಗುಚ್ಛ:

ನೀವು ಚಾಕೊಲೇಟ್‌ಗಳ ಜೊತೆ ಪುಷ್ಪಗುಚ್ಛವನ್ನು ಮಾಡಬಹುದು. ಅಥವಾ ಪ್ರತಿಯೊಂದರ ಒಳಗೆ ಚಾಕೊಲೇಟ್‌ಗಳೊಂದಿಗೆ ಬಲೂನ್‌ಗಳ ಪುಷ್ಪಗುಚ್ಛವನ್ನು ಮಾಡಬಹುದು. ಇದು ನಿಮ್ಮ ಸಂಗಾತಿಗೆ ಒಂದು ಮುದ್ದಾದ ಉಡುಗೊರೆಯಾಗುತ್ತದೆ.

ಇದನ್ನೂ ಓದಿ: Propose Day 2024 Date: ಪ್ರಪೋಸ್ ಡೇ ಯಾವಾಗ?; ಅದರ ಇತಿಹಾಸ, ಪ್ರಾಮುಖ್ಯತೆಯೇನು?

ಮನೆಯಲ್ಲಿ ತಯಾರಿಸಿದ ಚಾಕೊಲೇಟ್ ಮಡ್​ಕೇಕ್:

ಕೈಯಿಂದ ಮಾಡಿದ ಉಡುಗೊರೆಯಂತೆ ‘ಐ ಲವ್ ಯೂ’ ಎಂದು ಯಾವುದೂ ಹೇಳುವುದಿಲ್ಲ. ನಾವೇ ಖುದ್ದಾಗಿ ಮಾಡಿದ ಉಡುಗೊರೆಗೆ ವಿಶೇಷತೆ ಜಾಸ್ತಿ. ಹೀಗಾಗಿ, ನಿಮ್ಮ ಸಂಗಾತಿಗೆ ನೀವೇ ಚಾಕೋಲೇಟ್ ಕೇಕ್ ಮಾಡಿಕೊಡಿ. ಅದರ ಖುಷಿಯೇ ಬೇರೆ.

ಕಪ್​ಕೇಕ್:

ಇತ್ತೀಚಿನ ದಿನಗಳಲ್ಲಿ ಕಸ್ಟಮೈಸ್ ಮಾಡಿದ ಕಪ್‌ಕೇಕ್‌ಗಳು ಬೇಕರಿಗಳಲ್ಲಿ ಸುಲಭವಾಗಿ ಲಭ್ಯವಿವೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಸುಲಭವಾದ ಪಾಕವಿಧಾನಗಳೊಂದಿಗೆ ನೀವೇ ಕೂಡ ಈ ಕಪ್​ಕೇಕ್ ಮಾಡಬಹುದು. ಈ ಚಾಕೊಲೇಟ್ ದಿನಕ್ಕೆ ಕೆಲವು ಮುದ್ದಾದ ಸಂದೇಶಗಳು, ಶುಭಾಶಯಗಳ ಜೊತೆ ಕಪ್​ ಕೇಕ್ ನೀಡಿ.

ಇದನ್ನೂ ಓದಿ: Rose Day 2024: ಪ್ರತಿ ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್ ಡೇ ವಿಶೇಷತೆಯಿದು

ಕಸ್ಟಮೈಸ್ ಮಾಡಿದ ಚಾಕೊಲೇಟ್ ಬಾಕ್ಸ್ ಕಮ್ ಕಾರ್ಡ್:

ಚಾಕೊಲೇಟ್ ಡೇಗಾಗಿ ಸರಳವಾದ ಆದರೆ ಹೃತ್ಪೂರ್ವಕ ಉಡುಗೊರೆಯ ಕಲ್ಪನೆ ಇಲ್ಲಿದೆ. ನಿಮ್ಮ ಸಂಗಾತಿಗಾಗಿ ನೀವು ಕಸ್ಟಮೈಸ್ ಮಾಡಿದ ಚಾಕೊಲೇಟ್ ಬಾಕ್ಸ್ ಅನ್ನು ನೀಡಬಹುದು. ಅದನ್ನು ಕೈಬರಹದ ಪತ್ರ ಅಥವಾ ಸಿಹಿ ಶುಭಾಶಯ ಪತ್ರದೊಂದಿಗೆ ನೀಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 am, Thu, 8 February 24

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ