ರಾತ್ರಿ ಕಣ್ಣು ಮುಚ್ಚಿದರೆ ಯಾರೂ ಆ ತಕ್ಷಣವೇ ನಿದ್ರೆಗೆ ಜಾರುತ್ತರೋ ಅವರಿಗಿಂತ ಸುಖಿಗಳು ಮತ್ತೊಬ್ಬರಿಲ್ಲ. ಆದರೆ ಕಣ್ಣು ಮುಚ್ಚಿದರೆ ಸಾವಿರ ಟೆನ್ಶನ್ ಗಳು, ನಾನಾ ರೀತಿಯ ಯೋಚನೆಗಳು ಬಂದರಂತೂ ನಿದ್ದೆಯೆನ್ನುವುದು ಹತ್ತಿರ ಸುಳಿಯುವುದೇ ಇಲ್ಲ. ಮನುಷ್ಯ ದಿನಕ್ಕೆ ಕನಿಷ್ಠ 8 ರಿಂದ 10 ಗಂಟೆಯಾದರೂ ನಿದ್ರಿಸಿದರೆ ಮಾತ್ರ ಆತನ ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಎಷ್ಟೇ ಕಣ್ಣು ಮುಚ್ಚಿ ನಿದ್ದೆ ಮಾಡಲು ಯತ್ನಿಸಿದರೂ ನಿದ್ದೆ ಬರುವುದೇ ಇಲ್ಲ. ಕಣ್ಣು ಮುಚ್ಚಿದರೆ ನಿದ್ದೆ ಬರಬೇಕು ಎನ್ನುವವರು ಮನೆಯಲ್ಲೇ ಈ ಮನೆ ಮದ್ದನ್ನು ಮಾಡಿಕೊಳ್ಳಬಹುದು.
* ಮಕ್ಕಳಿಗೆ ನಿದ್ದೆ ಬಾರದಿದ್ದರೆ ಬಿಸಿನೀರಲ್ಲಿ ಜಾಯಿಕಾಯಿ ಅಥವಾ ಬಜೆಯನ್ನು ತೇದು ಕೊಟ್ಟರೆ ಚೆನ್ನಾಗಿ ನಿದ್ದೆ ಬರುತ್ತದೆ.
* ನಿದ್ದೆ ಬಾರದಿದ್ದರೆ ಶುದ್ಧ ತುಪ್ಪವನ್ನು ಜಾಯಿಕಾಯಿ ಜೊತೆ ಅರೆದು ಹಣೆಗೆ ಹಚ್ಚಿದರೆ ನಿದ್ದೆ ಬೇಗನೆ ಬರುತ್ತದೆ.
* ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಗಸಗಸೆ ಪಾಯಸ ಸೇವಿಸಿದರೆ ನಿದ್ದೆಯೂ ಬರುತ್ತದೆ.
* ಹಸಿ ಹಲಸಂದಿ ಕಾಳನ್ನು ಬೆಲ್ಲದೊಂದಿಗೆ ಅಗಿದು ತಿಂದರೆ ನಿದ್ರೆ ಚೆನ್ನಾಗಿ ಬರುತ್ತದೆ.
* ಹುರುಳಿಕಾಳು ಮೊಳಕೆ ಸಾರನ್ನು ಸೇವಿಸಿದರೆ ದೇಹವು ತಂಪಾಗುವುದರೊಂದಿಗೆ ನಿದ್ರೆ ಚೆನ್ನಾಗಿ ಬರುತ್ತದೆ.
* ರಾತ್ರಿ ಮಲಗುವುದಕ್ಕೆ ಅರ್ಧ ಗಂಟೆ ಮುಂಚಿತವಾಗಿ ಬಿಸಿಯಾದ ಹಾಲಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ನಿದ್ರೆ ಬರುತ್ತದೆ.
ಇದನ್ನೂ ಓದಿ: ಮಕ್ಕಳ ಜೊತೆಗೆ ಟ್ರಿಪ್ ಹೋಗುವಾಗ ಈ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಟ್ರಿಪ್ ಇನ್ನಷ್ಟು ವಂಡರ್‌ಫುಲ್!
* ನಿದ್ದೆ ಬಾರದಿದ್ದರೆ ಹಾಲಿಗೆ ಸ್ವಲ್ಪ ಕೇಸರಿ ಹಾಕಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
* ಸೌತೆಕಾಯಿ ತಿರುಳನ್ನು ಅಂಗಾಲಿಗೆ ಚೆನ್ನಾಗಿ ಉಜ್ಜಿಕೊಂಡರೂ ನಿದ್ದೆ ಚೆನ್ನಾಗಿ ಬರುವುದರ ಜೊತೆಗೆ ದೇಹದ ತಂಪು ವೃದ್ಧಿಸುವುದು.
* ಸಬ್ಬಕ್ಕಿ ಸೊಪ್ಪನ್ನು ಬಸಿದು ಮಾಡಿದ ಸಾರನ್ನು ಉಪಯೋಗಿಸುತ್ತಿದ್ದರೆ ಚೆನ್ನಾಗಿ ನಿದ್ರೆ ಬರುವುದರ ಮೂಲಕ ಆರೋಗ್ಯವು ಸುಧಾರಿಸುತ್ತದೆ.
* ಪ್ರತಿ ವಾರವೂ ಒಂದೊಂದು ಬಾರಿ ಹರಳಣ್ಣೆಯಲ್ಲಿ ಅಭ್ಯಂಜನ ಸ್ನಾನ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುವುದರ ಜೊತೆಗೆ ದೇಹದ ಉಷ್ಣತೆಯೂ ಕಡಿಮೆಯಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: