AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chocolate Day 2024: ಚಾಕೋಲೇಟ್ ದಿನದಂದು ನಿಮ್ಮ ಮನದರಸಿಯ ಮನ ಗೆಲ್ಲಲು ಏನು ಮಾಡಿದರೆ ಬೆಸ್ಟ್? ಇಲ್ಲಿದೆ ಸಿಂಪಲ್ ಟಿಪ್ಸ್

valentine's day: ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮಿಗಳ ಪಾಲಿಗೆ ಸಂಭ್ರಮದ ತಿಂಗಳು. ಪ್ರೇಮಿಗಳು ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲು ಕಾಯುತ್ತಿರುತ್ತಾರೆ. ಫೆಬ್ರವರಿ 14 ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಪ್ರೇಮಿಗಳ ಸಂಭ್ರಮವು ಎಲ್ಲೇ ಮೀರುತ್ತಿದೆ. ಒಂದು ವಾರಗಳ ಕಾಲ ಮೊದಲು ನಡೆಯುವ ಈ ಸಂಭ್ರಮಾಚರಣೆಯು ಜೋರಾಗಿದೆ. ಪ್ರೇಯಸಿಯ ಮನಸ್ಸು ಗೆಲ್ಲಲು ಇರುವ ಈ ವಿಶೇಷ ದಿನಗಳಲ್ಲಿ ಚಾಕೊಲೇಟ್ ಡೇ ಕೂಡ ಒಂದು. ಫೆಬ್ರವರಿ 9 ರಂದು ಚಾಕೊಲೇಟ್ ದಿನದಂದು ತಮ್ಮ ಪ್ರೇಯಸಿಗೆ ಸಿಹಿ ಸಿಹಿಯಾದ ಚಾಕೊಲೇಟ್ ಅನ್ನು ನೀಡಿ ಖುಷಿ ಪಡಿಸಬಹುದು.

Chocolate Day 2024: ಚಾಕೋಲೇಟ್ ದಿನದಂದು ನಿಮ್ಮ ಮನದರಸಿಯ ಮನ ಗೆಲ್ಲಲು ಏನು ಮಾಡಿದರೆ ಬೆಸ್ಟ್? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 08, 2024 | 11:58 AM

Share

ಚಾಕೋಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಚಾಕೊಲೇಟ್ ಇಷ್ಟ ಪಟ್ಟು ಸೇವಿಸುತ್ತಾರೆ. ಯಾವುದೇ ಸಂದರ್ಭವಿರಲಿ, ತಮ್ಮ ಆತ್ಮೀಯರಿಗೆ ಚಾಕೊಲೇಟ್ ಅನ್ನು ಗಿಫ್ಟ್ ಆಗಿ ನೀಡುವುದಿದೆ. ಹೀಗಾಗಿಯೇ ಈ ಚಾಕೊಲೇಟ್ ಎನ್ನುವುದು ಉಡುಗೊರೆಯ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಫೆಬ್ರವರಿ 9 ರಂದು ಚಾಕೋಲೇಟ್ ಡೇಯಂದುಯಂದು ಪ್ರೀತಿಸುವ ವ್ಯಕ್ತಿಯ ಮನಸ್ಸು ಹಾಗೂ ಬಾಯಿ ಸಿಹಿ ಮಾಡಲು ಈ ರೀತಿಯ ಚಾಕೊಲೇಟ್ ಉಡುಗೊರೆಯನ್ನು ನೀಡಿದರೆ ಬೆಸ್ಟ್.

* ಚಾಕಲೇಟ್ ಬಾಸ್ಕೆಟ್ ನೀಡಿ : ಮಾರುಕಟ್ಟೆಯಲ್ಲಿ ವಿವಿಧ ಚಾಕೊಲೇಟ್‌ ಗಳು ಲಭ್ಯವಿದ್ದು, ಹಾರ್ಟ್ ಶೇಪ್ ಚಾಕೊಲೇಟ್ ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಒಂದು ವೇಳೆ ಚಾಕೊಲೇಟ್ ಗಿಫ್ಟ್ ನೀಡುವುದಿದ್ದರೆ, ಬಾಕ್ಸ್ ಬಾಸ್ಕೆಟ್ ಅನ್ನು ಸರ್ಪ್ರೈಸ್ ರೀತಿಯಲ್ಲಿ ನೀಡುವ ಮೂಲಕ ಆಚರಿಸಿಕೊಳ್ಳಬಹುದು.

* ಚಾಕೊಲೇಟ್ ನಿಂದ ಕೂಡಿದ ಬೊಕ್ಕೆ ನೀಡಿ: ಹೆಣ್ಣು ಮಕ್ಕಳಿಗೆ ಚಾಕೊಲೇಟ್ ಎಂದರೆ ಪಂಚಪ್ರಾಣ. ಚಾಕೊಲೇಟ್ ಡೇಯಂದು ಪ್ರೇಯಸಿಗೆ ಚಾಕೊಲೇಟ್ ನಿಂದ ಕೂಡಿದ ಬೊಕ್ಕೆಯನ್ನು ನೀಡಿದರೆ ಖುಷಿಯಾಗುತ್ತದೆ.

* ಚಾಕೊಲೇಟ್‌ ಥೀಮ್‌ನ ಡಿನ್ನರ್ ಅರೇಂಜ್ಡ್ ಮಾಡಿ : ಚಾಕೊಲೇಟ್‌ ಡೇ ದಿನದಂದು ಚಾಕೊಲೇಟ್‌ ಥೀಮ್‌ನ ಡಿನ್ನರ್‌ ಆಯೋಜಿಸಬಹುದು. ಈ ಡಿನ್ನರ್‌ ನಲ್ಲಿ ಎಲ್ಲೆಲ್ಲೂ ಚಾಕೊಲೇಟ್ ಗಳಿಂದ ಅಲಂಕಾರ ಮಾಡಿದರೆ ಬೆಸ್ಟ್.

* ನಿಮ್ಮ ಕೈಯಾರೆ ಚಾಕೊಲೇಟ್‌ ತಯಾರಿಸಿ ನೀಡಿ: ಮಾರುಕಟ್ಟೆಯಲ್ಲಿ ಸಿಗುವ ಚಾಕೊಲೇಟ್ ಗಿಂತ ನಿಮ್ಮ ಕೈಯಾರೆ ವಿವಿಧ ವಿನ್ಯಾಸದ ಚಾಕೊಲೇಟ್ ಮಾಡಿ ನೀಡಿದರೆ ಪ್ರೇಮಿಗೆ ಖುಷಿಯಾಗುತ್ತದೆ. ನೀವೆಷ್ಟು ಆಕೆಯನ್ನು ಪ್ರೀತಿಸುತ್ತೀರಾ ಎನ್ನುವುದು ಅರ್ಥಮಾಡಿಸಿಕೊಟ್ಟಂತೆ ಆಗುತ್ತದೆ.

ಇದನ್ನೂ ಓದಿ: ನಿಮ್ಮ ಸಂಗಾತಿಗೆ ಈ ರೀತಿ ಚಾಕೋಲೇಟ್ ಕೊಟ್ಟು ಸರ್​ಪ್ರೈಸ್ ನೀಡಿ

* ಚಾಕೊಲೇಟ್‌ ಥೀಮ್‌ನ ಗಿಫ್ಟ್‌ಗಳು: ಹೆಣ್ಣು ಮಕ್ಕಳಿಗೆ ಬ್ಯೂಟಿ ಪ್ರಾಡಕ್ಟ್ ಗಳೆಂದರೆ ತುಂಬಾನೇ ಇಷ್ಟ. ಅದರಲ್ಲಿಯು ಈ ಚಾಕೊಲೇಟ್ ಡೇ ಯಂದು ಚಾಕೊಲೇಟ್ ಫ್ಲೆವರ್ಡ್ ಬ್ಯೂಟಿ ಪ್ರಾಡಕ್ಟ್‌ಗಳನ್ನು ಉಡುಗೊರೆಯಾಗಿ ನೀಡಿದರೆ ಪ್ರೇಯಸಿಗೆ ಇಷ್ಟವಾಗುವುದರಲ್ಲಿ ಯಾವುದೇ ಡೌಟ್ ಇಲ್ಲ.

* ಚಾಕೊಲೇಟ್ ಜೊತೆ ಗುಲಾಬಿ ಹೂವು ನೀಡಿ : ವಿವಿಧ ಬಗೆಯ ಚಾಕೊಲೇಟ್ ಜೊತೆಗೆ ಗುಲಾಬಿ ಹೂವಿನ ಗುಚ್ಛ ನೀಡುವುದರಿಂದ ಪ್ರೇಯಸಿಯು ಖುಷಿಪಡುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ