ಇನ್ನೇನು ದೀಪಾವಳಿ ಹಬ್ಬ ಹತ್ತಿರದಲ್ಲಿದೆ. ಈ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಲು ಹೆಚ್ಚಿನ ಯುವಕರು ಕುರ್ತಾ ಪೈಜಾಮ ಧರಿಸಲು ಇಷ್ಟಪಡುತ್ತಾರೆ. ಮಾತ್ರವಲ್ಲದೆ ಮದುವೆ ಸಮಾರಂಭ ಅಥವಾ ಇನ್ನಾವುದೇ ಹಬ್ಬಗಳ ಸಂದರ್ಭಗಳಲ್ಲಿಯೂ ಯುವಕರು ಹೆಚ್ಚಾಗಿ ಕುರ್ತಾ ಪೈಜಾಮವನ್ನೇ ಆಯ್ಕೆ ಮಾಡುತ್ತಾರೆ. ಈ ಒಂದು ವಿಶಿಷ್ಟ ಉಡುಗೆ ಎಥ್ನಿಕ್ ಲುಕ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಎಥ್ನಿಕ್ ಲುಕ್ ನೀಡುವ ಕುರ್ತಾದೊಂದಿಗೆ ಯಾವ ರೀತಿಯ ಪಾದರಕ್ಷೆ ಧರಿಸಿದರೆ ಸೂಕ್ತ ಎಂದು ಹಲವರಿಗೆ ತಿಳಿದಿಲ್ಲ. ಆಫೀಸ್ ವೇರ್, ಕ್ಯಾಶುವಲ್ ಮತ್ತು ಸುಟ್ ಡ್ರೆಸ್ಸಸ್ಗಳಿಗೆ ಯುವಕರು ಸುಲಭವಾಗಿ ಪಾದರಕ್ಷೆ ಅಥವಾ ಬೂಟುಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಕುರ್ತಾ ಪೈಜಾಮದ ವಿಷಯಕ್ಕೆ ಬಂದಾಗ ಯಾವ ಪಾದರಕ್ಷೆ ಧರಿಸಿದರೆ ಸೂಕ್ತ ಎಂಬ ಗೊಂದಲದಲ್ಲಿರುತ್ತಾರೆ. ಹೀಗಿರುವಾಗ ಈ ಬಾರಿಯ ಹಬ್ಬದ ಸಂದರ್ಭದಲ್ಲಿ ಕುರ್ತಾ ಧರಿಸುತ್ತಿದ್ದೀರಿ ಎಂದಾದರೆ, ಅದರೊಂದಿಗೆ ಈ ಕೆಲವು ಎಥ್ನಿಕ್ ಪಾದರಕ್ಷೆಗಳನ್ನು ಪ್ರಯತ್ನಿಸಬಹುದು.
ಮದುವೆ ಸಮಾರಂಭಗಳಲ್ಲಿ ಅಥವಾ ಹಬ್ಬಗಳ ಸಂದರ್ಭದಲ್ಲಿ ರಾಯಲ್ ಆಗಿ ಕಾಣಲು ಬಯಸಿದರೆ, ನೀವು ಗ್ರ್ಯಾಂಡ್ ಕುರ್ತಾ ಪೈಜಾಮದ ಜೊತೆಗೆ ಮೋಜ್ರಿ ಬೂಟು ಧರಿಸಬಹುದು. ಈ ಡಿಸೈನರ್ ಬೂಟುಗಳು ಕುರ್ತಾ ಪೈಜಾಮ ಮಾತ್ರವಲ್ಲದೆ ಎಲ್ಲಾ ರೀತಿಯ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಇದು ನಿಮಗೆ ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲದೆ ಇದನ್ನು ಧರಿಸಿ ತುಂಬಾ ಆರಾಮದಾಯಕವಾಗಿ ನಡೆದಾಡಬಹುದು.
ಕುರ್ತಾದೊಂದಿಗೆ ಬಹಳ ಸರಳವಾದ ಪಾದರಕ್ಷೆಯನ್ನು ಧರಿಸಲು ಬಯಸಿದರೆ ನೀವು ಕಂದು ಬಣ್ಣದ ಜೂಟಿ ಟ್ರೈ ಮಾಡಬಹುದು. ಈ ಪಾದರಕ್ಷೆ ನಿಮಗೆ ಕ್ಲಾಸಿ ನೋಟವನ್ನು ನೀಡುವುದಂತು ಖಂಡಿತ. ಅಲ್ಲದೆ ಈ ಶೂಗಳನ್ನು ನೀವು ಸಾಂಪ್ರದಾಯಿಕ ಉಡುಗೆಯಾದ ಪಂಚೆ ಶಲ್ಯದೊಂದಿಗೂ ಧರಿಸಲು ಸೂಕ್ತವಾದ ಆಯ್ಕೆಯಾಗಿದೆ. ನೀವು ಏನಾದರೂ ಮದುವೆ ಸಮಾರಂಭಗಳಲ್ಲಿ ರಾಯಲ್ ಆಗಿ ಕಾಣಲು ಬಯಸಿದರೆ ವಿವಿಧ ಬಣ್ಣದ ವಿವಿಧ ವಿನ್ಯಾಸದ ಜೂಟಿಗಳನ್ನು ಪ್ರಯತ್ನಿಸಬಹುದು.
ಸಾಮಾನ್ಯವಾಗಿ ಮದುವೆಯ ಮುಂಚಿನ ದಿನ ಮೆಹಂದಿ ಕಾರ್ಯಕ್ರಮದಲ್ಲಿ, ಹಬ್ಬಗಳ ಸಂದರ್ಭಗಳಲ್ಲಿ ನೃತ್ಯ ಇನ್ನಿತರ ಪಾರ್ಟಿ ಸಮಾರಂಭಗಳು ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಕುರ್ತಾ ಧರಿಸುತ್ತೀರಿ ಎಂದಾದರೆ ಅದರೊಂದಿಗೆ ನೀವು ಲೆದರ್ ಸ್ಯಾಂಡಲ್ ಧರಿಸಬಹುದು. ಇದು ನಿಮಗೆ ಸ್ಟೈಲಿಶ್ ನೋಟವನ್ನು ನೀಡುವುದು ಮಾತ್ರವಲ್ಲದೆ, ನಿಮಗೆ ಓಡಾಡಲು ತುಂಬಾ ಆರಾಮದಾಯಕವಾಗಿಯೂ ಇರುತ್ತದೆ.
ಇದನ್ನೂ ಓದಿ: ಫ್ಯಾಷನ್ ಜಗತ್ತಿನಲ್ಲೂ ಪ್ರಧಾನಿ ಮೋದಿ ಹವಾ
ಕ್ಯಾಶುವಲ್, ಎಥ್ನಿಕ್ ಅಥವಾ ಫಾರ್ಮಲ್ ಎಲ್ಲಾ ರೀತಿಯ ಉಡುಗೆಗಳೊಂದಿಗೂ ಕೋಲ್ಹಾಪುರಿ ಚಪ್ಪಲ್ ಪರಿಪೂರ್ಣವಾಗಿ ಕಾಣುತ್ತದೆ. ಕುರ್ತಾ ಪೈಜಾಮ ಧರಿಸಿದಾಗ ತುಂಬಾ ಸ್ಟೈಲಿಶ್ ಆಗಿ ಕಾಣಿಸಲು ಬಯಸಿದರೆ ನೀವು ಕೊಲ್ಹಾಪುರಿ ಚಪ್ಪಲ್ ಆಯ್ಕೆ ಮಾಡುವುದು ಹೆಚ್ಚು ಸೂಕ್ತವಾಗಿದೆ. ಇದು ನಿಮಗೆ ರಾಯಲ್ ಲುಕ್ ನೀಡುವುದು ಮಾತ್ರವಲ್ಲದೆ ಇದನ್ನು ಧರಿಸಿ ತುಂಬಾ ಆರಾಮದಾಯಕವಾಗಿ ನಡೆದಾಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: